Asianet Suvarna News Asianet Suvarna News

ಮನೆಯಲ್ಲಿ ಸಂತೋಷ, ದೊಡ್ಡ ಮಟ್ಟದ ಕಾರ್ಯಕ್ಕೆ ಸಿದ್ಧತೆ: ಹೀಗಿದೆ ದಿನ ಭವಿಷ್ಯ

ಇಂದು ಯಾವ ರಾಶಿಯವರಿಗೆ ಯಾವ ಫಲ, ಯಾರಿಗೆ ಅನುಕೂಲ. ನಿಮ್ಮ ಪಾಲಿಗೆ ಇಂದಿನ ದಿನ ಹೇಗಿರಲಿದೆ

Daily Horoscope Of March 13th 2019
Author
Bangalore, First Published Mar 13, 2019, 7:27 AM IST

ಮೇಷ: ಆಗುತ್ತೆ ಅಂದುಕೊಂಡರೆ ಆಗುತ್ತೆ, ಆಗಲ್ಲ ಎಂದುಕೊಂಡರೆ ಆಗುವುದಿಲ್ಲ. ಇಚ್ಛಾಶಕ್ತಿ ಇದ್ದರೆ ಏನು ಬೇಕಿದ್ದರೂ ಮಾಡಬಹುದು

ವೃಷಭ: ಹೊಸತೆರನಾದ ಕೆಲಸಗಳನ್ನು ಮಾಡುವುದರಿಂದ ಹೊಸ ಉತ್ಸಾಹ ದಕ್ಕುತ್ತದೆ. ಟೀಕೆಗಳಿಗೆ ಅಂಜಿಕೊಂಡು ಕೂರುವುದು ಬೇ

ಮಿಥುನ: ಸಹೋದ್ಯೋಗಿಯ ಏಳಿಗೆಯಿಂದ ನಿಮ್ಮಲ್ಲಿ ಸಣ್ಣ ಬೇಸರ ಉಂಟಾಗಲಿದೆ. ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಮುಂದೆ ಸಾಗಿ.

ಕಟಕ: ನಾಲ್ಕು ಜನರ ಮುಂದೆ ತಲೆ ಎತ್ತಿ ನಿಲ್ಲುವಂತಹ ಕಾರ್ಯ ಇಂದು ನಿಮ್ಮಿಂದ ಆಗುತ್ತದೆ. ಇಡೀ ದಿನ ಸುತ್ತಾಟವೂ ಹೆಚ್ಚಾಗಲಿದೆ.

ಸಿಂಹ: ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸುವುದು ಬೇಡ. ಸರಿಯಾದ ಸಮಯಕ್ಕೆ ಅಂದುಕೊಂಡ ಕೆಲಸ ಮಾಡಿ ಮುಗಿಸಿ.

ಕನ್ಯಾ: ರಾಜಕಾರಣದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕ ಚರ್ಚೆಗಳಲ್ಲಿ ತೊಡಗುವುದು ಬೇಡ. ಧ್ಯಾನದಿಂದ ಆರೋಗ್ಯ ವೃದ್ಧಿ.

ತುಲಾ: ಸಂಜೆ ವೇಳೆಗೆ ಮೌನವಾಗಿ ಕುಳಿತು ದಿನವೆಲ್ಲಾ ಮಾಡಿದ ಕೆಲಸಗಳ ಬಗ್ಗೆ ಮನನ ಮಾಡಿಕೊಳ್ಳಿ. ನಾಳೆಗೆ ಒಳ್ಳೆಯ ಪ್ಲ್ಯಾನ್ ಮಾಡಿಕೊಳ್ಳಿ

ವೃಶ್ಚಿಕ: ನಿಮ್ಮ ಬಗ್ಗೆ ಬಂದ ಟೀಕೆಗಳಿಗೆ ಕಾಲವೇ ಉತ್ತರಿಸಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಖರ್ಚಿನ ಮೇಲೆ ಹಿಡಿತ ಇರಲಿ

ಧನಸ್ಸು: ತಂದೆ ತಾಯಿಯ ಆತ್ಮಾಭಿಮಾನ ಹೆಚ್ಚಾಗುವಂತಹ ಕಾರ್ಯ ಮಾಡಲಿದ್ದೀರಿ. ದೊಡ್ಡ ಮಟ್ಟದ ಕಾರ್ಯಕ್ಕೆ ಸಿದ್ಧತೆ ಮಾಡುವಿರಿ

ಮಕರ: ಗ್ರಾಮದ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತು ವಾರಿ ನಿಮ್ಮದಾಗಲಿದೆ. ಸಹೋದ್ಯೋಗಿ ಗಳೊಂದಿಗೆ ಉತ್ತಮ ಭಾಂದವ್ಯ ಏರ್ಪಡಲಿ

ಕುಂಭ: ನಿಮ್ಮ ವೃತ್ತಿ ಪ್ರಾವಿಣ್ಯತೆಗೆ ತಕ್ಕಂತಹ ಅವಕಾಶಗಳು ದೊರೆಯಲಿವೆ. ಶಾಂತ ಮನಸ್ಸಿನಿಂದ ಉತ್ಸಾಹ ಹೆಚ್ಚಾಗಲಿದೆ.

ಮೀನ: ಹುಚ್ಚರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಆತ್ಮರತಿ ಹೆಚ್ಚಿರುವವರಿಂದ ಅಂತರ ಕಾಯ್ದುಕೊಳ್ಳಿ. ಒಳಿತಾಗಲಿದೆ.

Follow Us:
Download App:
  • android
  • ios