Asianet Suvarna News Asianet Suvarna News

ಇಂದು ಈ ರಾಶಿಯವರು ಕೆಲಸದಲ್ಲಿ ಪ್ರಗತಿ ಕಾಣುವಿರಿ

25 ನವೆಂಬರ್ 2019ರ ಭವಿಷ್ಯ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ದಿನ ? 

Daily Horoscope of 25th November
Author
Bengaluru, First Published Nov 25, 2019, 6:59 AM IST

ಮೇಷ: ಲಾಭದ ಹಿಂದೆ ಓಡುತ್ತಾ ನೈತಿಕತೆ ಕಳೆದುಕೊಳ್ಳುವುದು ಬೇಡ. ನಿಮ್ಮದಲ್ಲದ ವಸ್ತುವಿನಿಂದ ದೂರು ಇರುವುದು ಲೇಸು.

ವೃಷಭ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುವುದು ಬೇಡ. ಬೇಡದ ರಾಜಕಾರಣಕ್ಕೆ ತಲೆ ಕೆಡಿಸಿಕೊಳ್ಳಬೇಡಿ.

ಮಿಥುನ: ಆಹಾರದಲ್ಲಿ ಮಿತಿ ಇರಲಿ. ಮಾತು ಅತಿಯಾಗದಿರಲಿ. ಎಲ್ಲರಿಗೂ ಒಳ್ಳೆಯದ್ದು ಮಾಡುವ ಹಂಬಲವಿದೆ. ಆದರೆ ಶಕ್ತಿ ಕಡಿಮೆ.

ಕಟಕ: ಗೊತ್ತಿಲ್ಲದೇ ಇರುವ ಸ್ಥಳ, ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ಆಸಕ್ತಿಯ ವಿಷಯದಲ್ಲಿ ಬದಲಾವಣೆಯಾಗಲಿದೆ.

ಸಿಂಹ: ಹಿಡಿದ ಕಾರ್ಯವನ್ನು ಬಿಡದೇ ಮಾಡುವುದೇ ಯಶಸ್ಸಿನ ಮೊದಲ ಮೆಟ್ಟಿಲು. ಇದನ್ನು ತಿಳಿದುಕೊಂಡು ಮುಂದೆ ಸಾಗಿ. ಶುಭ ಫಲ.

ವಾರ ಭವಿಷ್ಯ: ಈ ರಾಶಿಯವರಿಗೆ ಹಣದ ಹರಿವು, ವೃತ್ತಿ ಬದುಕಿನಲ್ಲೂ ಒಳ್ಳೆಯ ಟೈಮ್!

ಕನ್ಯಾ: ಕ್ಷಣಿಕ ಸುಖಕ್ಕೆ ಸೋಲದೇ ಇದ್ದರೆ ಮುಂದೆ ದುಃಖ ಕಟ್ಟಿಟ್ಟ ಬುತ್ತಿ. ಹಿಂದೆ ಆದದ್ದಕ್ಕೆ ತಲೆ ಕೆಡಿಸಿಕೊಳ್ಳದೇ ಮುಂದಿನ ದಾರಿ ನೋಡಿ.

ತುಲಾ: ಒಂದು ವಿಚಾರದ ಆಳ ಅಂತರಗಳನ್ನು ಸರಿ ಯಾಗಿ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ. ಕೆಲಸದಲ್ಲಿ ಪ್ರಗತಿ ಕಾಣುವಿರಿ.

ವೃಶ್ಚಿಕ: ಧೈರ್ಯ ಒಳ್ಳೆಯದ್ದು. ಆದರೆ ಅತಿಯಾದ ಧೈರ್ಯ ಒಳ್ಳೆಯದ್ದಲ್ಲ. ಭಯ ಭಕ್ತಿಯಿಂದ ನಡೆದುಕೊಳ್ಳಿ. ಕಲಾವಿದರಿಗೆ ಶುಭ ಸುದ್ದಿ.

ಧನಸ್ಸು: ಚಿನ್ನ ಗಳಿಸುತ್ತೇನೆ ಎಂದು ಹೋಗಿ ಬೆಳ್ಳಿಗೆ ತೃಪ್ತಿಪಡುವ ಸಂದರ್ಭ ಬರುತ್ತದೆ. ಆರೋಗ್ಯದಲ್ಲಿ ತುಸು ಏರುಪೇರು ಆಗಲಿದೆ.

ಮಕರ: ಬರುವ ಕಷ್ಟ ನಿಮ್ಮನ್ನು ಗಟ್ಟಿ ಮಾಡುವುದಕ್ಕೆ ಬರುತ್ತದೆ. ಕುಗ್ಗುವುದು ಬೇಡ. ಕೆಲಸದ ಒತ್ತಡ ಹೆಚ್ಚಾದರೂ ಲಾಭವೂ ಹೆಚ್ಚಾಗಲಿದೆ.

ಕುಂಭ: ಹೊಸ ಬಗೆಯ ವೃತ್ತಿಯತ್ತ ಮನಸ್ಸು ಹರಿಯಲಿದೆ. ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಿ. ದುಡುಕಿನಿಂದ ಹಾನಿ.

ಮೀನ: ಚಿಕ್ಕ ಕೆಲಸ ಎಂದು ಸುಮ್ಮನೆ ಕೂರುವುದು ಬೇಡ. ಚಿಕ್ಕ ಚಿಕ್ಕ ಕಲ್ಲುಗಳಿಂದಲೇ ಸೌಧ ಕಟ್ಟಲು ಸಾಧ್ಯವಾಗುವುದು. ಧೈರ್ಯ ಇರಲಿ.

Follow Us:
Download App:
  • android
  • ios