ಯಾವರಾಶಿಗೆ ಯಾವ ಫಲ : ಇಂದು ನಿಮ್ಮ ದಿನ ಹೇಗಿದೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Jul 2018, 7:06 AM IST
Dina Bhavishya July 14
Highlights

ಯಾವರಾಶಿಗೆ ಯಾವ ಫಲ : ಇಂದು ನಿಮ್ಮ ದಿನ ಹೇಗಿದೆ..?

ಯಾವರಾಶಿಗೆ ಯಾವ ಫಲ : ಇಂದು ನಿಮ್ಮ ದಿನ ಹೇಗಿದೆ..?

ಮೇಷ
ಮಾತಿನ ಮೇಲೆ ಹಿಡಿತವಿರಲಿ. ಹೊಗಳಿಕೆಗೆ
ಮನಸ್ಸು ಚಂಚಲವಾಗದಿರಲಿ. ಜೀವನದಲ್ಲಿ
ಮತ್ತಷ್ಟು ಯಶಸ್ಸುಗಳು ನಿಮ್ಮದಾಗಲಿವೆ.

ವೃಷಭ
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಲಿದೆ.
ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ.
ಒತ್ತಡವು ಅನಾರೋಗ್ಯಕ್ಕೆ ಕಾರಣವಾಗಲಿದೆ.

ಮಿಥುನ
ನಿಮ್ಮಲ್ಲಿನ ಪರಿಶ್ರಮ ಹಾಗೂ ಏಕಾಗ್ರತೆ
ಯಿಂದ ಬಾಕಿ ಉಳಿದ ಕೆಲಸಗಳು ಮುಗಿಯ
ಲಿವೆ. ಹಣಕಾಸಿನ ಬಗ್ಗೆ ಹೆಚ್ಚು ಚಿಂತಿಸದಿರಿ.

ಕಟಕ
ಪ್ರಯಾಣದ ಆಲಸ್ಯವು ಇಂದೂ ಇರಲಿದೆ.
ಕಷ್ಟದಲ್ಲಿರುವವರಿಗೆ ನಿಮ್ಮದೇ ಮಿತಿಯಲ್ಲಿ
ಸಹಾಯ ಮಾಡಲು ಮುಂದಾಗುತ್ತೀರಿ.

ಸಿಂಹ
ಸುಖವೆಂದರೇನೆಂದು ತಿಳಿಯುವ ದಿನಗಳು
ಇವು. ನಿಮಗೇ ಗೊತ್ತಿಲ್ಲದೇ ನಿಮ್ಮ ಎಲ್ಲಾ
ದಾರಿಗಳು ತಂತಾನೆ ತೆರೆದುಕೊಳ್ಳಲಿವೆ.

ಕನ್ಯಾ
ಕಂಡ ಕಂಡ ದೇವರನ್ನು ಪೂಜಿಸುವ ಬದಲು
ಒಂದು ದೇವರಲ್ಲಿ ಮೊರೆ ಹೋಗಬಹುದಲ್ಲ.
ಕಾಯಕದತ್ತ ನಿಮ್ಮ ಗಮನವಿದ್ದರೆ ಒಳಿತು.

ತುಲಾ 
ಮಗಳ ಮದುವೆಯ ಬಗ್ಗೆ ಆತಂಕ ಬೇಡ.
ವರನ ಕಡೆಯವರೇ ನಿಮ್ಮಲ್ಲಿಗೆ ಬರಲಿದ್ದಾರೆ.
ಹೊಸ ಸಂಬಂಧ ಕೂಡಿ ಬರುವ ದಿನವಾಗಿದೆ.

ವೃಶ್ಚಿಕ
ಹೊಸ ಥರದ ಆಲೋಚನೆಗಳು ನಿಮ್ಮನ್ನು
ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ
ನೆಮ್ಮದಿಯನ್ನು ಹೊಂದುವ ದಿನ ಇದಾಗಿದೆ. 

ಧನುಸ್ಸು
ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುವ
ವ್ಯಕ್ತಿಗಳಿಗೂ ದೊಡ್ಡ ಹೆಸರು ಬರುವ ದಿನ.
ನಿಮ್ಮ ಕಾರ್ಯದಕ್ಷತೆಯೇ ನಿಮಗೆ ಶ್ರೀರಕ್ಷೆ.

ಮಕರ
ದುಡ್ಡು-ಕಾಸಿನ ವ್ಯವಹಾರವು ದಿನ ದಿನಕ್ಕೆ
ಸರಿಹೋಗಲಿದೆ. ಮಾನಸಿಕ ತೊಳಲಾಟ ಕಮ್ಮಿ
ಆಗಲಿದೆ. ಹಿರಿಯರತ್ತ ಹೆಚ್ಚು ಗಮನವಿರಲಿ.

ಕುಂಭ
ದೂರ ಪ್ರಯಾಣ ಸಂಭವ. ಕ್ರೀಡಾ ಚಟು
ವಟಿಕೆಗಳಲ್ಲಿ ಸಾಧನೆ ಮಾಡಲು ಇದು ಸೂಕ್ತ
ಸಮಯ. ಸದುಪಯೋಗ ಪಡಿಸಿಕೊಳ್ಳಿ.

ಮೀನ 
ಪ್ರೀತಿಪಾತ್ರರ ಜೊತೆ ಖುಷಿಯಿಂದ ಇರಲು
ಪ್ರಯತ್ನಿಸಿ. ಅವರನ್ನು ಗೌರವದಿಂದ ಕಾಣಿರಿ.
ಅವರೇ ನಿಮ್ಮ ಆಗುಹೋಗುಗಳಿಗೆ ಕಾರಣರು.

loader