ಮೇಷ: ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸುವುದು ಬೇಡ. ಸರಿಯಾದ ಸಮಯಕ್ಕೆ ಅಂದುಕೊಂಡ ಕೆಲಸ ಮಾಡಿ ಮುಗಿಸಿ

ವೃಷಭ: ರಾಜಕಾರಣದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕ ಚರ್ಚೆಗಳಲ್ಲಿ ತೊಡಗುವುದು ಬೇಡ. ಧ್ಯಾನದಿಂದ ಆರೋಗ್ಯ ವೃದ್ಧಿ.

ಮಿಥುನ: ಗ್ರಾಮದ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತು ವಾರಿ ನಿಮ್ಮದಾಗಲಿದೆ. ಸಹೋದ್ಯೋಗಿ ಗಳೊಂದಿಗೆ ಉತ್ತಮ ಭಾಂದವ್ಯ ಏರ್ಪಡಲಿ

ಕಟಕ: ನಿಮ್ಮ ವೃತ್ತಿ ಪ್ರಾವಿಣ್ಯತೆಗೆ ತಕ್ಕಂತಹ ಅವಕಾಶಗಳು ದೊರೆಯಲಿವೆ. ಶಾಂತ ಮನಸ್ಸಿನಿಂದ ಉತ್ಸಾಹ ಹೆಚ್ಚಾಗಲಿದೆ.

ಸಿಂಹ: ನಾಲ್ಕು ಜನರ ಮುಂದೆ ತಲೆ ಎತ್ತಿ ನಿಲ್ಲುವಂತಹ ಕಾರ್ಯ ಇಂದು ನಿಮ್ಮಿಂದ ಆಗುತ್ತದೆ. ಇಡೀ ದಿನ ಸುತ್ತಾಟವೂ ಹೆಚ್ಚಾಗಲಿ

ಕನ್ಯಾ: ತಂದೆ ತಾಯಿಯ ಆತ್ಮಾಭಿಮಾನ ಹೆಚ್ಚಾಗುವಂತಹ ಕಾರ್ಯ ಮಾಡಲಿದ್ದೀರಿ. ದೊಡ್ಡ ಮಟ್ಟದ ಕಾರ್ಯಕ್ಕೆ ಸಿದ್ಧತೆ ಮಾಡುವಿರಿ

ತುಲಾ: ಹುಚ್ಚರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳು ವುದು ಬೇಡ. ಆತ್ಮರತಿ ಹೆಚ್ಚಿರುವವರಿಂದ ತುಲಾ ಅಂತರ ಕಾಯ್ದುಕೊಳ್ಳಿ. ಒಳಿತಾಗಲಿದೆ.

ವೃಶ್ಚಿಕ: ಸಹೋದ್ಯೋಗಿಯ ಏಳಿಗೆಯಿಂದ ನಿಮ್ಮಲ್ಲಿ ಸಣ್ಣ ಬೇಸರ ಉಂಟಾಗಲಿದೆ. ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಮುಂದೆ ಸಾಗಿ.

ಧನುಸ್ಸು: ಹೊಸತೆರನಾದ ಕೆಲಸಗಳನ್ನು ಮಾಡುವುದ ರಿಂದ ಹೊಸ ಉತ್ಸಾಹ ದಕ್ಕುತ್ತದೆ. ಟೀಕೆಗಳಿಗೆ ಅಂಜಿಕೊಂಡು ಕೂರುವುದು ಬೇಡ

ಕುಂಭ: ನಿಮ್ಮ ಬಗ್ಗೆ ಬಂದ ಟೀಕೆಗಳಿಗೆ ಕಾಲವೇ ಉತ್ತರಿಸಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಖರ್ಚಿನ ಮೇಲೆ ಹಿಡಿತ ಇರಲಿ

ಮೀನ: ಸಂಜೆ ವೇಳೆಗೆ ಮೌನವಾಗಿ ಕುಳಿತು ದಿನವೆಲ್ಲಾ ಮಾಡಿದ ಕೆಲಸಗಳ ಬಗ್ಗೆ ಮನನ ಮಾಡಿಕೊಳ್ಳಿ. ನಾಳೆಗೆ ಒಳ್ಳೆಯ ಪ್ಲ್ಯಾನ್ ಮಾಡಿಕೊಳಿ

ಆಗುತ್ತೆ ಅಂದುಕೊಂಡರೆ ಆಗುತ್ತೆ, ಆಗಲ್ಲ ಎಂದುಕೊಂಡರೆ ಆಗುವುದಿಲ್ಲ. ಇಚ್ಛಾಶಕ್ತಿ ಇದ್ದರೆ ಏನು ಬೇಕಿದ್ದರೂ ಮಾಡಬಹುದು.