Diwali 2025 Festival Of Lights Will Be Extra Lucky For THESE 5 Zodiac Signs ಈ ದೀಪಾವಳಿ ಹಲವರ ಪಾಲಿಗೆ ಶುಭ ಫಲವನ್ನು ತರಲಿದೆ ಹಾಗೇ ಗುರುವು ಕರ್ಕ ರಾಶಿಯಲ್ಲಿ ಸ್ಥಾನ ಬದಲಾವಣೆ ಮಾಡುವುದರಿಂದ ಈ ರಾಶಿಗೆ ಅದೃಷ್ಟ ಎಂದು ಜೋತಿಷ್ಯ ತಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ 

ದೀಪಾವಳಿ ಫಲ

ಈ ದೀಪಾವಳಿ ಹಲವರ ಪಾಲಿಗೆ ಶುಭ ಫಲವನ್ನು ತರಲಿದೆ ಎಂಬುದರಲ್ಲಿ ಸಂಶಯವಿಲ್ಲ. ಕಾರಣ ಗುರು ಬಲ. ಅಕ್ಟೋಬರ್ 18 ರಿಂದ ಡಿಸೆಂಬರ್ 5 ರ ವರೆಗೆ ಗುರು ಗ್ರಹವು ಕರ್ಕಟಕ ರಾಶಿಯಲ್ಲಿ ಅಂದರೆ ಉಚ್ಚಸ್ಥಾನದಲ್ಲಿ ಸಂಚರಿಸುವುದರಿಂದ ಆ ಸಮಯದಲ್ಲಿ ಅತ್ಯಂತ ಶ್ರೇಷ್ಠ ಫಲಗಳನ್ನು ಅನುಗ್ರಹಿಸುತ್ತಾನೆ.

ಮೇಷ = ದೀಪಾವಳಿ ಪ್ರಾರಂಭಕ್ಕೂ ಮುನ್ನವೇ ನಿಮ್ಮ ಪಾಲಿಗೆ ಗುರು ಸುಖ-ಸಂತೋಷಗಳ ಫಲವನ್ನು ಉಡುಗೊರೆಯಾಗಿ ಕೊಡಲಿದ್ದಾನೆ. ಸ್ನೇಹಿತರು-ಬಂಧುಗಳಿಂದ ವಿಶೇಷ ಸಹಕಾರಗಳು ಉಂಟಾಗಲಿವೆ. ಸ್ತ್ರೀಸೌಖ್ಯ-ಭೂ ಲಾಭ-ವಾಹನ ಲಾಭಾದಿ ಫಲಗಳನ್ನು ಅನುಭವಿಸುತ್ತೀರಿ. ನವೆಂಬರ್ ಪ್ರಾರಂಭದಲ್ಲಿ ದಾಂಪತ್ಯ ಸೌಖ್ಯ. ವಿವಾಹಾದಿ ಶುಭ ಕಾರ್ಯಗಳು ನಡೆಯಲಿವೆ. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ವಿಶೇಷ ಲಾಭ ದೊರೆಯಲಿದೆ. ಕಲಾವಿದರಿಗೆ ವಿಶೇಷ ಮಾನ್ಯತೆಗಳು ಸಿಗಲಿವೆ. ಜನವರಿ ಮಧ್ಯಭಾಗದಿಂದ ವೃತ್ತಿಯಲ್ಲಿ ವಿಶೇಷ ಅನುಕೂಲಗಳು, ಹೊಸ ಅವಕಾಶಗಳು ಲಭ್ಯವಿದ್ದು ನಿಮ್ಮ ಆದಾಯದ ಮೂಲವೂ ಹೆಚ್ಚಾಗಲಿದೆ.

ಪರಿಹಾರ = ಗಣಪತಿ ಸನ್ನಿಧಾನದಲ್ಲಿ ಜೇನಿನ ಅಭಿಷೇಕ ಮಾಡಿಸಿ

ವೃಷಭ = ದೀಪಾವಳಿ ನಿಮ್ಮ ಪಾಲಿಗೆ ಗುರುಬಲವನ್ನು ಕಳೆದುಹಾಕಲಿದೆ. ಮುರು ತಿಂಗಳ ಕಾಲ ಸ್ವಲ್ಪ ಕತ್ತಲಿಗೆ ಸರಿಯಬೇಕಾದ ಪರಿಸ್ಥಿತಿ ಬರಬಹುದು. ಜಿಪುಣತನದಿಂದ ನಾಲ್ಕು ಜನರ ಮಧ್ಯೆ ಅಪಮಾನವಾಗಬಹುದು. ಉಪಕಾರಕ್ಕೆ ಪತ್ರ್ಯುಪಕಾರ ಇರುವುದಿಲ್ಲ. ಆದರೆ ವೃತ್ತಿಯಲ್ಲಿ ಯಾವುದೇ ತೊಂದರೆ ಇಲ್ಲ. ಹಿರಿಯರ ಸಹಕಾರ-ಸಲಹೆಗಳು ಸಿಗಲಿವೆ. ಆದರೆ ಕೆಲವರಿಂದ ಅಪವಾದಗಳು ಬರಬಹುದು. ಹೆದರುವ ಆತಂಕ ಇಲ್ಲ, ಡಿಸೆಂಬರ್ ನಿಂದ ಮತ್ತೆ ನಿಮಗೆ ಶುಭ ಫಲಗಳು ಮರುಕಳಿಸಲಿವೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಹಣಕಾಸಿನ ಹರಿವು ಹೆಚ್ಚಲಿದೆ. ವಿದ್ಯಾಲಾಭ, ಮಾತಿನ ಕೌಶಲ್ಯಗಳಿಂದ ಸಾಧನೆ ಉಂಟಾಗಲಿದೆ. \

ಪರಿಹಾರ = ಸುಬ್ರಹ್ಮಣ್ಯ ಹಾಗೂ ಗಣಪತಿ ಸನ್ನಿಧಾನಕ್ಕೆ ಫಲ ಸಮರ್ಪಣೆ ಮಾಡಿ

ಮಿಥುನ = ದೀಪಾವಳಿ ಪ್ರಾರಂಭಕ್ಕೂ ಮುನ್ನವೇ ನಿಮ್ಮ ಬದುಕಲ್ಲಿ ಮಂಗಳ ಕಾರ್ಯಗಳಿಗೆ ಗುರುವಿನಿಂದ ಚಾಲನೆ ದೊರೆತಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಹಣ-ವಿದ್ಯೆಗಳಲ್ಲಿ ಲಾಭ ಕಾಣುತ್ತೀರಿ. ಮಾತಿನ ಕೌಶಲ್ಯದಿಂದ ಪ್ರಸಿದ್ಧರಾಗುತ್ತೀರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಆಗಾಗ ಸುಗ್ರಾಸ ಭೋಜನ ಕೂಟಗಳಲ್ಲಿ ಪಾಲ್ಗೊಳ್ಳುವಿರಿ. ನವೆಂಬರ್ ನಲ್ಲಿ ಹೊಸ ಅಧ್ಯಯನ, ಸಂಶೋಧನೆಗಳಲ್ಲಿ ಜಯ ಸಿಗಲಿದೆ. ಮಕ್ಕಳ ವಿಚಾರದಲ್ಲಿ ಶುಭ ಫಲ. ವಸ್ತ್ರಾಭರಣ ವ್ಯಾಪಾರದಲ್ಲಿ ವಿಶೇಷ ಲಾಭ. ಸ್ತ್ರೀಯರಿಗೆ ಪ್ರತಿಭಾ ಚಾತುರ್ಯದಿಂದ ಪ್ರಶಂಸೆಗಳು ಲಭ್ಯ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲ. ವಿಶೇಷ ಸ್ಥಾನಮಾನ ಪ್ರಾಪ್ತಿಯಾಗಲಿದೆ. \

ಪರಿಹಾರ = ಈಶ್ವರ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ

ಕರ್ಕಟಕ = ದೀಪಾವಳಿ ನಿಮ್ಮ ಪಾಲಿಗೆ ವಿಶೇಷವಾಗಿದೆ. ಚಾಂದ್ರೇ ರತ್ನಸುತಸ್ವದಾರ ವಿಭವ ಪ್ರಜ್ಞಾ ಸುಖೈರನ್ವಿತ: ಎಂಬ ವರಾಹಮಿಹಿರರ ಮಾತಿನಂತೆ ಆಭರಣ-ರತ್ನಗಳು ಹೊಂದುವಿರಿ. ಪುತ್ರಪೌತ್ರಾದಿ ಸುಖಗಳನ್ನು ಅನುಭವಿಸುತ್ತೀರಿ. ಧನವಂತರಾಗುತ್ತೀರಿ. ಧಾರ್ಮಿಕ ಪ್ರಜ್ಞೆ ಹೆಚ್ಚಲಿದೆ. ಉತ್ತಮರ ಸಂಪರ್ಕ-ಸಜ್ಜನರ ಭೇಟಿ ಉಂಟಾಗಲಿದೆ. ರಾಜಕಾರ್ಯಗಳಲ್ಲಿ ಭಾಗವಹಿಸುವಿರಿ. ಇಷ್ಟಪಟ್ಟದ್ದನ್ನು ಹೊಂದುವ ಅವಕಾಶಗಳು ದೊರೆಯಲಿವೆ. ನವೆಂಬರ್ ವೇಳೆಗೆ ಭೂ-ವಾಹನ ಲಾಭ ಕಾಣುತ್ತೀರಿ. ಬಂಧು-ಮಿತ್ರರಲ್ಲಿ ವಿಶ್ವಾಸಗಳು ಹೆಚ್ಚಲಿವೆ. ಮನೆಯಲ್ಲಿ ಶುಭ ಕಾರ್ಯಗಳು ಉಂಟಾಗಲಿವೆ. ಡಿಸೆಂಬರ್ ನಲ್ಲಿ ನಿಮ್ಮ ಶತ್ರುಗಳು ದೂರಾಗುತ್ತಾರೆ. ಕಷ್ಟಗಳಿಂದ ಪಾರಾಗುತ್ತೀರಿ.

ಪರಿಹಾರ = ದಕ್ಷಿಣಾಮೂರ್ತಿ ಸ್ತೋತ್ರ ಹಾಗೂ ಸುಬ್ರಹ್ಮಣ್ಯ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ.

ಸಿಂಹ = ನಿಮ್ಮ ಪಾಲಿಗೆ ಈ ದೀಪಾವಳಿ ಸ್ವಲ್ಪ ವ್ಯಯ-ಅಲೆದಾಟಗಳನ್ನು ತರಲಿದೆ. ಗುರುಬಲವೂ ಕಳೆದುಹೋಗಲಿದೆ. ಆರೋಗ್ಯದಲ್ಲಿ ಏರುಪೇರುಂಟಾಗಬಹುದು. ಎಚ್ಚರವಹಿಸಿ. ಮನೋಬುದ್ಧಿಗಳಲ್ಲಿ ಚಂಚಲತೆ, ತನ್ಮೂಲಕ ಹಾನಿ ಉಂಟಾಗಲಿದೆ. ಆಪ್ತರಿಗಾಗಿ ಅತಿಯಾದ ಓಡಾಟ. ಮತ್ತೊಬ್ಬರ ಚಾಕರಿಯಲ್ಲಿ ಕಾಲ ಸರಿದುಹೋಗಲಿದೆ. ಆಪ್ತರಿಗಾಗಿ ಅತಿಯಾದ ಖರ್ಚು ಮಾಡಬೇಕಾಗುತ್ತದೆ. ನವೆಂಬರ್ ತಿಂಗಳಲ್ಲಿ ಸ್ವಲ್ಪ ಧೈರ್ಯ ಸಾಹಸಗಳಿಂದ ಅನುಕೂಲ. ಸೇವಕರಿಂದ ಸಹಾಯ. ಸ್ತ್ರೀಯರಿಗೆ ಉತ್ತಮ ಸಲಹೆಗಳು ಸಿಗಲಿವೆ.

ಪರಿಹಾರ = ಈಶ್ವರ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ.

ಕನ್ಯಾ = ದೀಪಾವಳಿ ನಿಮ್ಮನ್ನು ಅತ್ಯಂತ ಧನಿಕರನ್ನಾಗಿ ಮಾಡಲಿದೆ. ಧನಲಕ್ಷ್ಮಿ ನಿಮ್ಮ ಮನೆಗೆ ಬರಲಿದ್ದಾಳೆ. ವ್ಯಾಪಾರದಲ್ಲಿ ಲಾಭಗಳನ್ನು ಕಾಣುವಿರಿ. ಸಿಹಿಪದಾರ್ಥದ ವ್ಯಾಪಾರದಲ್ಲಿ ಲಾಭ. ಗುರು-ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ. ವಾಹನ-ಭೂ ಲಾಭಗಳನ್ನು ಪಡೆಯುತ್ತೀರಿ. ಸ್ನೇಹಿತರು-ಬಂಧುಗಳಿಂದ ಲಾಭ ಕಾಣುತ್ತೀರಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸಂಗಾತಿಯಲ್ಲಿ ಸಾಮರಸ್ಯ. ದಾಂಪತ್ಯದಲ್ಲಿ ಆನಂದ ಲಕ್ಷ್ಮಿ ನೆಲೆಸಲಿದ್ದಾಳೆ. ವಿವಾಹಾದಿ ಮಂಗಳ ಕಾರ್ಯಗಳು ನೆಡೆಯಲಿವೆ. ನವೆಂಬರ್-ಡಿಸೆಂಬರ್ ನಲ್ಲಿ ಅಧಿಕ ಧನಲಾಭ, ಕುಟುಂಬ ಸೌಖ್ಯ ಕಾಣುತ್ತೀರಿ. ಸಂಗೀತ-ಸಾಹಿತ್ಯಾಸಕ್ತರಿಗೆ ವಿಶೇಷ ಅನುಕೂಲಗಳುಂಟಾಗಲಿವೆ. ವಿದ್ಯಾರ್ಥಿಗಳಿಗೆ ವಿದ್ಯಾಲಕ್ಷ್ಮಿಯ ಕೃಪೆಯಾಗಲಿದೆ. ವಸ್ತ್ರಾಭರಣ ವ್ಯಾಪಾರದಲ್ಲಿ ಲಾಭ.

ಪರಿಹಾರ = ಗಣಪತಿ ಸನ್ನಿಧಾನಕ್ಕೆ ಕೆಂಪು ಗಂಧದಿಂದ ಅಭಿಷೇಕ ಮಾಡಿಸಿ.

ತುಲಾ = ದೀಪಾವಳಿ ನಿಮ್ಮ ಪಾಲಿಗೆ ವೃತ್ತಿಯಲ್ಲಿ ಒಂದು ವಿಶೇಷ ಶುಭಫಲವನ್ನು ತರಲಿದೆ. ಕೆಲಸಗಳಲ್ಲಿ ಅನುಕೂಲ ತರಲಿದೆ. ಹೊಸ ಅವಕಾಶಗಳು ಉಂಟಾಗಲಿವೆ. ರಾಜರಿಗೆ ಪ್ರಿಯರಾಗುತ್ತೀರಿ. ಗೌರವ-ಸನ್ಮಾನಗಳು ದೊರೆಯಲಿವೆ. ಕುಟುಂಬ ಸೌಖ್ಯತೆ, ಹಣಕಾಸಿನ ಅನುಕೂಲಗಳು ಉಂಟಾಗಲಿವೆ. ಆಟೋಮೊಬೈಲ್ ಕ್ಷೇತ್ರಗಳಲ್ಲಿ ಹೆಚ್ಚಿನಲಾಭವಿದೆ. ಬಂಗಾರದ ವ್ಯಾಪಾರದಲ್ಲಿ ಲಾಭಕಾಣುತ್ತೀರಿ. ಡಿಸೆಂಬರ್ ವೇಳೆಗೆ ಕಲಾವಿದರಿಗೆ ಹೆಚ್ಚಿನ ಅನುಕೂಲ ಧನ ಲಾಭವಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಜನವರಿಯಲ್ಲಿ ಭೂಮಿ ಹಾಗೂ ವಾಹನ ಲಾಭ ಕಾಣುತ್ತೀರಿ.

ಪರಿಹಾರ = ಸುಬ್ರಹ್ಮಣ್ಯ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಿ.

ವೃಶ್ಚಿಕ = ದೀಪಾವಳಿ ಹಬ್ಬ ನಿಮ್ಮ ಬದುಕಿಗೆ ಹೊಸ ಬೆಳಕನ್ನು ಹೊತ್ತಿಸಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸಾಧು-ಸಂತರ ಭೇಟಿಯಾಗಲಿದೆ. ತೀರ್ಥ ಕ್ಷೇತ್ರ ದರ್ಶನ ಮಾಡಲಿದ್ದೀರಿ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರೂ ಕೂಡ ನಿಮ್ಮ ಮಾತಿಗೆ ಗೌರವ ಕೊಡಲಿದ್ದಾರೆ. ಡಿಸೆಂಬರ್ ವರೆಗೆ ನಿಮಗೆ ಹೆಚ್ಚಿನ ಶುಭಫಲವಿದೆ. ಆದರೆ ವೃತ್ತಿಯಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು. ಸ್ಥಾನವನ್ನು ಕಳೆದುಕೊಳ್ಳಬಹುದು. ಎಚ್ಚರವಹಿಸಿ. ಡಿಸೆಂಬರ್ ಜನವರಿಯಲ್ಲಿ ಆಪ್ತರಿಂದ ಅತಿಯಾದ ವ್ಯಯ. ಆಪ್ತರಿಗಾಗಿ ಅಲೆದಾಟ ಹೆಚ್ಚಲಿದೆ. ವಸ್ತುಗಳ ನಷ್ಟ ಉಂಟಾಗಬಹುದು.

ಪರಿಹಾರ = ಶಿವ ಸನ್ನಿಧಾನಕ್ಕೆ ಉದ್ದು-ಹುರುಳಿ ದಾನ ಮಾಡಿ. ಶಿವ ಕ್ಷೇತ್ರ ದರ್ಶನ ಮಾಡಿ.

ಧನುಸ್ಸು = ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಕತ್ತಲು-ಬೆಳಕುಗಳ ಮಿಶ್ರಫಲವನ್ನು ತರಲಿದೆ. ಪ್ರಾರಂಭದಲ್ಲಿ ಆರೋಗ್ಯದಲ್ಲಿ ಏರುಪೇರು. ಧನ ನಷ್ಟ ಉಂಟಾಗಲಿದೆ. ಭೂಮಿ-ವಾಹನ ವಿಚಾರಗಳಲ್ಲಿ ತೊಂದರೆಯಾಗಬಹುದು. ಅಪಮಾನ-ಸೋಲುಗಳು ಸಂಭವಿಸಬಹುದು. ಎಚ್ಚರವಾಗಿರಿ. ವೃತ್ತಿಯಲ್ಲಿ ಅನುಕೂಲ ಫಲವಿದೆ. ಬುದ್ಧಿಬಲವಿದೆ. ಸ್ನೇಹಿತರು-ಬಂಧುಗಳಿಂದ ಸಹಕಾರ ಇರಲಿದೆ. ಡಿಸೆಂಬರ್ ನಲ್ಲಿ ಸ್ತ್ರೀಯರಿಗೆ ಹೆಚ್ಚಿನ ಅಲೆದಾಟ-ಪರಿಶ್ರಮ ಇರಲಿದೆ. ಅದೃಷ್ಟದಿಂದ ಕಾರ್ಯಗಳು ಕೂಡಿಬರಲಿವೆ. ಆದರೆ ಮತ್ತೆ ಗುರುಬಲ ಬರುವುದರಿಂದ ಮಂಗಳ ಕಾರ್ಯಗಳು ನಡೆಯಲಿವೆ. ಹೊಸ ಆಲೋಚನೆಗಳು ಹೊಳೆಯಲಿವೆ. ವ್ಯಾಪಾರದಲ್ಲಿ ಹೊಸತನ ಕಾಣುತ್ತೀರಿ.

ಪರಿಹಾರ = ಶಿವ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಿ.

ಮಕರ = ದೀಪಾವಳಿ ನಿಮ್ಮ ಪಾಲಿಗೆ ಆನಂದ ದೀಪವನ್ನ ಬೆಳಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಸಂಗಾತಿಯಲ್ಲಿ ಅನ್ಯೋನ್ಯತೆ ಬೆಳೆಯಲಿದೆ. ವ್ಯಾಪಾರದಲ್ಲಿ ವಿಶೇಷ ಲಾಭ ಕಾಣುತ್ತೀರಿ. ಜಲ ಕ್ಷೇತ್ರ ವ್ಯಾಪಾರದಲ್ಲಿ ವಿಶೇಷ ಲಾಭ ಗಳಿಸುತ್ತೀರಿ. ವಿದೇಶ ಪ್ರಯಾಣ, ವಿದೇಶ ವಹಿವಾಟಿನ ಲಾಭ ಬರಲಿದೆ. ಉಪನ್ಯಾಸ-ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅನುಕೂಲವಿದೆ. ಪುರೋಹಿತರು-ಮಂತ್ರಜ್ಞರಿಗೆ ವಿಶೇಷ ಗೌರವಗಳು ಸಿಗಲಿವೆ. ಧಾತು-ಲೋಹ-ಅಗ್ನಿ ಕ್ಷೇತ್ರದಲ್ಲಿ ಲಾಭವಿದೆ. ಡಿಸೆಂಬರ್ ನಲ್ಲಿ ಹೆಚ್ಚಿನ ವ್ಯಯ ಕಾಣುತ್ತೀರಿ. ಸರ್ಕಾರಿ ವಲಯದವರಿಗೆ ಅಲೆದಾಟ. ಆಪ್ತರನ್ನು ಕಳೆದುಕೊಳ್ಳುತ್ತೀರಿ. ಜನವರಿಯಲ್ಲಿ ಪೊಲೀಸ್-ಸೇನೆಯಲ್ಲಿರುವವರಿಗೆ ಗೌರವ-ಅಧಿಕಾರ ಲಾಭ.

ಪರಿಹಾರ = ಶಿವ ಸನ್ನಿಧಾನಕ್ಕೆ ನವಧಾನ್ಯ ಸಮರ್ಪಣೆ ಮಾಡಿ.

ಕುಂಭ = ದೀಪಾವಳಿ ನಿಮ್ಮ ಪಾಲಿಗೆ ಪ್ರಾರಂಭದಲ್ಲಿ ಸ್ವಲ್ಪ ಅಸಮಾಧಾನ ತರಬಹುದು. ಕುಟುಂಬ ವಿಚಾರದಲ್ಲಿ ಘರ್ಷಣೆಗಳುಂಟಾಗಬಹುದು. ಡಿಸೆಂಬರ್ ವರೆಗೆ ಬಹಳ ಎಚ್ಚರಿಕೆ ಹೆಜ್ಜೆಗಳನ್ನಿಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರಿಗೆ ತೊಂದರೆಗಳು. ದೊಡ್ಡ ಪ್ರಮಾಣದಲ್ಲಿ ಧನನಷ್ಟ ಸಾಧ್ಯತೆ. ಧೈರ್ಯ-ಶೌರ್ಯಗಳ ಕೊರತೆಯಾಗಲಿದೆ. ಸಾಲದ ಸುಳಿಗೆ ಸಿಲುಕುವಿರಿ. ನವೆಂಬರ್ ನಲ್ಲಿ ದೈವಾನುಕೂಲದಿಂದ ಎಲ್ಲ ಕಷ್ಟಗಳನ್ನು ದಾಟುತ್ತೀರಿ. ಗುರು ಬಲ ಹೋದರೂ ಶುಕ್ರ ಫಲ ಇರಲಿದೆ. ಶುಕ್ರನಿಂದ ವೈಭೋಗ ಫಲ ಬರಲಿದೆ. ಅದೃಷ್ಟದಿಂದ ಗೃಹ-ವಾಹನ ಸೌಖ್ಯ ಉಂಟಾಗಲಿದೆ. ಮನೆ ಖರೀದಿ ಮಾಡುವ ಸಾಧ್ಯತೆ. ಸ್ನೇಹಿತರು-ಬಂಧುಗಳ ಉಪಕಾರ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲ. ಅಧಿಕಾ ಪ್ರಾಪ್ತಿ. ಪೊಲೀಸ್ ಕಾರ್ಯಗಳಲ್ಲಿ ಜಯ. ಯಶಸ್ಸು ಸಿಗಲಿದೆ. ಅಧಿಕ ವ್ಯಯವೂ ಇದೆ. ಅತಿಯಾದ ಖರ್ಚು ನಿಮ್ಮನ್ನು ಕುಗ್ಗಿಸಲಿದೆ. ಚರ್ಮ ಸಂಬಂಧಿ ತೊಂದರೆ ಕಾಡಲಿದೆ.

ಪರಿಹಾರ = ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ-ದತ್ತ ಕ್ಷೇತ್ರ ದರ್ಶನ ಮಾಡಿ.

ಮೀನ = ದೀಪಾವಳಿ ನಿಮ್ಮ ಪಾಲಿಗೆ ಅರಿವಿನ ಬೆಳಕನ್ನು ತರಲಿದೆ. ಮಹೀಶ ಸಚಿವೋ ಧೀಮಾನ್ ಸುತಸ್ತೇ ಗುರೌ ಎಂಬ ಶಾಸ್ತ್ರವಾಣಿಯಂತೆ ಸಚಿವ ಸ್ಥಾನ ದೊರೆಯಲಿದೆ. ಸ್ಥಾನ-ಮಾನಗಳು ಪ್ರಾಪ್ತಿಯಾಗಲಿವೆ. ಬುದ್ಧಿಶಕ್ತಿ ಹೆಚ್ಚಲಿದೆ. ಹೊಸ ಅಧ್ಯಯನ ಸಂಶೋಧನೆಗಳಿಂದ ಸಾಧನೆ ಮಾಡುತ್ತೀರಿ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಗುರು-ಹಿರಿಯರಲ್ಲಿ ಭಕ್ತಿ. ಗುರು-ಶಿಷ್ಯರ ಬಾಂಧವ್ಯ ವೃದ್ಧಿಯಾಗಲಿದೆ. ಸಂತಾನ ಸೂಚನೆ-ಮಕ್ಕಳಿಂದ ಅನಕೂಲ ಫಲಗಳಿದ್ದಾವೆ. ನವೆಂಬರ್-ಡಿಸೆಂಬರ್ ನಲ್ಲಿ ನಷ್ಟ ವಸ್ತುಗಳು ಮತ್ತೆ ದೊರೆಯಲಿವೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಬೆಳೆಯಲಿದೆ. ತಂದೆ-ಮಕ್ಕಳಲ್ಲಿ ಸಾಮರಸ್ಯ ಉಂಟಾಗಲಿದೆ. ದೇವಾಲಯ ಕಾರ್ಯಗಳಲ್ಲಿ ಯಶಸ್ಸು. ಶುಭ ಚಿಂತನೆ-ಮಂಗಳ ಕಾರ್ಯಗಳು ನಡೆಯಲಿವೆ.

ಪರಿಹಾರ = ಸುಬ್ರಹ್ಮಣ್ಯ ಕವಚ ಪಠಿಸಿ. ಗಣಪತಿ ಸನ್ನಿಧಾನದಲ್ಲಿ ಗಂಧೋದಕ ಅಭಿಷೇಕ ಮಾಡಿಸಿ