ಮೇಷ : ನಿಮ್ಮ ಭಿನ್ನ ಆಲೋಚನೆಗಳು ಮತ್ತು ಪ್ರತಿಭೆಗೆ ತಕ್ಕುದಾದ ಅವಕಾಶಗಳು ದೊರೆಯಲಿವೆ. ಮಾತು ಕಡಿಮೆ ಮಾಡಿ ಮೌನಕ್ಕೆ ಶರಣಾಗುವಿರಿ.

ವೃಷಭ : ನಿಮಗೆ ಸಂಬಂಧಪಡದ ವಿಚಾರಗಳ ಬಗ್ಗೆ ಹೆಚ್ಚು ತಲೆ ಹಾಕದೇ ಇರುವುದು ಸೂಕ್ತ. ಹಿರಿಯರಿಂದ ಸೂಕ್ತ ಸಲಹೆ ದೊರೆಯಲಿದೆ.

ಮಿಥುನ : ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಲಿದ್ದೀರಿ. ಪುಟ್ಟ ವಿಚಾರಗಳಿಂದ ಹೆಚ್ಚು ಸಂತೋಷ ದಕ್ಕಲಿದೆ. ಆರೋಗ್ಯ ವೃದ್ಧಿ.

ಕಟಕ : ಶಾಂತ ಮನಸ್ಸಿನಿಂದ ಹೆಚ್ಚು ನೆಮ್ಮದಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲಿದ್ದೀರಿ. ಕ್ಷುಲ್ಲಕ ಕಾರಣಗಳಿಗೆ ಕೋಪ ಬೇಡ

ಸಿಂಹ :  ಸುಖ, ಶಾಂತಿಯನ್ನು ಹುಡುಕಿಕೊಂಡು ಹೊರಡದಿರಿ. ನೀವು ಮಾಡುವ ಕಾರ್ಯದಲ್ಲಿಯೇ ಅವೆಲ್ಲಾ ಅಡಗಿವೆ

ಕನ್ಯಾ : ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಅಗತ್ಯ ಮುನ್ನೆಚ್ಚರಿಕೆ ಇರಲಿ. ಅಲ್ಪರ ಸಂಘ ಮಾಡಿ ಅವಮಾನವಾಗುವುದು ಬೇಡ.

ತುಲಾ : ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮತ್ತೊಬ್ಬರ ಬಗ್ಗೆ ಕೇವಲವಾಗಿ ನೋಡುವುದು ಬೇಡ. ನಿಮ್ಮ ದಾರಿಯಲ್ಲಿ ನೀವು ಸಾಗಿ.

ವೃಶ್ಚಿಕ : ಸಂಬಂಧಗಳ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಿರಿ. ಅಸಮರ್ಥರ ಜೊತೆ ಹೆಚ್ಚು ಸಂವಾದ ಬೇಡ. ಕಾರ್ಯದಲ್ಲಿ ಪ್ರಗತಿ.

ಧನಸ್ಸು :  ನಿಮ್ಮ ಭಾರವನ್ನು ನೀವೇ ಹೊರಬೇಕು. ಅದನ್ನು ಮತ್ತೊಬ್ಬರ ಮೇಲೆ ಹೇರುವುದು ಬೇಡ. ಅಳತೆ ಮೀರಿ ನಡೆದುಕೊಳ್ಳದಿರಿ.

ಮಕರ : ನಿಮ್ಮ ಸಾಮರ್ಥ್ಯವನ್ನು ತೋರಿಸುವ ಸಮಯ ಇದೆ. ಸಂಜೆ ವೇಳೆಗೆ ಶುಭ ಸುದ್ದಿ ತಿಳಿಯಲಿದೆ. ಮನಸ್ಸಿದ್ದರೆ ಮಾರ್ಗವೂ ಇದೆ.

ಕುಂಭ : ವಿಚಾರವನ್ನು ಪೂರ್ಣವಾಗಿ ಅರಿತು ಕೊಳ್ಳುವುದರತ್ತ ಹೆಚ್ಚು ಒಲವು ಬೆಳೆಸಿಕೊಳ್ಳಿ. ತುಳಿದು ಬದುಕಲು ಹೋಗದಿರಿ.

ಮೀನ : ಸ್ವಾರ್ಥ ಸಾಧನೆಗೆಗಾಗಿ ನಿಮ್ಮನ್ನು ಬಲಿಪಶು ಮಾಡಿಕೊಳ್ಳುವ ಜನರಿಂದ ಅಂತರ ಕಾಯ್ದುಕೊಳ್ಳಿ. ವಿವೇಕದಿಂದ ಕೆಲಸ ಮಾಡಿ.