Asianet Suvarna News Asianet Suvarna News

2020 ರ ನ್ಯೂಮರಾಲಜಿ; ನಿಮ್ಮ ಸಂಖ್ಯೆ ಯಾವುದು? ಹೀಗೆ ತಿಳಿಯಿರಿ!

ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (ನ್ಯೂಮರಾಲಜಿ). ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಲಾಗುತ್ತದೆ. ಇದಕ್ಕೂ ಮುನ್ನ ನೀವು 2020 ನೇ ವರ್ಷದ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳಿ. 

Here is 2020 numerology know your astrology by these numbers
Author
Bengaluru, First Published Jan 1, 2020, 3:41 PM IST

ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (ನ್ಯೂಮರಾಲಜಿ). ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಲಾಗುತ್ತದೆ. ಇದಕ್ಕೂ ಮುನ್ನ ನೀವು 2020 ನೇ ವರ್ಷದ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳಬೇಕು.

2020=2+0+2+0=೪ ಅಂದರೆ, ಈ ವರ್ಷದ ಸಂಖ್ಯೆ 4. ಈಗ ನಿಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಲು ಮಾಡಬೇಕಾದ ವಿಧಾನ, ನಿಮ್ಮ ಜನ್ಮ ದಿನಾಂಕ + ಜನನ ತಿಂಗಳು + 4 ಸೇರಿಸಿ. ಆಗ ಬರುವ ಫಲಿತಾಂಶವನ್ನು ಒಂದಂಕಿಗಿಳಿಸಿ (ಆ ಸಂಖ್ಯೆ 1 ರಿಂದ 9 ಅಂಕಿಯ ಮಧ್ಯದಲ್ಲಿರಬೇಕು). ಉದಾಹರಣೆಗೆ ನೀವು ಜುಲೈ 21 ರಂದು ಜನಿಸಿದ್ದರೆ, 21+ 07 + 4= 32 (3+2)= 5 ಅಂದರೆ ನಿಮ್ಮ ಸಂಖ್ಯೆ 5. 

1. ಬಾಸ್ ಜೊತೆ ಕಿರಿಕ್ ಬೇಡ
ಈ ವರ್ಷ ನೀವು ವೃತ್ತಿ ಜೀವನದಲ್ಲಿ ಏರಿಳಿತವನ್ನು ಕಾಣಲಿದ್ದೀರಿ. ಒಂದರಲ್ಲಿ ಯಶಸ್ಸು ಸಿಕ್ಕರೆ ಮತ್ತೊಂದರಲ್ಲಿ ಸೋಲು ಎದುರಾಗಲಿದೆ. ನಿಮ್ಮ ಬಾಸ್ ಮತ್ತು ಹಿರಿಯ ಉದ್ಯೋಗಿಗಳ ಜೊತೆ ಕಿರಿಕ್ ಆಗುವ ಸಾಧ್ಯತೆ ಹೆಚ್ಚಿದೆ. ಆದಷ್ಟು ಜಾಣ್ಮೆಯಿಂದ ವ್ಯವಹರಿಸುವುದನ್ನು ರೂಢಿಸಿಕೊಳ್ಳಿ.

ನೀವು ವಿವಾಹಿತರಾಗಿದ್ದರೆ ಸಂಗಾತಿ ಜೊತೆ ಎದುರಾಗಲಿರುವ ಚಿಕ್ಕಪುಟ್ಟ ಸಮಸ್ಯೆಗಳನ್ನು ಪರಸ್ಪರ ಮಾತನಾಡಿಕೊಂಡು ಪರಿಹಾರ ಕಂಡುಕೊಳ್ಳಿ. ಚಿಕ್ಕ ಸಮಸ್ಯೆ ದೊಡ್ಡದಾಗದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ತಾವು ಬಯಸಿದ ಕೊರ್ಸ್‌ಗೆ ಪ್ರವೇಶ ಸಿಗಲಿದೆ. ಸಂಬಂಧಿಕರಿಗೆ ಹಣಕಾಸಿನ ನೆರವು ನೀಡಲು ಹೋಗಿ ನೀವು ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳಲಿದ್ದೀರಿ. ಮೂಳೆ ಮತ್ತು ಹಲ್ಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಾಗಲಿದೆ.

ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

2. ಗುಟ್ಟು ಬಾಯ್ಬಿಡಬೇಡಿ

ಹಲವು ವರ್ಷಗಳಿಂದ ಎದುರು ನೋಡುತ್ತಿದ್ದ ಬದಲಾವಣೆ ಈ ವರ್ಷ ನಿಮಗೆ ಸಿಗಲಿದೆ. ಧೈರ್ಯವಾಗಿ ಮುನ್ನುಗ್ಗಬಹುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹಿರಿಯ ಸಹೋದ್ಯೋಗಿಗಳು ಅನಗತ್ಯ ಕಿರುಕುಳ ನೀಡಲಿದ್ದು, ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದ್ದಾರೆ.

ಯಾವುದೇ ಕಾರಣಕ್ಕೂ ಅಕ್ಕ ಪಕ್ಕ ಕುಳಿತುಕೊಳ್ಳುವ ಹಿರಿಯ ಸಹೋದ್ಯೋಗಿಗಳನ್ನು ನಂಬಿ ಆಫೀಸಿನ ಗೌಪ್ಯ ವಿಷಯಗಳನ್ನು ಬಾಯ್ಬಿಡಬೇಡಿ. ನೀವು ವಿವಾಹಿತರಾಗಿದ್ದರೆ ಸಂಗಾತಿ ಜೊತೆ ವಾಯುವಿಹಾರ, ಪ್ರವಾಸಕ್ಕೆ ಹೋಗಲು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಿದ್ದೀರಿ. ಹಲವು ವರ್ಷಗಳ ಹಿಂದೆ ತಪ್ಪು ತಿಳಿವಳಿಕೆಯಿಂದ ಸಂಬಂಧ ಕಡಿದುಕೊಂಡಿದ್ದ ಸ್ನೇಹ ಮತ್ತೆ ಒಂದಾಗಲಿದೆ. ವಿದ್ಯಾರ್ಥಿಗಳು ಪ್ರೇಮದ ಬಲೆಗೆ ಬೀಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

3. ನೌಕರಿ ಪ್ರಗತಿ, ಕುಟುಂಬದಲ್ಲಿ ಕಲಹ

ಸಂಖ್ಯಾಶಾಸ್ತ್ರದ ಪ್ರಕಾರ ನಿಮಗೆ ಈ ವರ್ಷ ಉದ್ಯೋಗದಲ್ಲಿ ಉನ್ನತಿ, ಕುಟುಂಬದಲ್ಲಿ ಕಲಹವನ್ನು ನೋಡಬೇಕಾಗುತ್ತದೆ. ನೀವು ಮಾಡುವ ಕೆಲಸಕ್ಕೆ ನಿಮ್ಮ ಬಾಸ್ ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಉದ್ಯೋಗ ಬದಲಾವಣೆ ಆಲೋಚನೆಗಳು ನಿಮಗೆ ಬರಲಿದ್ದು, ಏಪ್ರಿಲ್ 25 ರ ನಂತರ ಉತ್ತಮ ಅವಕಾಶಗಳು ಸಿಗಲಿವೆ. ವಿವಾಹವಾದ ಜೋಡಿಯ ನಡುವೆ ಭಿನ್ನಾಭಿಪ್ರಾಯಗಳು ಎದುರಾಗಲಿವೆ. ಇಂತಹ ಸಂದರ್ಭದಲ್ಲಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ.

ಇಲ್ಲದಿದ್ದರೇ ಸಂಬಂಧದಲ್ಲಿ ಬಿರುಕು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಇರಲಿದ್ದು, ಉನ್ನತ ಮಟ್ಟದ ಕೋಸ್ಗೆರ್ ಪ್ರವೇಶ ಸಿಗಲಿದೆ. ವ್ಯಾಪಾರಸ್ಥರಿಗೆ ಮಾರ್ಚ್ 23 ರ ನಂತರ ಲಾಭಾಂಶ ಏರಿಕೆಯಾಗಲಿದೆ. 30 ವರ್ಷ ಮೇಲ್ಪಟ್ಟವರು ಮಧುಮೇಹ ಕಾಯಿಲೆ ಬಗ್ಗೆ ಜಾಗೃತರಾಗಿರಬೇಕು.

ಬ್ರೇಕಪ್ ಬಳಿಕ ಸೇಡು ಸಾಧಿಸುವ ರಾಶಿಯವರಿವರು!

4. ವಿದೇಶ ಪ್ರಯಾಣ

ನಿಮಗಿದು ಅದೃಷ್ಟದ ವರ್ಷ, ವೃತ್ತಿ ಜೀವನದಲ್ಲಿ ಹೊಸ ಎತ್ತರಕ್ಕೆ ಏರಲಿದ್ದೀರಿ. ಕೆಲವರಿಗೆ ಉದ್ಯೋಗ ಸಂಬಂಧಿತ ವಿದೇಶಿ ಪ್ರಯಾಣದ ಯೋಗವಿದೆ. ನೀವು ಮಾಡುವ ಕೆಲಸ ಕಾರ್ಯಗಳು ಪ್ರಶಂಸೆಗೆ ಒಳಗಾಗಲಿವೆ. ಸ್ವಂತ ಉದ್ಯೋಗ ಮಾಡುವ ಯೋಚನೆ ಉಳ್ಳವರು ಧೈರ್ಯದಿಂದ ಮುಂದೆ ನುಗ್ಗಿ, ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ.

ಸಂಸಾರದಲ್ಲಿ ಮಾತ್ರ ಕಲಹ ನೋಡುವ ದುರದೃಷ್ಟ ನಿಮ್ಮದಾಗಲಿದೆ. ಮೂರನೇ ವ್ಯಕ್ತಿಯ ಪ್ರವೇಶವೇ ಕಲಹಕ್ಕೆ ಕಾರಣವಾಗಲಿದೆ. ಸಮಸ್ಯೆಗೆ ಪರಿಹಾರವೆಂದರೆ ಪರಸ್ಪರ ಸಂವಹನದಿಂದ ಪರಿಹರಿಸಿಕೊಳ್ಳುವುದು. ಇಲ್ಲದಿದ್ದರೇ ಸಂಬಂಧವೇ ಕಡಿದುಹೋಗಲಿದೆ. ವಿದ್ಯಾರ್ಥಿಗಳಾಗಿದ್ದಲ್ಲಿ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲಿದ್ದೀರಿ. 

5. ಸಿಹಿ, ಕಹಿ ಎರಡೂ ನೀಡುವ ವರ್ಷ

ನಿಮ್ಮ ಜೀವನದಲ್ಲಿ ಸಿಹಿ ಮತ್ತು ಕಹಿ ಎರಡನ್ನೂ ಅನುಭವಿಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಹಿರಿಯರಿಂದ ಸಂಪೂರ್ಣ ಸಹಕಾರ ಸಿಗಲಿದೆ. ಕಠಿಣ ಶ್ರಮ, ವಿಭಿನ್ನ ಯೋಚನೆ ಹಿರಿಯರಿಂದ ಪ್ರಶಂಸೆಗೆ ಪಾತ್ರವಾಗಲಿದ್ದು,
ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಹುದ್ದೆಗೆ ಏರಲಿದ್ದೀರಿ. ಮದುವೆಯಾದವರಿಗೆ ಕೆಲಸದ ಒತ್ತಡ ನಿಮ್ಮನ್ನು ಕುಟುಂಬದಿಂದ ದೂರ ಇರುವಂತೆ ಮಾಡಲಿದೆ.

ಹೀಗಾಗಿ ಸಂಗಾತಿ ಮತ್ತು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಪ್ರತಿದಿನ ಸಂವಾದ ನಡೆಸಲು ಪ್ರತ್ಯೇಕ ಸಮಯ ನಿಗದಿಮಾಡಿಕೊಳ್ಳಿ. ಆಗಾಗ ಕುಟುಂಬದ ಜೊತೆ ಪ್ರವಾಸದ ಯೋಜನೆ ಹಾಕಿಕೊಳ್ಳಿ. ಇದರಿಂದ ನಿಮಗೆ ಕೆಲಸದ ಒತ್ತಡದಿಂದ ಬಿಡುವು ಸಿಗಲಿದೆ. 

2020ಕ್ಕೆ ಲಕ್ ಹೊತ್ತು ತರುವ ಗಿಫ್ಟ್ ಗಳು ಯಾವುವು ಗೊತ್ತಾ?

6. ಸ್ತ್ರೀಯರಿಂದ ಸಂಕಷ್ಟ ನಿವಾರಣೆ

ನಿಮಗೆ ಮಹಿಳೆಯರೇ ಆಪತ್ಭಾಂದವರು. ಹೀಗಾಗಿ ಮಹಿಳಾ ಸಹೋದ್ಯೋಗಿಗಳ ಜೊತೆ ಸೌಹಾರ್ದತೆಯಿಂದ ನಡೆದುಕೊಳ್ಳಿ. ಕಷ್ಟಕಾಲದಲ್ಲಿ ಅವರು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದ್ದು, ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವಿವಾಹಿತರು ತಮ್ಮ ಪತ್ನಿಯೊಂದಿಗೆ ಸಂತೋಷದ ಜೀವನ ಸಾಗಿಸಲಿದ್ದೀರಿ, ಕೆಲವು ಚಿಕ್ಕಪುಟ್ಟ ತಪ್ಪು ಕಲ್ಪನೆಗಳನ್ನು ಮುಕ್ತವಾಗಿ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ. ಪ್ರೀತಿಯಲ್ಲಿ ಬಿದ್ದಿರುವ ಯುವಕ, ಯುವತಿಯರಿಗೆ ಮೇ ನಂತರ ಪ್ರೇಮ ಕೋರಿಕೆ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಾಗಿದ್ದಲ್ಲಿ ಖರ್ಚಿನ ಮೇಲೆ ನಿಗಾ ಇಟ್ಟುಕೊಳ್ಳಿ, ಅನವಶ್ಯಕ ದುಂದು ವೆಚ್ಚ ಮಾಡಬೇಡಿ. 

7. ದಿಢೀರ್ ನಿರ್ಧಾರ ಬೇಡ

ಹಲವಾರು ಏರಿಳಿತಗಳನ್ನು ನೋಡಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಉದ್ಯೋಗ ಬದಲಾಯಿಸುವ ಒತ್ತಡಗಳು ಎದುರಾಗಲಿವೆ. ಆದಷ್ಟು ತಾಳ್ಮೆ ಮತ್ತು ಶಾಂತತೆಯನ್ನು ಉದ್ಯೋಗ ಕ್ಷೇತ್ರದಲ್ಲಿ ಕಾಯ್ದುಕೊಳ್ಳಬೇಕು. ದಿಢೀರ್ ನಿರ್ಧಾರಗಳನ್ನು ಕೈಗೊಳ್ಳಲು ಹೋಗಲೇ ಬೇಡಿ. ವಿವಾಹಿತರಾಗಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದಷ್ಟು ಪರಸ್ಪರ ಮಾತುಕತೆ ಮೂಲಕ ನಿಮ್ಮ ನಡುವೆ ಇರುವ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು. ಮೂರನೇ ವ್ಯಕ್ತಿಯ ಪ್ರವೇಶ ಆಗದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಕೆಲವರು ಅರ್ಧಕ್ಕೆ ಕೋರ್ಸ್ ಬಿಟ್ಟು ಮತ್ತೊಂದು ಕೋರ್ಸ್ ಪ್ರವೇಶ ಪಡೆಯುವ ಸಾಧ್ಯತೆಯೂ ಇದೆ. ಇದು ನಿಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಲಿದೆ. 

8. ತಾಳ್ಮೆ ರೂಢಿಸಿಕೊಳ್ಳಿ

ಈ ವರ್ಷ ನಿಮಗೆ ಪ್ರಯೋಜನಕಾರಿಯಾಗಿರುವುದಿಲ್ಲ. ನಿಮ್ಮಲ್ಲಿ ಕೆಲವರು ಒಂದಾದ ನಂತರ ಒಂದು ಸಮಸ್ಯೆಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಯಾವುದಕ್ಕೂ ಧೈರ್ಯ ಕಳೆದುಕೊಳ್ಳದೇ ಮುಂದೆ ನುಗ್ಗಿ, ಕಷ್ಟಪಟ್ಟು ದುಡಿಯಿರಿ. ಉದ್ಯೋಗ ಮಾಡುವ ಸ್ಥಳದಲ್ಲಿಯೂ ಹಲವಾರು ಸಮಸ್ಯೆಗಳು ನಿಮ್ಮನ್ನು ಸುತ್ತಿಕೊಳ್ಳಲಿವೆ. ಆದಷ್ಟು ತಾಳ್ಮೆ, ಜಾಗ್ರತೆಯಿಂದ ವ್ಯವಹರಿಸುವುದನ್ನು ರೂಢಿಸಿಕೊಳ್ಳಿ. ವಿವಾಹಿತರಿಗೆ ಉದ್ಯೋಗ ಕ್ಷೇತ್ರದಲ್ಲಿನ ಒತ್ತಡ ಕುಟುಂಬದ ಮೇಲೂ ಪರಿಣಾಮ ಬೀರಲಿದೆ. ಆದಷ್ಟು ಉದ್ಯೋಗದ ಒತ್ತಡವನ್ನು ಮನೆಯಲ್ಲಿ ಇನ್ನೊಬ್ಬರ ಮೇಲೆ ಹಾಕಲು ಪ್ರಯತ್ನಿಸಬೇಡಿ.

9. ಉತ್ತಮ ಅವಕಾಶ

ಈ ವರ್ಷ ನಿಮಗೆ ಅತ್ಯುತ್ತಮ ಅವಕಾಶಗಳು ದೊರೆಯಲಿವೆ. ಸಿಕ್ಕಿರುವ ಅವಕಾಶವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ ಅನ್ನುವುದು ನಿಮ್ಮ ಜೀವನದ ಯಶಸ್ಸು ನಿರ್ಧಾರವಾಗಲಿದೆ. ಕೆಲಸ ಮಾಡುವ ಸ್ಥಳದಲ್ಲಿ ಕೋಪವನ್ನು ಪ್ರದರ್ಶಿಸಲು ಹೋಗಬೇಡಿ. ಉದ್ಯೋಗ ಬದಲಾವಣೆಯ ಆಸೆ ಇದ್ದರೆ, ಮಾಡಬಹುದು. ವಿವಾಹಿತರಾದವರು ಸಂಗಾತಿಯೊಂದಿಗೆ ಯಾವುದೇ ಕಲಹ ಇಲ್ಲದೇ ಜೀವನ ಸಾಗಿಸಲಿದ್ದೀರಿ. ನಡುವಿನ ಬಾಂಧವ್ಯ ವೃದ್ಧಿಸಲಿದೆ. 

 

Follow Us:
Download App:
  • android
  • ios