ಮೇಷ: ನಿಮ್ಮಿಂದ ಸಾಧ್ಯವಾಗುವ ಕಾರ್ಯಗಳನ್ನು ಮಾತ್ರವೇ ಕೈಗೆತ್ತಿಕೊಳ್ಳಿ. ಹೆಚ್ಚು ಮೌನ ಮತ್ತು ಹೆಚ್ಚು ಮಾತು ಎರಡೂ ಒಳ್ಳೆಯದ್ದಲ್ಲ.

ವೃಷಭ: ನೀವು ನಂಬಿದ್ದ ವ್ಯಕ್ತಿಗಳೇ ಇಂದು ನಿಮ್ಮ ವಿರುದ್ಧವಾಗಿ ತಿರುಗಿ ಬೀಳುವ ಸಾಧ್ಯತೆ ಇದೆ. ಅಪರೂಪದ ವ್ಯಕ್ತಿಗಳ ಪರಿಚಯವಾಗಲಿದೆ.

ಮಿಥುನ: ಅಲ್ಪ ಮತಿಗಳ ಮಾತಿಗೆ ಹೆಚ್ಚು ಬೆಲೆ ನೀಡುವುದು ಬೇಡ. ದೊಡ್ಡ ಮಟ್ಟದ ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ.

ಕಟಕ: ಮಾತಿಗಿಂತ ಮಾಡಿ ತೋರಿಸುವುದು ಉತ್ತಮ. ಸಿಕ್ಕದ ಹಣ್ಣು ಯಾವಾಗಲೂ ಹುಳಿ ಎನ್ನುವ ಮಾತು ಇಂದು ನಿಮಗೆ ಅನ್ವಯವಾಗಲಿದೆ.

ಸಿಂಹ: ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಿ. ಹೊಸ ವಿಚಾರಗಳ ಕಲಿಕೆಗೆ ಹೆಚ್ಚು ಅವಕಾಶಗಳು ದಕ್ಕಲಿವೆ. ಹಿರಿಯರ ಸಹಾಯವಿದೆ

ಕನ್ಯಾ: ಹಿಂದಿನ ಇಡುಗಂಟು ಇಂದು ಅನುಕೂಲಕ್ಕೆ ಬರಲಿದೆ. ಮುಂದೆ ನಯವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ಎಚ್ಚರ ಇರಲಿ.

ತುಲಾ: ನಾಳೆಗಳ ಬಗ್ಗೆ ಹೆಚ್ಚು ಯೋಚನೆ ಮಾಡುವುದು ಬೇಡ. ಮತ್ತೊಬ್ಬರ ತುಲಾ ಪ್ರಗತಿಯಿಂದ ಸ್ಫೂರ್ತಿಗೊಳ್ಳಲಿದ್ದೀರಿ.

ವೃಶ್ಚಿಕ: ಒಳ್ಳೆಯ ಆಲೋಚನೆಗಳು ಹೆಚ್ಚಾದಷ್ಟೂ ಒಳ್ಳೆಯ ಫಲಗಳೇ ಸಿಕ್ಕಲಿವೆ. ತಾಳ್ಮೆಯಿಂದ ಕಾದರೆ ಸೂಕ್ತ ಪ್ರತಿಫಲ ದೊರೆಯಲಿದೆ.

ಧನಸ್ಸು: ಹಾಸಿಗೆ ಇದ್ದಷ್ಟಕ್ಕೆ ಮಾತ್ರ ಕಾಲು ಚಾಚುವುದು ಒಳ್ಳೆಯದ್ದು. ನಿಮಗೆ ಹೊರಿಸಿದ ಭಾರವನ್ನು ನೀವೇ ಹೊರಬೇಕು. ಶುಭವಾಗಲಿದೆ.

ಮಕರ: ಹಳೆಯ ಆತ್ಮೀಯರ ಭೇಟಿಯಾಗುವಿರಿ. ಯೋಜಿತ ಕಾರ್ಯಗಳು ನಿರೀಕ್ಷಿತ ಫಲ ನೀಡಲಿವೆ. ಹೋಟೆಲ್ ಉದ್ಯಮಿಗಳಿಗೆ ಲಾಭ

ಕುಂಭ: ಅಯೋಗ್ಯರ ಮುಂದೆ ನಿಮ್ಮ ಪ್ರತಿಭೆಯ ಪ್ರದರ್ಶನ ಮಾಡಿಕೊಳ್ಳದಿರಿ. ಇಡೀ ದಿನ ಸಂತೋಷದಿಂದ ಕಳೆಯಲಿದ್ದೀರಿ.

ಮೀನ: ಆತ್ಮೀಯ ಸ್ನೇಹಿತರು ಕೆಲ ಕಾಲ ನಿಮ್ಮಿಂದ ದೂರವಾಗಲಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ