ಮೇಷ ರಾಶಿ : ಪ್ರಿಯರೇ  ನಿಮ್ಮ ಆರೋಗ್ಯ ದೃಷ್ಟಿಯಿಂದ ಸ್ವಲ್ಪ ಧನ ವ್ಯಯವಾಗುತ್ತದೆ. ನಿಮ್ಮ ಮಕ್ಕಳ ಸಲುವಾಗಿಯೂ ಹಣ ವ್ಯಯವಾಗುವ ಸಂಭವ ಇದೆ. ಆರೋಗ್ಯದಲ್ಲಿ ಚೇತರಿಕೆಯನ್ನೂ ಕಾಣುತ್ತೀರಿ. ಪ್ರಯಾಣ ಪ್ರಾರಂಭಿಸುವ ಮುನ್ನ ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ ಹೊರಡಿ.

ದೋಷಪರಿಹಾರ : ಕೆಂಪು ಹಸುವಿಗೆ ಧಾನ್ಯವನ್ನು ಕೊಡಿ.

ವೃಷಭ : ಇಂದು  ಸಹೋದರಿಯರು ನಿಮ್ಮಲ್ಲಿ ಅಸಹಕಾರವನ್ನು ತೋರುತ್ತಾರೆ. ನಿಮ್ಮ ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯೂ ಇದೆ. ನಿಮ್ಮ ವ್ಯಾಪಾರದಲ್ಲೂ ಕೂಡ ನಿಮ್ಮ ಪಾಲುದಾರರಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಅಶಾಂತಿ ಎನ್ನಿಸಬಹುದು. 

ದೋಷ ಪರಿಹಾರ : ದುರ್ಗಾ ದೇವಿಗೆ ತುಪ್ಪದ ದೀಪವನ್ನು ಹಚ್ಚಿ.

ಮಿಥುನ : ಆತ್ಮೀಯರೇ ಇಂದು ನಿಮ್ಮ ಮಾತಿನಿಂದ ಕೆಲವರಿಗೆ ಬೇಸರವಾಗಬಹುದು. ನಿಮ್ಮ ಮಾತು ಸ್ವಲ್ಪ ಶಾಂತತೆಯನ್ನು ಬೆರೆತಿರಲಿ. ನಿಮ್ಮ ರಕ್ತಕೆಟ್ಟು ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನಿಮ್ಮ ಮನಸ್ಸು ಸ್ವಲ್ಪ ಖಿನ್ನತೆಗೆ ಒಳಗಾಗಲಿದೆ. ಸಾಧ್ಯೆವಾದರೆ ಮಹಾನಾರಾಯಣೋಪನಿಷತ್ತನ್ನು ಪಠಿಸಿ.  ಅಥವಾ ಪಾರಾಯಣ ಮಾಡಿಸಿ.    

ದೋಷ ಪರಿಹಾರ : ನಾರಾಯಣ ಮಂತ್ರ ಅಥವಾ ಸ್ಮರಣೆ ಮಾಡಿ

ಕಟಕ : ಇಂದು ನಿಮ್ಮ ಪಾಲಿಗೆ ಮಕ್ಕಳೇ ಶತ್ರುಗಳು. ನಿಮ್ಮನ್ನು ಕಾಡಿ-ನಿಮ್ಮ ಮನಸ್ಸಿಗೆ ನೋವುಂಟುಮಾಡುತ್ತಾರೆ. ಸಾಧ್ಯವಾದರೆ ಅವರಿಂದ ದೂರವಿರಿ ಇಲ್ಲ ಅವರನ್ನು ಹೆಚ್ಚು ಮಾತನಾಡಿಸಬೇಡಿ. ಆದರೆ ಕೆಲವರು ತಾಯಿಯಲ್ಲಿ ಗೌರವವಿರುವವರು ಅಪವಾದ ತರುವ ಸಾಧ್ಯತೆ ಇದೆ. ಆದಷ್ಟು ನಿಮ್ಮ ಕಾರ್ಯಗಳನ್ನು ಮಾಡುವಾಗ ಸಮಾಧಾನ ಹಾಗೂ ಜಾಘ್ರತೆ ಇರಲಿ.
  
ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಕ್ಷೀರ ಸಮರ್ಪಣೆ ಮಾಡಿ. 

ಸಿಂಹ : ಇಂದು ನಿಮ್ಮ ತಾಯಿ ಆರೋಗ್ಯದಲ್ಲಿ ಸ್ವಲ್ಪ  ವ್ಯತ್ಯಯವಾಗಬಹುದು,ನೀವು ವಾಹನ ಸಂಚಾರದಲ್ಲಿರುವಾಗ ಸ್ವಲ್ಪ ತೊಂದರೆಯೂ ಆಗಬಹುದು, ದ್ವಚಕ್ರವಾಹನ ಚಲಿಸುವಾಗ ಬಹಳ ಎಚ್ಚರವಿರಲಿ. ನಿಮ್ಮ ಮಾತಿನಿಂದ ಬಾಂಧವ್ಯ ಹಾಳಾಗಲಿದೆ. ಎಚ್ಚರವಹಿಸಿ.

ದೋಷ ಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ. ಆರೋಗ್ಯ ಇಲ್ಲದವರು ಶಿವ ದೇವಸ್ಥಾನಕ್ಕೆ 1 ಕೆ.ಜಿ ಗೋಧಿಯನ್ನು ಸಮರ್ಪಣೆ ಮಾಡಿ.

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಸಹೋದರಿಯಿಂದ ಸ್ವಲ್ಪ ಕಿರಿಕಿರಿಯಾಗಲಿದೆ. ನಿಮಗೆ ಬರುವ ಲಾಭದಲ್ಲಿ ಸಹೋದರಿಯರು ಪಾಲುಕೇಳಬಹುದು, ಅಷ್ಟೇ ಅಲ್ಲ ನಿಮ್ಮ ಧನ ಹೆಚ್ಚಾಗುವ ಸಾಧ್ಯತೆಯೂ ಇದೆ. ಉತ್ತಮ ದಿನವಾಗಿರಲಿದೆ.
  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ.

ತುಲಾ :  ಆತ್ಮೀಯರೇ ನಿಮ್ಮ ಕುಟುಂಬದವರಿಗಾಗಿ ಹಣ ವ್ಯಯ, ದೇವರ ಕಾರ್ಯದಲ್ಲಿ ಭಾಗಿ, ಉತ್ತಮರ ಸಹವಾಸ, ಉನ್ನತ ಶಿಕ್ಷಣ ಕುರಿತಾದ ಚಿಂತನೆ. ಹಿರಿಯರ ಸಹಕಾರ ದೊರೆಯಲಿದೆ. ನಿಮ್ಮ ಹೆಂಡತಿಯಿಂದ ಉದ್ಯೋಗದಲ್ಲಿ ಸಹಕಾರ. 

ದೋಷ ಪರಿಹಾರ : ಲಕ್ಷ್ಮೀ ಆರಾಧನೆ ಮಾಡಿ

ವೃಶ್ಚಿಕ : ಆತ್ಮೀಯರೇ, ನಿಮ್ಮ ಮನಸ್ಸಿಗೆ ಗಾಢವಾದ ಚಿಂತೆ ಕಾಡುತ್ತದೆ. ಸಹೋದರರ ಸಹಕಾರವಿದ್ದರೂ ಕಾರ್ಯ ಸಾಧನೆಯಲ್ಲಿ ಸಮಾಧಾನವಿರುವುದಿಲ್ಲ. ಅನ್ಯರಿಂದಾಗಿ ನಿಮ್ಮ ಹಣ ವ್ಯಯವಾಗಲಿದೆ. ಅಲ್ಪ ಲಾಭ - ಹೆಚ್ಚು ಪ್ರಮಾಣದ ವ್ಯಯವಿದೆ.

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ಹಾಲು-ಬೆಲ್ಲ ಸಮರ್ಪಣೆ ಮಾಡಿ.

ಧನಸ್ಸು : ಆತ್ಮೀಯರೇ ಇಂದು ನಿಮ್ಮ ಆರೋಗ್ಯದಲ್ಲೂ ಕೊಂಚ ವ್ಯತ್ಯಯ ಕಾಣಲಿದೆ. ನಿಮ್ಮ ಹೃದಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕಾರ್ಯದಲ್ಲಿ ಹೆಚ್ಚು ಒತ್ತಡವಿರಲಿದೆ. ಶಿವ ದೇವಸ್ಥಾನಕ್ಕೆ ಹೋಗಿಬನ್ನಿ. ಬಿಲ್ವಾರ್ಚನೆ ಮಾಡಿಸಿ.

ದೋಷ ಪರಿಹಾರ : ಶಿವಾಯನಮ: ಎಂಬ ಪಂಚಾಕ್ಷರಿ ಮಂತ್ರ 108 ಬಾರಿ ಪಠಿಸಿ

ಮಕರ :  ಆತ್ಮೀಯರೇ ನಿಮ್ಮ ಸಂಗಾತಿಯಿಂದ ವ್ಯಾಪಾರದಲ್ಲಿ ಲಾಭ, ನೀರಿನ ವ್ಯಾಪಾರಿಗಳಿಗೆ ಲಾಭದ ದಿನ ಉದ್ಯೋಗದಲ್ಲಿ ಉತ್ತಮ ಪ್ರಗತಿ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತೀರಿ. ಹಿರಿಯ ಜೀವವೊಂದು ನಿಮ್ಮನ್ನು ರಕ್ಷಣೆ ಮಾಡುತ್ತದೆ.
  
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ದೀಪ ಸಮರ್ಪಣೆ ಮಾಡಿದಲ್ಲಿ ನಿಮ್ಮ ಸಮಸ್ಯೆ ಪರಿಹಾರ.

ಕುಂಭ : ಆತ್ಮೀಯರೇ ಇಂದು ನಿಮ್ಮ  ಹಾಗೂ ನಿಮ್ಮ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಿ ಮಾನಸಿಕ ಬೇಸರ ಅನುಭವಿಸುವ ಸಾಧ್ಯತೆ ಇದೆ. ಹೆಚ್ಚುಹೊತ್ತು ಸಂಭಾಷಣೆಯಲ್ಲಿ ಕಾಲ ವ್ಯಯವಾಗುತ್ತದೆ. ನಿಮ್ಮ ಆರೋಗ್ಯ ಕ್ಷೀಣವಾಗಲೂ ಬಹುದು. ಆಹಾರದಲ್ಲಿ ಎಚ್ಚರವಾಗಿರಿ.

ದೋಷ ಪರಿಹಾರ :  ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಅಕ್ಕಿ ಹಾಗೂ ಬೆಲ್ಲ ಸಮರ್ಪಣೆ ಮಾಡಿ.
  
ಮೀನ : ಸ್ನೇಹಿತರೆ ಇಂದು ನಿಮ್ಮ ಮಕ್ಕಳಿಂದ ಆತಂಕ ಹೆಚ್ಚಾಗಬಹುದು, ನಿಮ್ಮ ಮಕ್ಕಳಿಗೆ ಕೆಟ್ಟ ಸ್ನೇಹಿತರ ಸಹವಾಸವಾಗಬಹುದು. ನಿಮ್ಮ ಪ್ರತಿಭೆ ಅರಳಲಿದೆ. ಉತ್ತಮ ಅವಕಾಶ ದೊರೆಯಲಿದೆ. ನಿಮ್ಮ ಪ್ರತಿಭೆಗೆ ವಿಶೇಷ ಮನ್ನಣೆಯೂ ಸಿಗಲಿದೆ. 
  
ದೋಷ ಪರಿಹಾರ : ಹಸುವಿಗೆ ಅಕ್ಕಿ-ಬೆಲ್ಲವನ್ನು ಸಮರ್ಪಣೆ ಮಾಡಿ.