ಈ ರಾಶಿಯವರಿಗಿಂದು ಶುಭವಾರ್ತೆ ಸಿಗಲಿದೆ..

Dina Bhavishya July 5
Highlights

ಈ ರಾಶಿಯವರಿಗಿಂದು ಶುಭವಾರ್ತೆ ಸಿಗಲಿದೆ..

ಈ ರಾಶಿಯವರಿಗಿಂದು ಶುಭವಾರ್ತೆ ಸಿಗಲಿದೆ..

ಮೇಷ
ನಿಮ್ಮ ವಕೀಲರು ಹೇಳಿದ ವಿಚಾರಗಳನ್ನು
ತಪ್ಪದೆ ಪಾಲಿಸಿ. ಇಲ್ಲವಾದಲ್ಲಿ ಫಜೀತಿ ಮತ್ತೆ
ಮರುಕಳಿಸಲಿದೆ. ಹಳೆ ಸಾಲ ಚುಕ್ತ ಆಗಲಿದೆ.

ವೃಷಭ
ಸಂಬಂಧಿಕರ ಆಗಮನದಿಂದ ಮನಃಶಾಂತಿ
ಲಭಿಸಲಿದೆ. ಅವರು ನಿಮಗೆ ಬೆಂಬಲವಾಗಿ
ನಿಲ್ಲುವರು. ಧನಾತ್ಮಕವಾಗಿ ಆಲೋಚಿಸಿರಿ.

ಮಿಥುನ
ಪರ ಊರಿಂದ ನಿಮಗೊಂದು ಶುಭವಾರ್ತೆ
ಸಿಗಲಿದೆ. ಅದು ನಿಮ್ಮ ಮನಸ್ಸಿಗೆ ಹೆಚ್ಚು ಖುಷಿ
ತರಲಿದೆ. ಇಂದು ನೆಮ್ಮದಿಯ ದಿನವಾಗಿದೆ.

ಕಟಕ
ನಿಮ್ಮದಲ್ಲದ ತಪ್ಪಿಗೆ ನೀವು ದೂಷಣೆಗೆ ಗುರಿ
ಯಾಗುತ್ತೀರಿ. ಯಾವುದಕ್ಕೂ ತಾಳ್ಮೆಯಿರಲಿ.
ನಿಜ ಏನೆಂದು ಕ್ರಮೇಣ ಅವರಿಗೆ ತಿಳಿಯುತ್ತೆ.

ಸಿಂಹ
ನೀವಂದುಕೊಂಡಂತೆಯೇ ಎಲ್ಲ ಕೆಲಸಗಳೂ
ನಿರಾತಂಕವಾಗಿ ನೆರವೇರುವುವು. ಗ್ರಹಗತಿಗೆ
ಮನೆಯ ವಾತಾವರಣವೂ ಪೂರಕವಾಗಿದೆ.

ಕನ್ಯಾ
ಖರ್ಚಿನ ಮೇಲೆ ಹಿಡಿತವಿರಲಿ. ವರ್ತಕರಿಗೆ
ಒಳ್ಳೆಯ ಸಮಯ. ಮೊಮ್ಮಕ್ಕಳಿಂದ ಸಂತಸ.
ದೂರದಲ್ಲಿರುವ ಮಕ್ಕಳ ಆಗಮನವಾಗಲಿದೆ.

ತುಲಾ 
ನಿಮ್ಮ ನೆರೆಯವರ ಬಗ್ಗೆ ಅನುಕಂಪವಿರಲಿ.
ಒಬ್ಬರು ಮತ್ತೊಬ್ಬರಿಗೆ ಸಹಾಯ ನೀಡುವುದು
ಮಾನವ ಸಹಜ ಧರ್ಮ ಹಾಗೇ ನಡೆಯಿರಿ.

ವೃಶ್ಚಿಕ
ಮಗಳ ಮದುವೆಯ ಬಗ್ಗೆ ಹೆಚ್ಚು ಯೋಚಿಸಿ
ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಅದಕ್ಕೂ ಒಂದು ಕಾಲ ಕೂಡಿ ಬರಲಿದೆ. 

ಧನುಸ್ಸು
ದೇವಕೃಪೆಯು ಇಂದು ನಿಮ್ಮ ಮೇಲಿದ್ದು
ಮಾಡಿದ್ದೆಲ್ಲವೂ ಒಳಿತಾಗಲಿದೆ. ಆತುರ ಬೇಡ.
ಯೋಚಿಸಿ ನಿರ್ಧಾರ ಮಾಡುವುದು ಸೂಕ್ತ.

ಮಕರ
ಸಹಕಾರಿ ಕ್ಷೇತ್ರದಲ್ಲಿ ನಿಮಗೆ ಘನತೆ ಮತ್ತು
ಗೌರವ ಲಭಿಸುತ್ತದೆ. ಹೊಸದಾದ ಯೋಜನೆಗೆ
ಕೈ ಹಾಕಲಿದ್ದೀರಿ. ಅದು ಸಾಕಾರವೂ ಆಗಲಿದೆ.

ಕುಂಭ
ನಿಮ್ಮ ಕಣ್ಣು ಕ್ಯಾಲೆಂಡರ್‌ನ ಒಂದು ದಿನಾಂಕ
ವನ್ನೇ ದೃಷ್ಟಿಸುತ್ತಿದೆ. ನಿಮಗೆ ಯಾರಿಂದಲೋ
ಬರಬೇಕಾದ ಹಣಕ್ಕಾಗಿ ತವಕಿಸುತ್ತಿದ್ದೀರಿ.

ಮೀನ 
ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚು ಆಸಕ್ತಿಯ
ತೋರುವಿರಿ. ವ್ಯಾಪಾರ ವಹಿವಾಟುಗಳಿಗೆ
ಸಂಬಂಧಿಸಿದ ಮಾತುಕತೆಗೆ ಬೆಲೆ ಬರಲಿದೆ.

loader