ಮೇಷ: ಮನಸ್ಸು ಮಾಡಿದರೆ ಆಗದೇ ಇರುವ ಕೆಲಸ
ಯಾವುದೂ ಇಲ್ಲ. ಸೋಮಾರಿತನವನ್ನು
ಬಿಟ್ಟು ಮುಂದೆ ಸಾಗಿದರೆ ಶುಭ ಫಲ.

ವೃಷಭ: ಗೆಲ್ಲಲು ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳಿ.
ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ಬೇಡ.
ಹಳೆಯ ಸಾಲಗಳು ವಾಪಸ್ ಆಗಲಿವೆ.

ಮಿಥುನ: ತಂದೆ-ತಾಯಿಗೆ ನೀವೇ ಧೈರ್ಯ ಹೇಳಿ
ಅವರಲ್ಲಿ ಚೈತನ್ಯ ತುಂಬುವ ಕೆಲಸ
ಮಾಡಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.

ಕಟಕ : ಹೆಚ್ಚು ಮಾತಿನಿಂದ ಏನೂ ಆಗುವುದಿಲ್ಲ.
ಅದಕ್ಕೆ ಬದಲಾಗಿ ಶ್ರಮವಹಿಸಿ ದುಡಿಯಲು
ಆರಂಭಿಸಿ. ಆತ್ಮವಿಶ್ವಾಸವಿದ್ದರೆ ಗೆಲುವು ಖಚಿತ.

ಸಿಂಹ: ಒಳ್ಳೆಯದು ಅನ್ನಿಸಿದ್ದನ್ನು ಕಾಲಹರಣ
ಮಾಡದೇ ಮಾಡಿ ಮುಗಿಸಿ. ಐದು ಬೆರಳುಗಳು
ಸಮ ಇಲ್ಲ. ಹಾಗೆಯೇ ವ್ಯಕ್ತಿಗಳೂ ಕೂ

ಕನ್ಯಾ: ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು
ಬೇಡ. ಸೂಕ್ತ ನಿರ್ಧಾರದೊಂದಿಗೆ ಸಾಗುತ್ತಿರಿ.

 ತುಲಾ: ಭವಿಷ್ಯದ ಬಗ್ಗೆ ಯೋಚನೆ ಇರಲಿ. ಆದರೆ
ಅದನ್ನೇ ತಲೆಯಲ್ಲಿ ಇಟ್ಟುಕೊಂಡು
 ಕೊರಗುವುದು ಬೇಡ. ಆದಾಯದಲ್ಲಿ ಹೆಚ್ಚಳ.

ವೃಶ್ಚಿಕ: ಅಪ್ರಿಯವಾದ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ
ಮಾಡುತ್ತಾ ಕೂರುವುದು ಬೇಡ. ಅಗತ್ಯಕ್ಕಿಂತ
ಹೆಚ್ಚು ಮಾತು, ಊಟ ಕೂಡದು. ಶುಭ ಫಲ.

ಧನಸ್ಸು:ಮತ್ತೊಬ್ಬರ ಕಷ್ಟಕ್ಕೆ ನೀವು ನೆರವಾಗಿ ನಿಲ್ಲಲಿ
ದ್ದೀರಿ. ನಿಮ್ಮಲ್ಲಿರುವ ನೋವಿಗೆ ಮತ್ತೊಬ್ಬರು
ನೆರವಾಗಲಿದ್ದಾರೆ. ಕಷ್ಟಪಟ್ಟರೆ ಫಲ ಇದೆ. 

ಮಕರ : ಗುಣಾತ್ಮಕ ಚಿಂತನೆ ಮತ್ತು ಕಾರ್ಯಗಳಿಗೆ
ಹೆಚ್ಚು ಒತ್ತು ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವ
ವನ್ನು ಬಲಿ ಕೊಟ್ಟುಕೊಳ್ಳದಿರಿ. ತಾಳ್ಮೆ ಇರಲಿ.

 ಕುಂಭ : ಹೊಸತನಕ್ಕೆ ಹೊಂದಿಕೊಳ್ಳಬೇಕಾದ
ಅನಿವಾರ್ಯತೆ ಬಂದೊದಗಲಿದೆ. ಎಲ್ಲರೂ
ನಿಮ್ಮ ಸ್ನೇಹಿತರು ಎಂದುಕೊಳ್ಳುವುದು ಬೇಡ.

ಮೀನ:  ಜೊತೆಗಿದ್ದವರೇ ಇಂದು ನಿಮ್ಮ ಬೆನ್ನಿಗೆ ಚೂರಿ
ಹಾಕುವ ಕಾರ್ಯ ಮಾಡಲಿದ್ದಾರೆ.
ಮೀನ ಎಚ್ಚರಿಕೆಯಿಂದ ಇದ್ದರೆ ಅಪಾಯ ಬರದು.