ಮೇಷ: ಮುಂದೆ ಬರಬಹುದಾದ ಆರ್ಥಿಕ ಹೊರೆಯನ್ನು ಇಂದೇ ಅಂದಾಜು ಮಾಡಿಕೊಂಡು ಆ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಿದ್ದೀರಿ.

ವೃಷಭ: ಹೊಸ ವಸ್ತುಗಳನ್ನು ಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ಇರಲಿ. ನಿಮ್ಮ ಗುಣ ಸ್ವಭಾವಕ್ಕೆ ತಕ್ಕನಾದ ಸ್ನೇಹಿತರು ಇಂದು ಸಿಕ್ಕಲಿದ್ದಾರೆ.

ಮಿಥುನ: ಮಾತನಾಡಿ ಕೆಟ್ಟವನು ಎನ್ನಿಸಿಕೊಳ್ಳುವುದಕ್ಕಿಂತ ಮೌನವಾಗಿ ಇದ್ದುಬಿಡುವುದೇ ಲೇಸು. ಸಂಬಂಧಗಳಿಗೆ ಬೆಲೆ ನೀಡಲಿದ್ದೀರಿ. ಶುಭಫಲ

ಕಟಕ: ನಯಾಪೈಸೆ ಕೆಲಸಕ್ಕೆ ಬಾರದ ವ್ಯಕ್ತಿಗಳಿಂದ ಇಂದು ನಿಮ್ಮ ದಿನಚರಿಯ ಬಹುಪಾಲು ಸಮಯ ವ್ಯರ್ಥವಾಗುವ ಸಾಧ್ಯತೆ ಹೆಚ್ಚಿದೆ.

ಸಿಂಹ: ಸಂಕೋಚವನ್ನು ಬಿಟ್ಟು ನಿಮಗೆ ಆಗಬೇಕಾದ ಕೆಲಸವನ್ನು ಅಧಿಕಾರಗಳ ಮಟ್ಟದಲ್ಲಿ ಮಾಡಿಸಿಕೊಳ್ಳಲಿದ್ದೀರಿ. ತಾಳ್ಮೆ ಸಹಕಾರಿಯಾಗಲಿದೆ.

ಕನ್ಯಾ: ನಾಳೆಗಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾ ಕುಳಿತು ಇಂದಿನ ಸಂತೋಷವನ್ನು ಹಾಳು ಮಾಡಿಕೊಳ್ಳದಿರಿ. ಗಾಳಿ ಮಾತಿಗೆ ಕಿವಿಕೊಡದಿರಿ

ತುಲಾ: ಬಂಧುಗಳೇ ಇಂದು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಆತ್ಮಸ್ಥೈ ರ್ಯ ಹೆಚ್ಚಾಗಲಿದೆ. ಯಾರಿಗೂ ತಲೆ ಬಾಗುವುದು ಬೇಡ.

ವೃಶ್ಚಿಕ: ಹೆಚ್ಚು ಲಾಭ ಸಿಗುವ ಕ್ಷೇತ್ರಗಳತ್ತ ನಿಮ್ಮ ಚಿತ್ತ ಹರಿಯಲಿದೆ. ಅಲ್ಪ ತೃಪ್ತಿಯೇ ನಿಮ್ಮನ್ನು ಹೊಸ ಸಾಧ್ಯತೆಗಳ ಕಡೆಗೆ ಕರೆದೊಯ್ಯಲಿದೆ.

ಧನುಸ್ಸು: ಹೊಗಳು ಭಟ್ಟರಿಂದ ಸಾಧ್ಯವಾದಷ್ಟೂ ದೂರ ಇದ್ದರೆ ಒಳಿತು. ಇಲ್ಲದೇ ಇದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರೆಂಟಿ. ಕೋಪ ಬೇಡ.

ಮಕರ: ವಿವಿಧ ರೀತಿಯ ವ್ಯಕ್ತಿಗಳನ್ನು ಸಂಜೆ ವರೆಗೂ ಕಾಣಲಿದ್ದೀರಿ. ದೂರದ ಪ್ರಯಾಣ ಮಾಡುವ ವರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಹೋಗಿ.

ಕುಂಭ: ಮತ್ತೊಬ್ಬರ ಸಮಯವನ್ನು ಹಾಳು ಮಾಡು ವುದಕ್ಕೆ ಹೋಗದಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಹೋದರನಿಗೆ ಸಹಾಯ ಮಾಡುವಿರಿ

ಮೀನ :ಆತ್ಮೀಯರು ಇಂದು ನಿಮ್ಮನ್ನು ಅಗಲಿ ಕೆಲಸದ ಮೇಲೆ ದೂರ ಹೋಗಲಿದ್ದಾರೆ. ಅನಿ ಮೀನ ವಾರ್ಯಕ್ಕೆ ಮಾತ್ರ ಖರ್ಚುಗಳನ್ನು ಮಾಡಿ