ಮಂಗಳದಿನ ಆರಂಭಿಸುವ ಮುನ್ನ ನಿಮ್ಮ ರಾಶಿ ಫಲಗಳನ್ನು ನೋಡಿ ಬಿಡಿ

July 17 horoscope
Highlights

ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಚಂದ್ರ ಸಹಿತನಾಗಿ ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮಗೆ ಮಕ್ಕಳಿಂದ ಅದರಲ್ಲೂ ಹೆಣ್ಣುಮಕ್ಕಳಿಂದ ಕಿರಿಕಿರಿ. ಶಾಲೆಯಲ್ಲಿ ನಿಮಗೆ ಬೇಸರವಾಗುವಂಥ ಸಮಸ್ಯೆ ಮಾಡಿಕೊಳ್ಳುತ್ತಾರೆ. ಹಿರಿಯ ಮಕ್ಕಳಾದರೆ ಸಂತಾನ ಸಮಸ್ಯೆಯಿಂದ ಬಳಲುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ಮಿತ್ರರಿಗಾಗಿ ಧನವ್ಯಯ.

ದೋಷಪರಿಹಾರ : ಸೂರ್ಯನ ಉಪಾಸನೆ ಮಾಡಿ.

ವೃಷಭ : ನಿಮ್ಮ ರಾಶಿಯ ಅಧಿಪತಿ ಚಂದ್ರ ಸಹಿತನಾಗಿದ್ದಾನೆ. ಸ್ವಲ್ಪ ಮಾನಸಿಕ ಸಮಸ್ಯೆ ಕಾಡುತ್ತದೆ. ಅಂದುಕೊಂಡ ಕೆಲಸ ಆಗಲಿಲ್ಲವಲ್ಲಾ ಎಂಬ ಬೇಸರ ನಿಮ್ಮನ್ನು ಕಾಡುತ್ತದೆ. ಸಹೋದರರಿಗೆ ಅನುಕೂಲವಾತಾವರಣ, ಸಾಧಾರಣದಿನವಾಗಿರಲಿದೆ.

ದೋಷ ಪರಿಹಾರ : ಶುಕ್ರನ ಆರಾಧನೆ ಮಾಡಿ ಇಲ್ಲ ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ.

ಮಿಥುನ : ಇಂದು ಸ್ವಂತ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಮುಖದಲ್ಲಿ ಮಚ್ಚೆ - ಅಥವಾ ಗಾಯಗಳಾಗುವ ಸಾಧ್ಯತೆ ಇದೆ. ಸಹೋದರಿಯರ ಸಹಾಯದಿಂದ ಧನ ಸಹಾಯ, ಹಾಗೆಯೇ ಧನ ವ್ಯಯವೂ ಇದೆ. ಮಕ್ಕಳಿಂದ ಸಂತಸ.  

ದೋಷ ಪರಿಹಾರ : ಗುರು ದರ್ಶನ ಮಾಡಿ

ಕಟಕ : ಇಂದು ಧನಲಾಭ ಸ್ತ್ರೀಯರಿಗಾಗಿ ಸ್ವಲ್ಪ ಧನ ವ್ಯಯ ಮಾಡಬೇಕಾದ ಪ್ರಸಂಗವೂ ಎದುರಾಗುತ್ತದೆ. ನಿಮ್ಮ ಬುದ್ಧಿಶಕ್ತಿಯಿಂದ ನಿಮ್ಮ ನಿಮ್ಮ ಯೋಜನೆ ಸಾಕಾರಗೊಳ್ಳುತ್ತದೆ. ಸ್ವಲ್ಪ ಹೊಟ್ಟೆ ಭಾಗ ಅಥವಾ ಕಿಬ್ಬೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆಹಾರ ವ್ಯತ್ಯಯವಾಗುವ ಸಾಧ್ಯತೆ ಇದೆ. ಎಚ್ಚರವಹಿಸಿ. 
  
ದೋಷ ಪರಿಹಾರ : ಶಿವ-ಶಕ್ತಿಯರ ಆರಾಧನೆ ಮಾಡಿ

ಸಿಂಹ : ಭೂರಿ ಭೋಜನ ಸೇವಿಸುವ ಸಾಧ್ಯತೆ ಇದೆ. ನಿಮ್ಮ ಅಣ್ಣಂದಿರಿಂದ ಸಹಾಯವಾಗುತ್ತದೆ. ಇಂದು ಮಕ್ಕಳು ನಿಮ್ಮ ತಲೆಬಿಸಿ ಮಾಡುತ್ತಾರೆ. ಹೊಟ್ಟೆ ಭಾಗದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. 

ದೋಷ ಪರಿಹಾರ : ಶಿವನಿಗೆ ಜಲಾಭಿಷೇಕ ಮಾಡಿಸಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ತಂದೆಯಿಂದ ಸಹಕಾರ. ದೊಡ್ಡ ಪ್ರಮಾಣದಲ್ಲಿ ಧನ ವ್ಯಯವಾಗುವ ಸಾಧ್ಯತೆ ಇದೆ. ವಾಹನ ಜಖಂ ಆಗಲಿದೆ. ಪ್ರಯಾಣ ಮಾಡುವಾಗ ಎಚ್ಚರ ಇರಲಿ.
  
ದೋಷ ಪರಿಹಾರ : ಶನಿ ದೇವರ ಸ್ಮರಣೆ ಮಾಡಿ

ತುಲಾ :  ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಉತ್ತಮ ಸಹಕಾರ, ಲಾಭದ ದಿನವೂ ಹೌದು. ಆದರೆ ಓರ್ವ ಸ್ತ್ರೀಯಿಂದ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಓರ್ವ ಪುರುಷನಿಂದ ಕಿರಿಕಿರಿ.

ದೋಷ ಪರಿಹಾರ : ಶ್ರೀನಿವಾಸ ದರ್ಶನ ಮಾಡಿ

ವೃಶ್ಚಿಕ : ಇಂದು ನಿಮಗೆ ಓರ್ವ ಸ್ತ್ರೀಯಿಂದ ಉದ್ಯೋಗ ಲಾಭ, ಹಿರಿಯರಿಂದ ಉಡುಗೊರೆ ಸಿಗಲಿದೆ. ಆದರೆ ನಿಮ್ಮ ಹಣ ಕಳುವಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ. ಅಣ್ಣ-ತಮ್ಮಂದಿರು ಸಹಾಯ ಮಾಡುತ್ತಾರೆ. 

ದೋಷ ಪರಿಹಾರ : ಶನಿ ದೇವರ ಆರಾಧನೆ ಮಾಡಿ. 

ಧನಸ್ಸು : ಆತ್ಮೀಯರೇ ಇಂದು ನಿಮ್ಮ ಶರೀರದಲ್ಲಿ ಸ್ವಲ್ಪ ಆಯಾಸ. ಆದರೆ ವ್ಯಾಪಾರದಲ್ಲಿ ಲಾಭವನ್ನು ಪಡೆಯಲಿದ್ದೀರಿ. ಆರೋಗ್ಯ ಸಮಸ್ಯೆಯಿಂದಾಗಿ ನಿಮ್ಮಲ್ಲಿ ಆಲಸ್ಯ ಮೈಗೂಡಿಕೊಳ್ಳಲಿದೆ.

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಮಕರ :  ಆತ್ಮೀಯರೇ ಇಂದು ತಂದೆ ನಿಮ್ಮ ಸಹಾಯಕ್ಕೆ ಬರುತ್ತಾರೆ. ಸ್ತ್ರೀಯರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಂಡತಿಯಿಂದ ಸಹಕಾರ. ಮನೆಯಲ್ಲಿ ಸ್ವಲ್ಪ  ಗೊಂದಲ ವಾತಾವರಣ. ತಾಳ್ಮೆ ಕಳೆದುಕೊಳ್ಳುವುದು ಬೇಡ.
  
ದೋಷ ಪರಿಹಾರ : ನವಗ್ರಹ ದೇವರಿಗೆ 9 ಪ್ರದಕ್ಷಿಣೆ ಹಾಕಿ.

ಕುಂಭ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ದಾಂಪತ್ಯ ಭಿನ್ನಾಭಿಪ್ರಾಯ ಎದುರಾಗುತ್ತದೆ. ತೀವ್ರ ಸಮಸ್ಯೆ ಮಾಡಿಕೊಳ್ಳಬೇಡಿ. ಸ್ವಲ್ಪ ಮಟ್ಟಿಗೆ ಸಮಾಧಾನವಿರಲಿ. ತಾಳ್ಮೆ ನಿಮ್ಮನ್ನು ಕಾಪಾಡಬೇಕು. ನಿಮ್ಮ ಗೆಳೆಯರಲ್ಲೂ ಕೂಡ ಅದರಲ್ಲೂ ಸ್ತ್ರೀ ಗೆಳಯರು ನಿಮ್ಮ ಮೇಲೆ ಕೋಪಿಸಿಕೊಳ್ಳುವ ಸಾಧ್ಯತೆ ಇದೆ.   

ದೋಷ ಪರಿಹಾರ : ಚಂದ್ರನ ಉಪಾಸನೆ ಮಾಡಿ. ಇಲ್ಲಾ ಅನ್ನಪೂರ್ಣೇಶ್ವರಿ ದರ್ಶನ ಮಾಡಿ. 
  
ಮೀನ : ಸ್ನೇಹಿತರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ತೊಡಕು ಕಾಣಬಹುದು. ನಿಮ್ಮ ತಂದೆ ನಿಮ್ಮ ಆರೋಗ್ಯ ಚೇತರಿಕೆಗೆ ಕಾರಣರಾಗುತ್ತಾರೆ. ನಿಮ್ಮ ಸಂಗಾತಿಯ ಸಹಾಯವೂ ಇದೆ. ವಿದ್ಯಾರ್ಥಿಗಳೀಗೆ ಉತ್ತಮ ದಿನ.   
  
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ 

 

loader