Asianet Suvarna News Asianet Suvarna News

ದೇವರಿಗೆ ಮಂಡಿಯೂರಿ ತಲೆಬಾಗಿ ಶರಣಾದ ಮೇಕೆ: ವಿಡಿಯೋ ವೈರಲ್

ಮೇಕೆಯೊಂದು ಮನುಷ್ಯರಂತೆ ದೇವರಿಗೆ ಭಕ್ತಿಭಾವದಿಂದ ತಲೆಬಾಗಿ ಶರಣಾಗಿದೆ. ಮೆಕೆಯೊಂದು ದೇಗುಲದಲ್ಲಿ ದೇವರ ಮುಂದೆ ಭಕ್ತಿಯಿಂದ ತಲೆ ಬಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Goat kneeling down in front of a shrine in Uttar Pradeshs Kanpur akb
Author
First Published Oct 10, 2022, 7:31 PM IST | Last Updated Oct 10, 2022, 7:31 PM IST

ಕಾನ್ಪುರ: ದೇವರ ಮೇಲೆ ಭಕ್ತಿ ಭಾವ ತೋರುವ ಜನರಿಗೇನು ಕಡಿಮೆ ಇಲ್ಲ. ಆದರೆ ಮೂಕ ಪ್ರಾಣಿಗಳು ದೇವರ ಮೇಲೆ ಭಕ್ತಿ ಭಾವ ಮೆರೆಯುವ ದೃಶ್ಯಗಳನ್ನು ನೋಡಿದ್ದೀರಾ. ಇಲ್ಲ ಎಂದಾದರೆ ಇಲ್ಲಿದೆ ನೋಡಿ. ಮೇಕೆಯೊಂದು ಮನುಷ್ಯರಂತೆ ದೇವರಿಗೆ ಭಕ್ತಿಭಾವದಿಂದ ತಲೆಬಾಗಿ ಶರಣಾಗಿದೆ. ಮೆಕೆಯೊಂದು ದೇಗುಲದಲ್ಲಿ ದೇವರ ಮುಂದೆ ಭಕ್ತಿಯಿಂದ ತಲೆ ಬಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ವಿಶೇಷ ಅಪರೂಪದ ಘಟನೆ ನಡೆದಿದೆ. 

ಉತ್ತರಪ್ರದೇಶದ (Uttar Pradesh) ಕಾನ್ಪುರ (Kanpur) ಜಿಲ್ಲೆಯಲ್ಲಿರುವ ಬಾಬಾ ಆನಂದೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಜಾನ್ಸನ್ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಕಪ್ಪು ಬಣ್ಣದ ಆಡೊಂದು ದೇಗುಲದಲ್ಲಿ ಸೇರಿರುವ ಇತರ ಭಕ್ತರ ಜೊತೆ ತಾನು ಕೂಡ ದೇವರಿಗೆ ಶರಣೆಂದಿದೆ. ತನ್ನ ಮುಂಭಾಗದ ಎರಡು ಕಾಲುಗಳನ್ನು ಮಡಚಿ ತಲೆಯನ್ನು ಹಾಗೂ ಭುಜವನ್ನು ಬಾಗಿಸಿ ದೇವರ ಗುಡಿ ಮುಂದೆ ಶರಣು ಶರಣೆಂದಿದೆ. 

ತುಂಬಿ ಹರಿಯೋ ಹೊಳೆ ದಾಟೋ ಸ್ಮಾರ್ಟ್ ಮೇಕೆ video viral

ಇದೇ ವೇಳೆ ದೇಗುಲದಲ್ಲಿ ಹಲವರು ಭಕ್ತರು ಸೇರಿದ್ದು, ಅವರು ಕೂಡ ದೇವರ ಮುಂದೆ ಕೈ ಮಗಿಯುತ್ತಿದ್ದಾರೆ. ಮೇಕೆಯ (goat) ಸಮೀಪದಲ್ಲೇ ವ್ಯಕ್ತಿಯೊಬ್ಬ ದೇವರಿಗೆ ತಲೆ ಬಾಗಿಸಿ ಬೇಡುತ್ತಿದ್ದಾನೆ. ವಿಡಿಯೋದ ಹಿನ್ನೆಲೆಯಲ್ಲಿ ಮಂತ್ರಘೋಷದ ಸದ್ದು ಕೇಳಿ ಬರುತ್ತಿದೆ. 

 

ಈ ವಿಡಿಯೋ ಪೋಸ್ಟ್ ಮಾಡಿರುವ ಜಾನ್ಸನ್ (David Johnson) ಎಂಬುವವರು, ಕಾನ್ಪುರದ ಪರಮತ್ ದೇವಾಲಯದಲ್ಲಿ ನಂಬಿಕೆಯ ಅದ್ಭುತ ಚಿತ್ರವು ಕಾಣಿಸಿಕೊಂಡಿದೆ. ಅಲ್ಲಿ ಮೇಕೆಯು ಬಾಬಾ ಆನಂದೇಶ್ವರನ ಆರತಿಯಲ್ಲಿ ನಂಬಿಕೆ ಇರಿಸಿ ಮಂಡಿಯೂರಿ ಕುಳಿತಿರುವುದು ಕಂಡುಬಂದಿದೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಆದಾಗಿನಿಂದ ನೂರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಬಾ ಆನಂದೇಶ್ವರ ದೇಗುಲವೂ (Baba Anandeshwar Temple) ಗಂಗಾ ನದಿ (Ganga River) ತೀರಾದಲ್ಲಿರುವ ಪುರಾತನ ದೇಗುಲವಾಗಿದ್ದು, ಹಿಂದೂ ದೇವ ಶಿವನ ಆರಾಧನೆಗೆ ಮೀಸಲಾದ ದೇಗುಲವಾಗಿದೆ.

19 ಇಂಚಿನ ಕಿವಿಯೊಂದಿಗೆ ಜನಿಸಿದ ಮೇಕೆ ಮರಿ

Latest Videos
Follow Us:
Download App:
  • android
  • ios