ಮೇಷ: ಸೋಲು ಕ್ಷಣಿಕ. ಅದರ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ ಮುಂದಿನ ಗೆಲುವು ಕಷ್ಟವಾಗುತ್ತದೆ. ಉತ್ಸಾಹದಿಂದ ಸಾಗುತ್ತಿರಿ.

ವೃಷಭ: ಕಾರ್ಯ ನಿಮಿತ್ತ ಅನ್ಯ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಅಧಿಕಾರಸ್ಥರ ಜೊತೆಗೆ ಮನಸ್ತಾಪ ಬೇಡ. ಆರೋಗ್ಯದಲ್ಲಿ ಸ್ಥಿರತೆ.

ಮಿಥುನ: ಮತ್ತೊಬ್ಬರ ಮಾತಿಗೆ ಮರುಳಾಗಿ ನಿಮ್ಮ ಜೇಬು ಖಾಲಿ ಮಾಡಿಕೊಳ್ಳದಿರಿ. ಮನೆಯ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ.

ವಾರ ಭವಿಷ್ಯ: ಈ ರಾಶಿಯವರಿಗೆ ಹಣದ ಹರಿವು, ವೃತ್ತಿ ಬದುಕಿನಲ್ಲೂ ಒಳ್ಳೆಯ ಟೈಮ್!

ಕಟಕ: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ಸ್ವಾಭಿಮಾನಕ್ಕೆ ಇಂದು ಗೆಲುವಾಗಲಿದೆ. ಸಮಯಕ್ಕೆ ಬೆಲೆ ಕೊಟ್ಟು ಮುಂದೆ ಸಾಗಿ.

ಸಿಂಹ: ಮತ್ತೊಬ್ಬರ ಹಣದಲ್ಲಿ ಮೋಜು ಮಸ್ತಿಮ ಮಾಡುವುದು ಬೇಡ. ತಂದೆಯ ಮಾತಿಗೆ ಬೆಲೆ ನೀಡಿ ಅದರಂತೆ ನಡೆದುಕೊಳ್ಳಿ. ಶುಭ ಫಲ.

ಕನ್ಯಾ: ಹೊಸ ಭರವಸೆಗಳು ಜೀವನದಲ್ಲಿ ಮೂಡಲಿವೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಸ್ವಾರ್ಥಕ್ಕೆ ಬಲಿಯಾಗದಿರಿ.

ತುಲಾ: ನಿಮ್ಮ ಬುದ್ಧಿಶಕ್ತಿಗೆ ಸವಾಲು ಒಡ್ಡುವ ಸಂದರ್ಭ ಬರುತ್ತದೆ. ಭವಿಷ್ಯದ ಕನಸುಗಳಿಗೆ ರೆಕ್ಕೆ ಪುಕ್ಕ ಬರಲಿವೆ. ಚಿತ್ತ ಚಂಚಲವಾಗುವುದು.

ವೃಶ್ಚಿಕ: ಧೈರ್ಯ ಮತ್ತು ಭರವಸೆಯಿಂದ ಮಾಡಿದ ಕೆಲಸಗಳಿಂದ ಲಾಭ ದೊರೆಯಲಿದೆ. ಆಹಾರದ ವಿಚಾರದಲ್ಲಿ ಜಾಗೃತೆ ಇರಲಿ.

ಧನಸ್ಸು: ನಿಮ್ಮ ಸಮಸ್ಯೆ ಪರಿಹಾರಕ್ಕೆ ಹಿರಿಯರು ಮುಂದಾಗಲಿದ್ದಾರೆ. ಕೌಟುಂಬಿಕ ಕಲಹಗಳು ಕಡಿಮೆಯಾಗಲಿವೆ. ಆರೋಗ್ಯದಲ್ಲಿ ಚೇತರಿಕೆ.

ಮಕರ: ಆಡಳಿತ ಸಂಬಂಧಿ ತಿರುಗಾಟಗಳು ಹೆಚ್ಚಾಗಲಿವೆ. ಮನಸ್ಸಿನಲ್ಲಿ ಶಾಂತಿ ನೆಲೆಯಾಗಲಿದೆ. ಆರ್ಥಿಕವಾಗಿ ಒಳ್ಳೆಯ ಲಾಭ.

ಕುಂಭ: ನಿಮ್ಮ ಪಾಲಿಗೆ ಬಂದದ್ದನ್ನು ನೀವೇ ಮಾಡಿ ಮುಗಿಸಿ. ನಿಮ್ಮ ತಪ್ಪುಗಳಿಗೆ ಮತ್ತೊಬ್ಬರ ಕಡೆಗೆ ಬೆರಳು ಮಾಡಿ ತೋರಿಸುವುದು ಬೇಡ. 

ಮೀನ: ಕೆಲಸದಲ್ಲಿ ಮೇಲು ಕೀಳು ಎನ್ನುವುದು ಇಲ್ಲ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಒಳ್ಳೆಯ ಫಲ ಸಿಕ್ಕೇ ಸಿಕ್ಕುತ್ತದೆ.