ಈ ರಾಶಿಯವರಿಂದು ಹೆಚ್ಚು ಜಾಗ್ರತರಾಗಿರಿ

Dina Bhavishya June 16
Highlights

ಈ ರಾಶಿಯವರಿಂದು ಹೆಚ್ಚು ಜಾಗ್ರತರಾಗಿರಿ 

ಈ ರಾಶಿಯವರಿಂದು ಹೆಚ್ಚು ಜಾಗ್ರತರಾಗಿರಿ 

ಮೇಷ
ಇಂದು ದೂರ ಪ್ರಯಾಣ ಮಾಡುವ ಯೋಗ
ವಿದ್ದರೂ ಹೋಗಲಾಗದ ಪರಿಸ್ಥಿತಿಯ ಉಲ್ಬಣ
ವಾಗಲಿದೆ. ಆದದ್ದೆಲ್ಲ ಒಳಿತೆಂದು ತಿಳಿಯಿರಿ.

ವೃಷಭ
ಪ್ರೇಮಿಗಳಿಗೆ ಒಳ್ಳೆಯ ದಿನ. ಹಿತಮಿತವಿದ್ದರೆ
ಮಾತ್ರ ಖುಷಿ. ಹಾಗಂತ ಹೊಸ ಪ್ರೇಮಿ
ಗಳನ್ನು ಹುಟ್ಟು ಹಾಕಿಕೊಳ್ಳಬೇಡಿ. ಜಾಗ್ರತೆ!

ಮಿಥುನ
ಹೂಡಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ
ಮಾಡಿದಲ್ಲಿ ಕ್ಷೇಮ. ಕಷ್ಟಪಟ್ಟು ದುಡಿದ
ಹಣವನ್ನು ಜಾಗ್ರತೆಯಿಂದ ವಿನಿಯೋಗಿಸಿ.

ಕಟಕ
ನಿಮ್ಮ ಗ್ರಹಗತಿಗಳ ಬಗ್ಗೆ ಯೋಚಿಸದೇ ನಿಮ್ಮ
ಮನೆತನದ ವೃತ್ತಿಯನ್ನು ಮುಂದುವರಿಸಿ.
ಜೀವನಾಧಾರಕ್ಕೆ ದಾರಿ ಮಾಡಿ ಕೊಡುತ್ತದೆ.

ಸಿಂಹ
ಗುತ್ತಿಗೆಗಳಲ್ಲಿ ಅನುಕೂಲವಾಗಲಿವೆ. ಹೊಸ
ಸಮಸ್ಯೆಗಳು ಸೃಷ್ಟಿಯಾಗದಂತೆ ಎಚ್ಚರವಹಿಸಿ.
ಹಣವೇ ಮುಖ್ಯವಲ್ಲವೆಂದು ತಿಳಿಯಿರಿ. 

ಕನ್ಯಾ
ಮನಸ್ಸಿಗೆ ಸಂಬಂಧಿಸಿದ ವಿಷಯಗಳನ್ನು
ಹೆಚ್ಚು ಯೋಚಿಸುವುದು ಬೇಡ. ಅದರಿಂದ
ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ.

ತುಲಾ 
ವಾಸ್ತುದೋಷದ ಬಗ್ಗೆ ಚಿಂತೆ ಬೇಡ.
ಸುಖಾಸುಮ್ಮನೆ ಹಣವನ್ನು ಖರ್ಚು ಮಾಡ
ಬೇಡಿ. ಸಾಧ್ಯವಾದರೆ ಅನ್ನದಾನ ಮಾಡಿ.

ವೃಶ್ಚಿಕ
ನಿಮ್ಮ ಸ್ನೇಹಿತರು ಹೇಳುವ ಮಾತಿಗೆ ಸ್ವಲ್ಪ ಬೆಲೆ
ಕೊಡಿ. ಅದರ ಪರಿಣಾಮ ಒಳ್ಳೆಯ ಕಾರ್ಯ
ಜರುಗುವ ಸಂಭವವಿದೆ. ಜಾಗ್ರತೆ ವಹಿಸಿ. 

ಧನುಸ್ಸು
ವಿನಾ ಕಾರಣ ಯಾರಲ್ಲೂ ವಿರೋಧ ಕಟ್ಟಿ
ಕೊಳ್ಳಬೇಡಿ. ಮಾನಸಿಕ ನೆಮ್ಮದಿಗಾಗಿ ಧ್ಯಾನ
ಯೋಗಗಳ ಮೊರೆ ಹೋದರೆ ಸಾಕು.

ಮಕರ
ವ್ಯವಹಾರ ಸುಲಲಿತವಾಗಿ ಮುನ್ನಡೆಯು
ತ್ತದೆ. ಹೊಸ ಯೋಜನೆಗಳ ತಯಾರಿ ಮತ್ತು
ಅನುಷ್ಠಾನಗಳಿಗೆ ಸೂಕ್ತ ಸಮಯ ಇದಾಗಿದೆ

ಕುಂಭ
ಅರಳಿಮರದ ಕೆಳಗೆ ಹೋಗಿ ಕೂತೂ
ಮೂಗು ಹಿಡಿಯುವ ಅಗತ್ಯವಿಲ್ಲ. ಮನೆ
ಯಲ್ಲೇ ಕೂತು ಧ್ಯಾನ ಮಾಡಿದರೂ ಸಾಕು.

ಮೀನ 
ವಿನೋದಯುಕ್ತ ಕಾಲಕ್ಷೇಪಗಳ ಮೂಲಕ
ಸಂತಸದ ಕ್ಷಣಗಳು ನಿಮ್ಮದಾಗುತ್ತವೆ. ಹಾಗಂತ
ಅದೇ ಜೀವನವಲ್ಲವೆನ್ನುವುದನ್ನೂ ತಿಳಿದಿರಿ

loader