ಈ ರಾಶಿಯವರಿಗೆ ಇಂದು ವಿಶೇಷ ದಿನ : ಉಳಿದ ರಾಶಿ ಹೇಗಿದೆ..?

Din aBhavishya June 7
Highlights

ಈ ರಾಶಿಯವರಿಗೆ ಇಂದು ವಿಶೇಷ ದಿನ : ಉಳಿದ ರಾಶಿ ಹೇಗಿದೆ..?

ಈ ರಾಶಿಯವರಿಗೆ ಇಂದು ವಿಶೇಷ ದಿನ : ಉಳಿದ ರಾಶಿ ಹೇಗಿದೆ..?

ಮೇಷ
ಪೋಷಕರ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ.
ನಿಮ್ಮ ಮನಸ್ಸಿನ ಭಾವನೆಗಳಿಗೆ ಇಂದು ಹೊಸ
ರೆಕ್ಕೆಪುಕ್ಕಗಳು ಮೂಡಿ ಖುಷಿ ಪಡಲಿದ್ದೀರಿ.

ವೃಷಭ
ಸ್ಥಿರಾಸ್ತಿ ಕೊಳ್ಳುವ ಹಂಬಲವಿದೆ. ಅದರ ಬಗ್ಗೆ
ಮಾತುಕತೆ ನಡೆಯಲಿದೆ. ತುಂಬಾ ತಾಳ್ಮೆಯು
ನಿಮ್ಮಲ್ಲಿರುವ ಕಾರಣವು ನೆಮ್ಮದಿಯೇ ಹೆಚ್ಚು.

ಮಿಥುನ
ಸಣ್ಣ ಹೂಡಿಕೆಗೆ ಬಂಡವಾಳ ಹಾಕಲಿದ್ದೀರಿ.
ನಿಮಗೆ ಸಂತಸ ತರುತ್ತದೆ. ಪ್ರೇಮಪಾಶದಲ್ಲಿ
ಬೀಳುವ ಸಾಧ್ಯತೆಯಿದೆ. ಜೋಪಾನವಾಗಿರಿ.

ಕಟಕ
ಗೆಳೆಯರೆಲ್ಲೂ ಸೇರಿ ಇಂದು ನಿಮ್ಮನ್ನು ವಿಶೇಷ
ವಾಗಿ ಗೌರವಿಸಲಿದ್ದಾರೆ. ಜವಾಬ್ದಾರಿಯು
ಹೆಚ್ಚಾಗಲಿದೆ. ಆತ್ಮ ಸ್ಥೈರ್ಯವೇ ನಿಮ್ಮ ಶಕ್ತಿ.

ಸಿಂಹ
ದೂರ ಪ್ರಯಾಣದ ಯೋಗವಿದೆ. ಕ್ರೀಡಾ
ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಇದು
ಸೂಕ್ತ ಸಮಯ. ಸದುಪಯೋಗ ಪಡಿಸಿಕೊಳ್ಳಿ.

ಕನ್ಯಾ
ಗೆಳೆಯ ವರ್ತನೆ ನಿಮ್ಮಲ್ಲಿ ಕಸಿವಿಸಿಯನ್ನುಂಟು
ಮಾಡುತ್ತಿದೆ. ಇದಕ್ಕಾಗಿ ಹೆಚ್ಚು ಯೋಚಿಸುವ
ಅಗತ್ಯವೇನೂ ಇಲ್ಲ. ತಾಳ್ಮೆಯಿಂದರೆ ಸಾಕು.

ತುಲಾ 
ವಾತಾವರಣ ವೈಪರಿತ್ಯವೇ ವಿಭಿನ್ನವಾಗಿದೆ.
ಹಾಗಾಗಿ ನೀವು ಅನಾರೋಗ್ಯದಿಂದ ಬಳಲು
ವಂತಾಗಿದೆ. ಆರೋಗ್ಯ ತಪಾಸಣೆ ಅಗತ್ಯವಿದೆ.

ವೃಶ್ಚಿಕ
ನೀವಂದುಕೊಂಡಂತೆ ಕೆಲಸಗಳೆಲ್ಲವೂ ಇಂದು
ನಿರಾತಂಕವಾಗಿ ಸಾಗಲಿದೆ. ಗ್ರಹಗತಿಯೂ
ನಿಮಗೆ ಪೂರಕವಾಗಿದ್ದು ಎಲ್ಲ ಶುಭವಾಗಲಿದೆ. 

ಧನುಸ್ಸು
ಮಕ್ಕಳ ಜವಾಬ್ದಾರಿಯ ಹೊಣೆಯು ನಿಮ್ಮನ್ನು
ಎಚ್ಚರಿಸುತ್ತಿದೆ. ಭಯ ಪಡುವ ಅಗತ್ಯವಿಲ್ಲ.
ನಂಬಿಕೆಯೇ ಮುಖ್ಯ. ತನಿಖೆ ನಡೆಸದಿರಿ.

ಮಕರ
ಕಲಹ-ವಿರಸಗಳು ಸ್ವಲ್ಪ ಕಡಿಮೆಯಾಗಲಿದೆ.
ಹೆಂಡತಿ ಊರಿಗೆ ಹೋಗುವ ಯೋಜನೆ ತೀವ್ರ
ವಾಗಿದೆ. ಬಂಧುಗಳನ್ನು ಭೇಟಿಯಾಗಲಿದ್ದೀರಿ.

ಕುಂಭ
ನೀವು ಯೋಜಿಸಿದಂತೆಯೇ ಎಲ್ಲವೂ ನಡೆವ
ದಿನ ಇದಾಗಿದೆ. ಸಂಗೀತ ಕ್ಷೇತ್ರದಲ್ಲಿರುವವರಿಗೆ
ಹೆಚ್ಚಿನ ಮರ್ಯಾದೆ ಸಿಗಲಿದೆ. ಖುಷಿಯ ದಿನ

ಮೀನ 
ನಿಮ್ಮ ಸ್ನೇಹಿತರ ಮಾತಿಗೆ ಸ್ವಲ್ಪ ಬೆಲೆ ಕೊಟ್ಟರೆ
ಒಳ್ಳೆಯದು. ಆ ಪರಿಣಾಮವಾಗಿ ನಿಮ್ಮಿಂದ
ಒಳ್ಳೆಯದನ್ನೇ ಮಾಡಿಸುತ್ತದೆ. ಜಾಗ್ರತೆ ವಹಿಸಿ.

loader