ಮೇಷ: ಮುಂದೆ ಹೊರಡಲಿರುವ ಪ್ರವಾಸದ ಕುರಿತು ಸೂಕ್ತ ತಯಾರಿ ಪೂರ್ಣಗೊಳಿಸಿಕೊಳ್ಳಲಿದ್ದೀರಿ. ಮನೆಯಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ.

ವೃಷಭ: ನಿಂದನೆಗಳಿಗೆ ತಲೆ ಕೆಡಿಸಿಕೊಳ್ಳದೇ ಧೈರ್ಯ ವಾಗಿ ಮುಂದೆ ಸಾಗುವಿರಿ. ಪುಟ್ಟ ಸಂತೋಷಗಳೇ ದಿನವನ್ನು ಪೂರ್ಣಗೊಳಿಸಲಿವೆ.

ಮಿಥುನ: ವೈದ್ಯರ ಮಾತನ್ನು ನಿರ್ಲಕ್ಷಿಸುವುದು ಬೇಡ. ನಕಾರಾತ್ಮಕ ಚಿಂತನೆಗಳಿಂದ ಹೊರ ಬರಲಿದ್ದೀರಿ. ಹೊಸ ಕಾರ್ಯ ಕೈಗೂಡಲಿದೆ.

ಕಟಕ: ಏಕಾಂಗಿಯಾಗಿಯೇ ಇಡೀ ದಿನ ಕಳೆಯಲಿದ್ದೀರಿ. ವಾಸ ಸ್ಥಾನ ಬದಲಾಗಲಿದೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.

ಸಿಂಹ: ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮತ್ತೊಬ್ಬರ ಕಾರ್ಯದಿಂದ ನೀವು ಸ್ಫೂರ್ತಿಗೊಳ್ಳಲಿದ್ದೀರಿ. ಸಂತೋಷ ಹೆಚ್ಚಲಿದೆ.

ಕನ್ಯಾ: ನಿರೀಕ್ಷೆಯಂತೆ ಧನಾಗಮನ. ಬೇಡದ ವಿಚಾರಗಳನ್ನು ಮನಸ್ಸಿನಿಂದ ತೆಗೆದು ಹಾಕಿ. ಸುಳ್ಳು ಬೆದರಿಕೆಗಳಿಗೆ ಹೆದರುವುದು ಬೇಡ.

ತುಲಾ: ವಸ್ತುವಿನ ಗುಣಮಟ್ಟ ತಿಳಿದು ಖರೀದಿ ಮಾಡಲು ಮುಂದಾಗಿ. ತೊಂದರೆಗಳಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಲಿದ್ದೀರಿ.

ವೃಶ್ಚಿಕ: ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆಯಲ್ಲಿ ಇರಬೇಡಿ. ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪ ಮಾಡುವಾಗ ಎಚ್ಚರ ಇರಲಿ. ನೆಮ್ಮದಿ ಇರಲಿದೆ.

ಧನುಸ್ಸು: ಅತಿಯಾದ ಆಲಸ್ಯ ಒಳ್ಳೆಯದ್ದಲ್ಲ. ನಿಗದಿತ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಿ. ವ್ಯಾಪಾರದಲ್ಲಿ ಲಾಭ ಹೆಚ್ಚಲಿದೆ.

ಮಕರ: ಸ್ವಂತ ಬುದ್ಧಿಯಿಂದ ಕೈಗೊಂಡಿದ್ದ ನಿರ್ಧಾರಗಳು ಇಂದು ನಿಮಗೆ ವರವಾಗಿ ಪರಿಣಮಿಸಲಿವೆ. ಓದಿನಲ್ಲಿ ಆಸಕ್ತಿ ಮೂಡಲಿದೆ.

ಕುಂಭ: ಹೆಚ್ಚು ಶ್ರಮ ಬೇಡುವ ಕೆಲಸಗಳನ್ನು ಒಪ್ಪಿಕೊಳ್ಳಲಿದ್ದೀರಿ. ಆರಂಭ ಶೂರತ್ವ ಬೇಡ. ನಿಧಾನವಾಗಿ ಯೋಚಿಸಿ ನಿರ್ಧಾರ ಮಾಡಿ. ಇಡೀ ದಿನ ಬಂಧುಗಳೊಂದಿಗೆ ಕಳೆಯಲಿದ್ದೀರಿ.

ಮೀನ: ಇಷ್ಟದ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಅಹಂಕಾರಕ್ಕೆ ಸರಿಯಾದ ಪೆಟ್ಟು ಬೀಳಲಿದೆ.