ಕನ್ಯಾ ರಾಶಿಯವರಿಗೆ ಸ್ತ್ರೀ ಚಿಂತನೆಯಿಂದ ಹೆಚ್ಚಲಿದೆ ದುಃಖ, ಬೇರೆಯವರ ರಾಶಿ ಫಲ ಹೇಗಿದೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Aug 2018, 7:00 AM IST
Daily horoscope of August 18 2018
Highlights

ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಬುಧ, ರಾಹುಗಳಿದ್ದು, ರವಿಯು ಸಿಂಹರಾಶಿಯಲ್ಲಿದ್ದು,  ಶುಕ್ರನು  ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ತುಲಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.

ಮೇಷ ರಾಶಿ: ಆತ್ಮೀಯರೇ ಇಂದು ನಿಮ್ಮ ಮನಸ್ಸಿನ ಅಭೀಷ್ಟಗಳು ಸಿದ್ಧಿಯಾಗುತ್ತವೆ. ಆದರೆ ಸ್ವಲ್ಪ ದೇಹ ಬಾಧೆ ಇರಲಿದೆ, ನಿಮ್ಮ  ಮನೆಯಲ್ಲಿ ಸ್ವಲ್ಪ ಆರೋಗ್ಯ ಬಾಧೆ ಕಾಡಲಿದ್ದು, ಶೀಘ್ರ ಪರಿಹಾರವೂ ಇದೆ. ಮನಸ್ಸು ಸ್ವಲ್ಪ ಖಿನ್ನವಾಗಲಿದೆ.
ದೋಷಪರಿಹಾರ: ದುರ್ಗಾ ದೇವಿಗೆ ಹಾಲು ಬೆಲ್ಲವನ್ನ ಸಮರ್ಪಣೆ ಮಾಡಿ

ವೃಷಭ: ಹೆಣ್ಣುಮಕ್ಕಳಿಂದ ಸ್ವಲ್ಪ ತಕರಾರಾಗುವ ಸಾಧ್ಯತೆ ಇದೆ, ಮುಖ್ಯವಾಗಿ ನಿಮ್ಮ ಕಾಲು ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುತ್ತದೆ. ಧನ ಸ್ಥಾನಕ್ಕೆ ಶನಿ ದೃಷ್ಟಿಯಿರುವುದರಿಂದ ಧನ ವ್ಯಯವಾಗುವ ಸಾಧ್ಯತೆ ಇದೆ. ಧನಾಕರ್ಷಣ ಯಂತ್ರ ಮಾಡಿಸಿಕೊಳ್ಳಿ.
ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಹಾಲು ನೈವೇದ್ಯ ಮಾಡಿ.

ಮಿಥುನ: ನಿಮ್ಮ ಕುಟುಂಬಕ್ಕೆ ಬರಬೇಕಾದ ಹಣ ದುಷ್ಟರಿಂದ ಬರದಂತಾಗುತ್ತದೆ. ಮಾತಿನಿಂದ ಸ್ವಲ್ಪ ಘರ್ಷಣೆ, ಓರ್ವ ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಯೋಚಿಸಬೇಡಿ. 
ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತುಳಸಿ ಮಾಲೆ ಸಮರ್ಪಣೆ ಮಾಡಿ

ಕಟಕ: ಇಂದು ಇಂದು ನಿಮ್ಮ ತಾಯಿಯಿಂದ ಉತ್ತಮ ಸಹಕಾರ ಸಿಗಲಿದೆ, ಗುರು ದರ್ಶನಕ್ಕಾಗಿ ಪ್ರಯಾಣ ಬೆಳೆಸುವ ಸಾಧ್ಯತೆ, ನಿಮ್ಮ ದಾಂಪತ್ಯದಲ್ಲಿ ಸ್ವಲ್ಪ ತೊಡಕು ಉಂಟಾಗುವ ಸಾಧ್ಯತೆ, ನಿಮ್ಮ ಸಹೋದರಿಯಿಂದ ಸ್ವಲ್ಪ ಬೇಸರವಾಗಬಹುದು. ಮಾತು ಹಿಡಿತದಲ್ಲಿರಲಿ.
ದೋಷ ಪರಿಹಾರ : ಜಲ ದುರ್ಗೆಗೆ ಫಲತಾಂಬೂಲ ಸಮರ್ಪಣೆ ಮಾಡಿ

ಸಿಂಹ: ಆತ್ಮೀಯರೇ, ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಲಿದೆ. ನಿಮ್ಮ ತಂದೆಯಿಂದ ಸಹಕಾರ ದೊರೆಯಲಿದೆ, ಸಹೋದರರ ಸಹಕಾರ, ನಿಮ್ಮ ಮಕ್ಕಳಿಂದ ಸ್ವಲ್ಪ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಾಹನದಲ್ಲಿ ಸ್ವಲ್ಪ ತೊಡಕಾಗಬಹುದು ಎಚ್ಚರವಾಗಿರಿ.
ದೋಷ ಪರಿಹಾರ: ಸೂರ್ಯನಿಗೆ 21 ನಮಸ್ಕಾರ ಮಾಡಿ ಹಾಗೂ ಕುಜ ಪ್ರಾರ್ಥನೆ ಮಾಡಿ

ಕನ್ಯಾ: ಆತ್ಮೀಯರೇ ಇಂದು ನಿಮ್ಮ ಮನಸ್ಸಿನಲ್ಲಿ ಓರ್ವ ಸ್ತ್ರೀ ಚಿಂತನೆ, ಚಿಂತನೆಯಿಂದ ಸ್ವಲ್ಪ ದು:ಖ, ನಿಮ್ಮ ಆದಾಯದ ಮೂಲ ಹೆಚ್ಚಲಿದೆ, ವಾಹನ ಸಂಚಾರ ಮಾಡುವಾಗ ಎಚ್ಚರವಾಗಿರಿ, ನಿಮ್ಮ ಸಂಕಲ್ಪ ಈಡೇರುವ ಮುನ್ನ ಕುಲದೇವತೆಯ ಆರಾಧನೆ ಮಾಡಿ
ದೋಷ ಪರಿಹಾರ: ವಿಷ್ಣು ದೇವಸ್ಥಾನದಲ್ಲಿ ಶ್ರೀಸೂಕ್ತ ಪಾರಾಯಣ ಮಾಡಿಸಿ

ತುಲಾ:  ಆತ್ಮೀಯರೇ ನಿಮ್ಮ ದಿನ ಸುಖಮಯವಾಗಿರಲಿದೆ, ಅಂದುಕೊಂಡ ಕಾರ್ಯ ಸಾಧನೆ, ಸಮಾರಂಭಗಳಲ್ಲಿ ಭಾಗಿಯಾಗುವ ದಿನ, ಉತ್ತಮ ಕಾರ್ಯಗಳಿಗೆ ಚಾಲನೆ, ಕಾರ್ಯಕ್ಕೆ ಹೊರಡುವ ಮುನ್ನ ನಿಮ್ಮ ತಾಯಿಗೆ ನಮಸ್ಕಾರ ಮಾಡಿ ಹೊರಡಿ.
ದೋಷ ಪರಿಹಾರ: ದೇವಿ ದೇವಸ್ಥಾನಕ್ಕೆ ಬೆಲ್ಲ ಅಕ್ಕಿ ಸಮರ್ಪಣೆ ಮಾಡಿ

ವೃಶ್ಚಿಕ:ನಿಮ್ಮ ಸಹೋದರರಲ್ಲಿ ಸಹಕಾರ, ಆಸ್ತಿ ವಿಚಾರದಲ್ಲಿ ಸ್ವಲ್ಪ ಮನಸ್ತಾಪ, ಮಾತಿನಿಂದ ಸ್ವಲ್ಪ ಕಲಹಗಳು ಉಂಟಾಗಲಿವೆ. ನಿಮ್ಮ ಕುಲ ದೇವರಿಗೆ ಕುಟುಂಬ ಸಮೇತ ಹೋಗಿಬನ್ನಿ. 
ದೋಷ ಪರಿಹಾರ : ಸುಬ್ರಹ್ಮಣ್ಯನಿಗೆ ತುಪ್ಪ ಸಮರ್ಪಣೆ ಮಾಡಿ

ಧನಸ್ಸು: ಆತ್ಮೀಯರೇ ಶರೀರದಲ್ಲಿ ಸ್ವಲ್ಪ ಗಾಯವಾಗುವ ಸಂಭವ, ಓಡಾಡುವಾಗ ಎಚ್ಚರವಿರಲಿ, ನಿಮ್ಮ ತಾಯಿಯಿಂದ ಅನುಕೂಲ ಹಾಗೂ ಸಹಾಯ, ವ್ಯಾಪಾರದಲ್ಲಿ ಲಾಭವಾಗಲಿದೆ. ನಿಮ್ಮ ಶ್ರಮ ನಿಮ್ಮ ಕೈಹಿಡಿಯಲಿದೆ. 
ದೋಷ ಪರಿಹಾರ: ಔದುಂಬರ ವೃಕ್ಷಕ್ಕೆ ನಮಸ್ಕಾರ ಮಾಡಿ

ಮಕರ: ಆತ್ಮೀಯರೇ ನಿಮ್ಮ ಸುಖ ಇಮ್ಮಡಿಯಾಗಲಿದೆ, ಧನ ಲಾಭವೂ ಇದೆ, ಮನೆಯವರಿಂದ ಸ್ವಲ್ಪ ಹಿನ್ನಡೆಯಾಗುವ ಸಾದ್ಯತೆ ಇದೆ, ನಿಮ್ಮ ಬಂಧುಗಳು ಹಾಗೂ ಮಿತ್ರರು ನಿಮ್ಮ ಅನುಕೂಲಕ್ಕೆ ಬರಲಿದ್ದಾರೆ. ಪ್ರಯಾಣದ ದಿನವೂ ಹೌದು. ಸ್ವಲ್ಪ ಎಚ್ಚರವಿರಲಿ.
ದೋಷ ಪರಿಹಾರ: ನಿಮ್ಮ ಇಷ್ಟ ದೇವರಿಗೆ 5 ನಮಸ್ಕಾರ ಹಾಕಿ

ಕುಂಭ: ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಉತ್ತಮ ದಿನ, ಹಣ ಹರಿದುಬರುವ ದಿನ, ನಿಮ್ಮ ಆಲೋಚನೆಗಳು ಸಂಪೂರ್ಣವಾಗಿ ಸುಖಹೊಂದುವ ದಿನವಾಗಿದೆ. ಮನಸ್ಸು ಚೇತೋಹಾರಿಯಾಗಿರಲಿದೆ. 
ದೋಷ ಪರಿಹಾರ:  ಶನೈಶ್ಚರ ಸ್ವಾಮಿಗೆ ಎಳ್ಳೆಣ್ಣೆಯ ದೀಪ ಹಚ್ಚಿ.

ಮೀನ: ಮಿತ್ರರೇ ಇಂದು ನಿಮ್ಮ ಮನೆಯಲ್ಲಿ ಒಂದು ಪುಟ್ಟ ಕೂಟವನ್ನು ತಯಾರು ಮಾಡಿಕೊಳ್ಳುವ ದಿನ, ಮಿತ್ರರ ಭೇಟಿ, ಸ್ವಲ್ಪ ಆರೋಗ್ಯ ವ್ಯತ್ಯಯವಾಗಬಹುದು. ಮುಖ್ಯವಾಗಿ ಇಂದು ಐಹಿಕ ಸುಖಕ್ಕಾಗಿ ಧನ ವ್ಯಯ.
ದೋಷ ಪರಿಹಾರ: ದತ್ತಾತ್ರೇಯ ದರ್ಶನ ಮಾಡಿ

- ಗೀತಾಸುತ.

ಜ್ಯೋತಿಷ್ಯ ಸುದ್ದಿಗಳಿಗಾಗಿ ಇಲ್ಲಿ ಹೇಗೆ ಮಾಡಿ

loader