ಇಂದು ಈ ರಾಶಿಯವರಿಗೆ ಕಾಡುವ ಸುದ್ದಿಯೊಂದು ದೊರೆಯಲಿದೆ

First Published 26, Jul 2018, 7:06 AM IST
Dina Bhavishya july 26
Highlights

ಇಂದು ಈ ರಾಶಿಯವರಿಗೆ ಕಾಡುವ ಸುದ್ದಿಯೊಂದು ದೊರೆಯಲಿದೆ

ಇಂದು ಈ ರಾಶಿಯವರಿಗೆ ಕಾಡುವ ಸುದ್ದಿಯೊಂದು ದೊರೆಯಲಿದೆ

ಮೇಷ
ಒತ್ತಡದ ಕೆಲಸಗಳು ಕಡಿಮೆಯಾಗಿದೆ. ಹಿತ
ಚಿಂತಕರ ಆಗಮನವೂ ಆಗಲಿದೆ. ಮನಸ್ಸಿಗೆ
ಉಲ್ಲಾಸ ಸಿಗುವ ದಿನವಿದು. ಧನಾಗಮನ.

ವೃಷಭ
ಹಳೆಯ ಗೆಳೆಯನಿಗೆ ಈಗ ಕಷ್ಟ ಕಾಲ ಬಂದಿದೆ.
ಅವರಿಗೆ ಸಹಾಯ ಹಸ್ತ ನೀಡಿ. ನಿಮ್ಮ ಕೈಲಾದ
ರೀತಿಯಲ್ಲಿ ಧೈರ್ಯ ನೀಡುವುದು ಸೂಕ್ತ.

ಮಿಥುನ
ಇಂದಿನ ವಾಟ್ಸಾಪ್ ಸುದ್ದಿಯು ನಿಮ್ಮನ್ನು
ಹೆಚ್ಚು ಕಾಡಲಿದೆ. ಅದು ನೀವು ಊಹಿಸಿದಷ್ಟು
ಗಹನವಾದದ್ದಲ್ಲ. ವೃಥಾ ಚಿಂತೆ ಮಾಡದಿರಿ.

ಕಟಕ
ಕಷ್ಟದ ದಿನಗಳು ನಿಮಗೇನು ಹೊಸದಲ್ಲ,
ರೂಢಿಯಾಗಿದೆ. ಆದರೆ ಹರುಷ-ಹುರುಪು
ಗಳಿಗಾಗಿಯೇ ನಿಮ್ಮ ಕಾಯುವಿಕೆ ನಡೆದಿದೆ.

ಸಿಂಹ
ತಂದೆ-ತಾಯಿಗಳಿಂದ ನೆಮ್ಮದಿಯ ವಿಷಯ
ಕೇಳಲಿದ್ದೀರಿ. ತೀರ್ಥಯಾತ್ರೆ ಕೈಗೊಳ್ಳುವ
ಯೋಜನೆಯಿದೆ. ಬೆಟ್ಟ-ಗುಡ್ಡಗಳಲ್ಲಿ ಜಾಗ್ರತೆ. 

ಕನ್ಯಾ
ಊರಿಂದ ಬರಬೇಕಾಗಿದ್ದ ದವಸವು ಇಂದು
ಬರದು. ಅದಕ್ಕಾಗಿ ನೀವು ಕಾದು ಕೂರುವ
ಪರಿಸ್ಥಿತಿ ಕೂಡ ನಿಮಗಿಲ್ಲ. ಚಿಂತಿಸದಿರಿ.

ತುಲಾ 
ಹಣದ ವ್ಯವಹಾರದಲ್ಲಿ ನೀವು ನಂಬಿದ್ದವರೇ
ನಿಮ್ಮನ್ನು ಯಾಮಾರಿಸಲಿದ್ದಾರೆ. ಜೋಪಾನ
ವಾಗಿ ವ್ಯವಹರಿಸುವುದು ಸೂಕ್ತವಾದದ್ದು.

ವೃಶ್ಚಿಕ
ಮೃದು ಸ್ವಭಾವವು ಎಂದೂ ಒಂದೇ ರೀತಿ
ಯಲ್ಲಿದ್ದರೆ ಈ ಸಮಾಜ ಬದುಕಲು ಬಿಡದು.
ಸೆಟೆಯದಿದ್ದರೂ ಬುಸ್ಸ್ ಎನ್ನಲ್ಲಡ್ಡಿಯಿಲ್ಲ. 

ಧನುಸ್ಸು
ಮನೆಯ ಹಿರಿಯರ ಆರೋಗ್ಯದ ಕಡೆಗೆ
ಗಮನವಿರಲಿ. ನಿಮ್ಮ ಜವಾಬ್ದಾರಿಯನ್ನು
ಬೇರೊಬ್ಬರ ಮೇಲೆ ಹೇರದಂತೆ ವರ್ತಿಸಿರಿ.

ಮಕರ
ಇಂದು ಎಲ್ಲಾ ಘಟನೆಗಳು ಹೂವನ್ನು ಎತ್ತಿ
ದಷ್ಟೇ ಸರಾಗವಾಗಿ ಘಟಿಸುತ್ತದೆ. ಹಲವು
ಸಮಸ್ಯೆಗಳು ಈ ದಿನ ಬಗೆಹರಿಯಲಿವೆ.

ಕುಂಭ
ಬಾಂಧವರು ನಿಮ್ಮ ಮೇಲೆ ಹರಿ ಹಾಯಲು
ಕಾರಣ ನಿಮ್ಮ ನೇರ ನುಡಿಯು ಒ್ಳೆಯ
ಸ್ವಭಾವವೇ ಆದರೆ ಮುಂಗೋಪವ ಬಿಡಿ.

ಮೀನ
ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು
ಸರಿಯಾದ ಸಮಯವಿದು. ಆದರೆ ಹೆಚ್ಚು
ಹೊಗಳುವಿಕೆಗೆ ಮಾರು ಹೋಗದಂತಿರಿ.

loader