ದಿನ ಭವಿಷ್ಯ: 31 ಆಗಸ್ಟ್ 2019, ಶನಿವಾರ

ಮೇಷ: ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಒಡನಾಟ ಬೆಳೆಯಲಿದೆ. ದೊಡ್ಡ ಆಸೆ ಹೊತ್ತುಕೊಂಡು ಅದರತ್ತ ಚಿತ್ತ ಹರಿಸಿ.

ವೃಷಭ: ಬದುಕು ಹೊಸ ಸಾಧ್ಯತೆಯತ್ತ ಹೊರಳಿಕೊಳ್ಳುವ ಹಂತ ಇದು. ಸಂತೋಷದಿಂದ ಇದ್ದರೆ ಏನು ಬೇಕಿದ್ದರೂ ಮಾಡಬಹುದು.

ಮಿಥುನ: ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಲಿದೆ. ಆಪ್ತರು ನೆರವಿಗೆ ಬರಲಿದ್ದಾರೆ. ಹೊಸ ವಸ್ತು ಕೊಳ್ಳುವ ಯೋಗ.

ಕಟಕ: ಖರ್ಚಿನ ಮೇಲೆ ಹಿಡಿತ ಇರಲಿ. ಕಂಡದ್ದಲ್ಲವೂ ಬೇಕು ಎನ್ನುವ ಹಠ ಬೇಡ. ಒಳ್ಳೆಯ ಮನಸ್ಸಿನಿಂದ ದಾನ, ಧರ್ಮ ಮಾಡುವಿರಿ.

ಸಿಂಹ: ಮಾತಿನಲ್ಲಿ ಹಿಡಿತ, ಆಹಾರದಲ್ಲಿ ಮಿತಿ ಇರಲಿ. ಇಡೀ ದಿನ ಸಂತೋಷದಿಂದ ಕಳೆಯಲಿದ್ದೀರಿ. ಪ್ರಯಾಣ ಮಾಡಬೇಕಾದ ಅನಿವಾರ್ಯತೆ.

ಕನ್ಯಾ: ಹೊಸ ವ್ಯಕ್ತಿಗಳಿಂದ ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಎಲ್ಲದ್ದಕ್ಕೂ ಮಿತಿ ಇದೆ. ಹಾಗೆಯೇ ನಿಮ್ಮ ಕಷ್ಟಕ್ಕೂ ಕೊನೆ ಇದೆ.

ತುಲಾ: ಚಿಂತೆ ಮಾಡುತ್ತಾ ಕೂರುವ ಬದಲು ಒಳ್ಳೆಯ ಚಿಂತನೆ ಮಾಡಿ. ಮುಂದಿನ ಕಾರ್ಯಗಳಿಗೆ ಇಂದಿನಿಂದಲೇ ಸಜ್ಜಾಗಲಿದ್ದೀರಿ. ಶುಭ ಫಲ.

ವೃಶ್ಚಿಕ: ಮಾನಸಿಕವಾಗಿ ಗಟ್ಟಿಯಾಗಿ ಇದ್ದರೂ ದೈಹಿಕವಾಗಿ ಕೊಂಚ ಕುಸಿಯಲಿದ್ದೀರಿ. ಸವಾಲುಗಳಿಗೆ ಎದೆಯೊಡ್ಡಿ ಮುಂದೆ ಸಾಗಿ.

ಧನುಸ್ಸು: ಹೊಸದನ್ನು ತಿಳಿಯಲು ಹಿಂಜರಿಕೆ ಬೇಡ. ನೀವು ಕಷ್ಟಪಟ್ಟು ಮಾಡಿದ ಕಾರ್ಯಗಳಿಗೆ ಸರಿಯಾದ ಪ್ರತಿಫಲ ಪಡೆದುಕೊಳ್ಳಲಿದ್ದೀರಿ.

ಮಕರ: ಮೇಲಾಧಿಕಾರಿಗಳ ಮಾತಿಗೆ ಕಟ್ಟು ಬೀಳಬೇಕಾಗಿ ಬರಬಹುದು. ಹೆಚ್ಚು ಮಾತು, ಕಡಿಮೆ ಸಂಪಾದನೆ. ನೆಮ್ಮದಿ ಇರಲಿ

ಕುಂಭ: ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡುತ್ತಾ ಕೂರಬೇಡಿ. ಯಾವ ಕೆಲಸ ಯಾವಾಗ ಮಾಡಬೇಕು ಎಂದು ಪಟ್ಟಿ ಮಾಡಿ.

ಮೀನ: ಸುತ್ತಾಟಗಳು ಹೆಚ್ಚಾಗಲಿವೆ. ಇದರಿಂದ ಮುಂದೆ ನಿಮಗೆ ಹೆಚ್ಚು ಅನುಕೂಲ ಆಗಲಿದೆ. ಗೆಲುವು ಅಷ್ಟು ಸುಲಭಕ್ಕೆ ನಿಮ್ಮ ಪಾಲಾಗದು