ಈ ದಿನವು ಅಲ್ಪ ಮಟ್ಟಿನ ಬೇಸರಕ್ಕೆ ಕಾರಣವಾಗಲಿದೆ.

First Published 25, Jul 2018, 7:04 AM IST
Dina Bhavishya july 25
Highlights

ಈ ದಿನವು ಅಲ್ಪ ಮಟ್ಟಿನ ಬೇಸರಕ್ಕೆ ಕಾರಣವಾಗಲಿದೆ. 

ಮೇಷ
ಗ್ರಹಗಳ ವ್ಯತ್ಯಾಸದಿಂದ ಇಂದಿನ ದಿನ ಸ್ವಲ್ಪ
ಖುಷಿ, ಸ್ವಲ್ಪ ಬೇಸರವ ಉಂಟು ಮಾಡಲಿವೆ.
ಕುಟುಂಬದವರೊಂದಿಗೆ ಖುಷಿಯಾಗಿರುವಿರಿ.

ವೃಷಭ
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಒಳ್ಳೆಯ
ಸಮಯ. ವಿದ್ಯಾರ್ಥಿಗಳು ಸ್ವಲ್ಪ ಪರಿಶ್ರಮ
ಪಡಲೇಬೇಕು. ಕಷ್ಟ ಪಟ್ಟರೆ ಫಲವಲ್ಲವೇ?

ಮಿಥುನ
ನಿಮ್ಮ ನೆರೆಯವರ ಬಗ್ಗೆ ಅನುಕಂಪವಿರಲಿ.
ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡುವ
ಕಾಲವೀಗ ಬಂದಿದೆ. ಇಂದು ಖುಷಿಯ ದಿನ.

ಕಟಕ
ಭಾರಿ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ. ಈ
ಬದಲಾವಣೆ ನಿರೀಕ್ಷಿಸಿದ್ದೇ ಆಗಿತ್ತು. ಆದರೆ
ಈ ವಿಷಯದಲ್ಲಿ ಆತುರ ಪಡದಿದ್ದರೆ ಒಳಿತು.

ಸಿಂಹ
ಗುತ್ತಿಗೆಗಳಲ್ಲಿ ಅನುಕೂಲವಾಗಲಿವೆ. ಆದರೆ
ಸರಿಯಾದ ರೀತಿಯಲ್ಲಿ ಮಾತುಕತೆ ನಡೆಸು
ವುದು ಕಲಿಯಿರಿ. ಎಚ್ಚರಿಕೆಯಿಂದ ನಿರ್ವಹಿಸಿ.

ಕನ್ಯಾ
ಮನೆಯ ವಿಚಾರಗಳನ್ನು ಯಾರಲ್ಲೂ ಹಂಚಿ
ಕೊಳ್ಳಬೇಡಿ. ಅದು ಕೆಲವು ವೇಳೆ ನಿಮ್ಮ ಬುಡಕ್ಕೆ
ಬಂದು ನಿಮ್ಮನ್ನೇ ಕಾಡಿಸಬಹುದು. ಜೋಕೆ!

ತುಲಾ 
ದೂರದ ನೆಂಟರು ಮನೆಗೆ ಬರಲಿದ್ದಾರೆ.
ಹಳೆಯ ನೆಂಟಸ್ತಿಕೆಯು ಮತ್ತೆ ಚಿಗುರಲಿದೆ.
ಮಗಳಿಗೆ ಹೊಸ ಸಂಬಂಧ ಕೂಡಿ ಬರಲಿದೆ.

ವೃಶ್ಚಿಕ
ಕುಟುಂಬದ ನೆಮ್ಮದಿ, ಸಂತೋಷಗಳು
ಇಂದು ನಿಮ್ಮದಾಗಲಿವೆ. ಮನೆಗೆ ಹೊಸ
ಅತಿಥಿಯ ಆಗಮನವೇ ಇದಕ್ಕೆಲ್ಲಾ ಕಾರಣ. 

ಧನುಸ್ಸು
ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ಹಳೆಯ
ನೆನಪುಗಳನ್ನು ದೂರ ಮಾಡಿ. ಅದರಿಂದ
ಹೊರ ಬನ್ನಿ. ಕೆಲಸ-ಕಾರ್ಯಗಳಲ್ಲಿ ತೊಡಗಿ.

ಮಕರ
ವಿನೋದಯುಕ್ತ ಕಾಲಕ್ಷೇಪಗಳ ಮೂಲಕ
ಸಂತಸದ ಕ್ಷಣಗಳು ನಿಮ್ಮದಾಗುವ ದಿನವಿದು.
ಆರೋಗ್ಯದತ್ತ ಗಮನವಿರಲಿ. ಜೋಪಾನ.

ಕುಂಭ
ತುರ್ತು ವಿಷಯಗಳಿಗೆ ಮೊದಲ ಆದ್ಯತೆ
ನೀಡಿ. ಆಸ್ತಿಯ ವಿವಾದ ಸುಲಭವಾಗಿ ಬಗೆ
ಹರಿಯಲಿವೆ. ನಿರ್ಧಾರ ಖಚಿತವಾಗಿರಲಿ.

ಮೀನ 
ಕೂಡಿಟ್ಟ ಹಣವು ಈಗ ನಿಮಗೆ ಸಹಾಯಕ್ಕೆ
ಬರಲಿದೆ. ಮಗಳಿಂದ ಬರುವ ಫೋನ್
ಕಾಲ್ ನಿಮ್ಮಲ್ಲಿ ಹೊಸ ಹುರುಪನ್ನು ತರಲಿದೆ

loader