ಮೇಷ: ಮನೆಯಲ್ಲಿ ನಿಮ್ಮ ಇಷ್ಟಕ್ಕೆ ತಕ್ಕಂತಹ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಮಕ್ಕಳೊಂದಿಗೆ ಇಡೀ ದಿನ ಕಾಲ ಕಳೆಯಲಿದ್ದೀರಿ. ಸಂತೋಷದ ದಿನ.

ವೃಷಭ: ಹಿಂದೆ ಮಾಡಿದ್ದ ತಪ್ಪಿಗೆ ಇಂದು ಸರಿಯಾದ ಶಿಕ್ಷೆ ಅನುಭವಿಸಲಿದ್ದೀರಿ. ನಿಮ್ಮ ವಿರುದ್ಧ ಇರುವ ವ್ಯಕ್ತಿಯ ಶಕ್ತಿ ತಿಳಿದು ಹೋರಾಡಿ.

ಮಿಥುನ: ಸುಲಭಕ್ಕೆ ಸಿಕ್ಕುವ ಜಯ ಹೆಚ್ಚು ಕಾಲ ನಿಮ್ಮೊಂದಿಗೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ದಿನ. ಸಂತೋಷ ಹೆಚ್ಚಾಗಲಿದೆ.

ಕಟಕ: ಖರ್ಚು ಮತ್ತು ಆದಾಯದಲ್ಲಿ ಸಮ ಪ್ರಮಾಣದ ಏರಿಕೆ ಉಂಟಾಗಲಿದೆ. ಹಾಗಾಗಿ ಆರ್ಥಿಕ ಹೊರೆ ನಿಮ್ಮ ಮೇಲೆ ಬೀಳದು.

ಸಿಂಹ: ಮಕ್ಕಳ ದೃಷ್ಟಿಯಲ್ಲಿ ನೀವು ದೊಡ್ಡ ಹಿರೋ ಆಗುತ್ತೀರಿ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದರೆ ನೀವು ಪ್ರೀತಿ ಪಡೆಯುವಿರಿ

ಕನ್ಯಾ: ದ್ವೇಷದಿಂದ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ. ನಿಮ್ಮ ಪಾಡಿಗೆ ನೀವು ಯಾರಿಗೂ ಕೇಡು ಬಯಸದೇ ಇದ್ದು ಬಿಡಿ.

ತುಲಾ: ಸ್ವಂತದ ಹಿತಾಸಕ್ತಿಗೆ ಸಮುದಾಯದ ನೆಮ್ಮದಿ ಕೆಡಿಸಲು ಹೋಗದಿರಿ. ನಿಮ್ಮ ಮೇಲೆ ದೊಡ್ಡ ದೊಡ್ಡ ಜವಾಬ್ದಾರಿಗಳು ಬೀಳಲಿವೆ.

ವೃಶ್ಚಿಕ: ಲೋಕ ಜ್ಞಾನವಿಲ್ಲದ ವ್ಯಕ್ತಿಗಳ ಜೊತೆ ವಾದಕ್ಕೆ ನಿಂತು ನಿಮ್ಮ ವ್ಯಕ್ತಿತ್ವವನ್ನು ನೀವೇ ಕೀಳು ಮಟ್ಟಕ್ಕೆ ತಂದುಕೊಳ್ಳುವುದು ಬೇಡ. 

ಧನುಸ್ಸು: ಸ್ನೇಹಿತರೊಂದಿಗೆ ಸೇರಿ ದೂರದ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಅಂದುಕೊಂಡ ಕಾರ್ಯಗಳು ಸರಿಯಾಗಿ ನೆರವೇರಲಿವೆ.

ಮಕರ: ಗೆಲ್ಲುತ್ತೇನೆ ಎಂದು ಹೊರಟಾಗ ಸೋಲುವುದಕ್ಕೂ ಸಿದ್ಧವಾಗಿ ಇರಬೇಕು. ಎಲ್ಲವೂ ನೀವು ಅಂದುಕೊಂಡಂತೆಯೇ ಆಗುವುದಿಲ್ಲ.

ಕುಂಭ: ನಿಮ್ಮದೇ ಸಾವಿರ ತಲೆನೋವುಗಳು ಇರುವಾಗ ಮತ್ತೊಬ್ಬರ ಸಮಸ್ಯೆಯನ್ನು ನಿಮ್ಮ ಮೈಮೇಲೆ ಎಳೆದುಕೊಳ್ಳುವುದು ಬೇಡ.

ಮೀನ: ಆರ್ಥಿಕವಾಗಿ ತುಸು ಸಂಕಷ್ಟ ಎದುರಾದರೂ ಅದು ಕ್ಷಣಿಕ ಮಾತ್ರ. ಕಷ್ಟಪಟ್ಟು ಸಂಪಾದನೆ ಮಾಡಿದ ಹಣದ ಮೇಲೆ ಹಿಡಿತವಿರಲಿ.