Asianet Suvarna News Asianet Suvarna News

ಚಿನ್ನಾಭರಣ ಕೊಳ್ಳುವ ಯೋಗ, ಹೊಸ ಕಾರ್ಯ: ಹೀಗಿದೆ ಇಂದಿನ ಭವಿಷ್ಯ

ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ..?

Daily Horoscope Of 27th June 2019
Author
Bangalore, First Published Jun 27, 2019, 7:21 AM IST
  • Facebook
  • Twitter
  • Whatsapp

ಮೇಷ: ಮತ್ತೊಬ್ಬರ ಸಂತೋಷಕ್ಕಾಗಿ ನಿಮ್ಮ ಆಸೆಗಳನ್ನು ಬಲಿ ಕೊಡಲಿದ್ದೀರಿ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು ಬೇಡ

ವೃಷಭ: ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರನ ಸಹಕಾರದಿಂದ ಹೊಸ ಕಾರ್ಯ ಕೈಗೊಳ್ಳಲಿದ್ದೀರಿ. ಮಾತಿನ ಮೇಲೆ ಹಿಡಿತವಿರಲಿ.

ಮಿಥುನ: ಸಂಕಟ ಬಂದಾಗ ವೆಂಕಟರಮಣ ಎನ್ನುವ ಹಾಗೆ ಕಷ್ಟ ಎದುರಾದಾಗ ಪರಿಹಾರಕ್ಕೆ ಮುಂದಾಗಲಿದ್ದೀರಿ. ಸಂತೋಷ ಹೆಚ್ಚಲಿದೆ.

ಕಟಕ: ಆತ್ಮೀಯ ಸ್ನೇಹಿತನ ಸಂತೋಷದಲ್ಲಿ ಇಡೀ ದಿನ ಭಾಗಿಯಾಗಲಿದ್ದೀರಿ. ನಿಮ್ಮದಲ್ಲದ ವಿಚಾರಗಳ ಬಗ್ಗೆಯೇ ಚಿಂತೆ ಮಾಡಲಿದ್ದೀರಿ

ಸಿಂಹ: ಆಸೆಯಿಂದ ಕೊಂಡ ವಸ್ತು ಅಗತ್ಯ ಸಮಯ ದಲ್ಲಿಯೇ ಕೈ ಕೊಡಲಿದೆ. ಚಿನ್ನಾಭರಣ ಕೊಳ್ಳುವ ಯೋಗವಿದೆ. ಖರ್ಚು ಅಧಿಕ.

ಕನ್ಯಾ: ತಾಯಿ ಮತ್ತು ಸಹೋದರಿಯರಿಂದ ಸಹಾಯವಾಗಲಿದೆ. ಸತ್ಯ ಹೇಳುವುದಕ್ಕೆ ಹಿಂಜರಿಕೆ ಬೇಡ. ಅಂದುಕೊಂಡಿದ್ದು ಆಗಲಿದೆ.

ತುಲಾ: ದಿನ ಪೂರ್ತಿ ಮಾಡಬೇಕಿದ್ದ ಕಾರ್ಯವನ್ನು ಮಧ್ಯಾಹ್ನದ ವೇಳೆಗೇ ಮಾಡಿ ಮುಗಿಸಲಿದ್ದೀರಿ. ಕಚೇರಿ ಅಲೆದಾಟ ಮುಂದುವರೆಯಲಿದೆ.

ವೃಶ್ಚಿಕ: ಆಹಾರದ ಬಗ್ಗೆ ಕಾಳಜಿ ಇರಲಿ. ದೊಡ್ಡವರನ್ನು ಭೇಟಿ ಮಾಡಲಿದ್ದೀರಿ. ಸಣ್ಣ ವ್ಯಾಪಾರಿಗಳಿಗೆ ಇಂದು ಒಳ್ಳೆಯ ವ್ಯಾಪಾರವಾಗಲಿದೆ

ಧನುಸ್ಸು: ಎರಡು ಮನಸ್ಸು ಇಟ್ಟುಕೊಂಡು ಕೆಲಸ ಮಾಡುವುದು ಬೇಡ. ಹಿರಿಯರ ಸಲಹೆ ಪಡೆದುಕೊಂಡು ಮುಂದುವರೆಯಿರಿ.

ಮಕರ: ಸಕಾರಾತ್ಮಕ ಚಿಂತನೆಗಳು ಇಡೀ ದಿನ ನಿಮ್ಮನ್ನು ಮುನ್ನಡೆಸಲಿವೆ. ದೂರದ ಪ್ರಯಾಣಕ್ಕೆ ಅಗತ್ಯ ಸಿದ್ಧತೆ ಮಾಡಿ ಮುಗಿಸಿಕೊಳ್ಳಲಿದ್ದೀರಿ.

ಕುಂಭ: ನಿಮ್ಮ ಅಹಂಗೆ ದೊಡ್ಡ ಪೆಟ್ಟು ಬೀಳಲಿದೆ. ಗೊತ್ತಿಲ್ಲದೇ ಇರುವುದನ್ನು ಕೇಳಿ ತಿಳಿಯುವುದರಲ್ಲಿ ತಪ್ಪಿಲ್ಲ. ಅಂಜಿಕೆ ಬೇಡ. ಶುಭ ಫಲ

ಮೀನ: ಸಣ್ಣ ವಿಚಾರವನ್ನು ದೊಡ್ಡದು ಮಾಡಿಕೊಂಡು ಮನಸ್ಸು ಕೆಡಿಸಿಕೊಳ್ಳದಿರಿ. ನಿಮ್ಮ ನೋವಿಗೆ ಮಿಡಿಯುವ ಹೃದಯಗಳು ಸಿಗಲಿ

Follow Us:
Download App:
  • android
  • ios