ಕಾರವಾರ[ಮೇ. 26] ಶನಿದೋಷ ನಿವಾರಣೆಗೆ ಜೆಡಿಎಸ್ ನಾಯಕ ಆನಂದ್ ಅಸ್ನೋಟಿಕರ್ 50 ಲಕ್ಷ ರೂ. ಮೌಲ್ಯದ ಉಂಗುರ ಧರಿಸಿದ್ದಾರೆ. ಇದು ಕಾಶ್ಮೀರದ ನೀಲ ಮಣಿ ಉಂಗುರವಾಗಿದೆ.

ಒಂದು ಕಾಲದಲ್ಲಿ ಬಿಜೆಪಿಯಿಂದ ಸಚಿವರಾಗಿದ್ದ  ಆನಂದ್ ಅಸ್ನೋಟಿಕರ್ ಬಿಜೆಪಿಯಿಂದ ಸಚಿವರಾಗಿದ್ದವರು. ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಜೆಡಿಎಸ್ ಸೇರಿಕೊಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ವಿರುದ್ಧ ಸೆಣೆಸಲು ನಿಂತಿದ್ದರು.

ಸತತ ಸೋಲೋ ಅಥವಾ ಇನ್ನಾವುದೋ ಕಾರಣವೋ ಗೊತ್ತಿಲ್ಲ. ಅಸ್ನೋಟಿಕರ್ ಅವರು ನೀಲಮಣಿ ಉಂಗುರ ಧರಿಸಿದ್ದಾರೆ.  ಶನಿದೋಷ ನಿವಾರಣೆಗೆ ಈ ಉಂಗುರ ಧಾರಣೆ ಮಾಡಿದ್ದಾರೆ ಎನ್ನಲಾಗಿದೆ.