ಇಂದು ನಿಮ್ಮ ರಾಶಿಗೆ ಲಾಭ ಖಚಿತ

Dina Bhavishya July 12
Highlights

ಇಂದು ನಿಮ್ಮ ರಾಶಿಗೆ ಲಾಭ ಖಚಿತ

ಇಂದು ನಿಮ್ಮ ರಾಶಿಗೆ ಲಾಭ ಖಚಿತ

ಮೇಷ
ಸ್ವಂತ ಉದ್ಯೋಗ ಹೊಂದಿರುವವರಿಗೆ ಲಾಭ.
ಸ್ನೇಹಪರ ನಡವಳಿಕೆಯು ನಿಮ್ಮ ಪ್ರಗತಿಗೆ
ಕಾರಣ. ಅವೆಲ್ಲವೂ ನಿಮ್ಮನ್ನು ಕಾಪಾಡಲಿದೆ.

ವೃಷಭ
ವ್ಯವಹಾರದಲ್ಲಿ ಪ್ರಗತಿಯಾಗಲಿದೆ. ಈ ದಿನ
ಎಲ್ಲ ಕೆಲಸಗಳೂ ಕೈ ಹತ್ತುತ್ತವೆ. ಸಣ್ಣಪುಟ್ಟ
ಸಾಲಗಳನ್ನೂ ತೀರಿಸಲಿದ್ದೀರಿ. ಖುಷಿಯ ದಿನ.

ಮಿಥುನ
ಲೇವಾದೇವಿ ವ್ಯವಹಾರದಲ್ಲಿ ಸಮಸೆಗಳು
ಬರದಂತೆ ನಿಗಾವಹಿಸಿ. ವಿದ್ಯಾರ್ಥಿಗಳಿಗೆ
ಪ್ರಗತಿಯ ಕಾಲ. ಕನಸು ಸಾಕಾರವಾಗುತ್ತೆ.

ಕಟಕ
ಆರೋಗ್ಯದತ್ತ ಮುಖ ಮಾಡಲಿದ್ದೀರಿ. ಈ
ದಿನಗಳಲ್ಲಿ ಉತ್ತಮ ಸಂಬಂಧ ಕೂಡಿ ಬರುತ್ತೆ.
ಮನೆ ಕಟ್ಟಲು ಆರಂಭ. ಸಾಲಕ್ಕಾಗಿ ಓಡಾಟ.

ಸಿಂಹ
ಅಂದುಕೊಂಡಂತೆ ಎಲ್ಲ ಕೆಲಸಗಳು ಆಗಲಿವೆ.
ಶ್ರಮಜೀವಿಗಳ ದಿನವಿದು. ಗ್ಯಾರೇಜ್‌ಗಳಲ್ಲಿನ
ಕೆಲಸದವರಿಗೆ ಅವಕಾಶಗಳು ಹೆಚ್ಚು ಸಿಗಲಿವೆ.

ಕನ್ಯಾ
ನಿಮ್ಮ ಒಳ್ಳೆಯ ವಿಚಾರಗಳಿಂದ ನಿಮಗೆ ಆದರ
ಆತಿಥ್ಯಗಳು ಸಿಗಲಿವೆ. ಸುಭೋಜನವನ್ನು ಸವಿ
ಯುವ ಅವಕಾಶವಿದೆ. ಆಸೆ ಅಷ್ಟು ಸರಿಯಲ್ಲ.

ತುಲಾ 
ಇಂದಿನ ಸಮಯ ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

ವೃಶ್ಚಿಕ
ವಿದೇಶ ಪ್ರಯಾಣಕ್ಕೆ ಅವಕಾಶಗಳು ಹೆಚ್ಚು.
ಮಕ್ಕಳಿಗೆ ಉನ್ನತ ಶಿಕ್ಷಣದ ಯೋಗ. ಬಣ್ಣದ
ವ್ಯಾಪಾರಿಗಳಿಗೆ ಹೆಚ್ಚಿನ ಲಾಭವು ಸಿಗಲಿದೆ. 

ಧನುಸ್ಸು
ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆ
ಹೆಚ್ಚು ಗಮನ ನೀಡಿ. ಉದ್ಯೋಗಸ್ಥರ ಕೆಲಸ
ದಲ್ಲಿ ಪ್ರಗತಿ. ಏಕಾಗ್ರತೆಯನ್ನು ರೂಢಿಸಿಕೊಳ್ಳಿ

ಮಕರ
ಲೆಕ್ಕಪತ್ರ ವ್ಯವಹಾರಗಳಲ್ಲಿ ನಿಮ್ಮ ಬುದ್ಧಿ
ವಂತಿಕೆಯು ಈಗ ಉಪಯೋಗಕ್ಕೆ ಬರಲಿದೆ.
ಹಳೆಯ ಕಡತಗಳು ವಿಲೇವಾರಿಯಾಗಲಿದೆ.

ಕುಂಭ
ನಿಮ್ಮ ಚಿತ್ತ-ಚಾಂಚಲ್ಯದಿಂದ ವ್ಯವಹಾರದಲ್ಲಿ
ಏರುಪೇರು. ಪಾರ್ಟನರ್‌ಗಳು ಕೈಗಾವಲಾಗಿ
ನಿಂತು ವ್ಯವಹಾರ ಸರಿದೂಗಿಸಿ ಕೊಡಲಿದ್ದಾರೆ.

ಮೀನ 
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ. ಅದಕ್ಕಾಗಿ
ಹೆಚ್ಚು ಯೋಚಿಸಬೇಡಿ. ದೊಡ್ಡವರು ನಿಮಗೆ
ಸಹಕಾರ ನೀಡಲಿದ್ದಾರೆ. ಖುಷಿಯಾಗಿರಿ.

loader