ಮೇಷ: ಕುಳಿತಲ್ಲಿಂದಲೇ ನಿಮ್ಮ ಎಲ್ಲಾ ಕಾರ್ಯಗಳನ್ನು ಸಿದ್ಧಿ ಮಾಡಿಕೊಳ್ಳಲಿದ್ದೀರಿ. ಅಪರಿಚಿತರ ಮೇಲೆ ಅತಿಯಾದ ನಂಬಿಕೆ ಇಡುವುದು ಬೇಡ.

ವೃಷಭ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಮೊದಲ ಸೋಲಿಗೆ ಬೆನ್ನು ತಿರುಗಿಸಿ ಓಡಿ ಹೋಗುವುದು ನಿಮ್ಮ ವ್ಯಕ್ತಿತ್ವಕ್ಕೆ ತರವಲ್ಲ.

ಮಿಥುನ: ಹಿರಿಯರ ಮಾತಿನಿಂದ ಎಚ್ಚೆತ್ತು ಕೆಟ್ಟ ಕೆಲಸದಿಂದ ಹೊರ ಬರಲಿದ್ದೀರಿ. ಹೊಸ ಪುಸ್ತಕ ಓದಲಿದ್ದೀರಿ. ತಾಳ್ಮೆಯಿಂದ ಕೆಲಸ ನಿರ್ವಹಿಸಿ.

ಕಟಕ: ಆತುರದ ಕೈಗೆ ಬುದ್ಧಿ ಕೊಟ್ಟರೆ ಆಪತ್ತು ಖಂಡಿತ. ಮಾತನಾಡುವಾಗ ಎಚ್ಚರ ಇರಲಿ. ಬೇಡದ ವಿಚಾರಕ್ಕೆ ತಲೆ ಹಾಕುವುದು ಬೇಡ.

ಸಿಂಹ: ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸುವಿರಿ. ಬಂದದ್ದು ಬರಲಿ ಎಂದು ಮುಂದೆ ಸಾಗುತ್ತಿರಿ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ ಸಿಗಲಿದೆ.

ಕನ್ಯಾ: ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು ಹೊಸ ಕೆಲಸದತ್ತ ಸಾಗಲಿದ್ದೀರಿ. ಇಡೀ ದಿನ ಏಕಾಂಗಿಯಾಗಿ ಇರುವ ಪರಿಸ್ಥಿತಿ ಇದೆ.

ತುಲಾ: ನಿಮ್ಮ ಅವಶ್ಯಕತೆಗಳನ್ನು ನೋಡಿಕೊಂಡು ಖರ್ಚು ಮಾಡಿ. ಸಾಲ ಕೊಡುವಾಗ ಎಚ್ಚರ ಇರಲಿ. ಸರಕಾರಿ ಕೆಲಸಗಳು ಆಗಲಿವೆ.

ವೃಶ್ಚಿಕ: ನಿಮ್ಮ ಸಹಕಾರದಿಂದ ಗೆಳೆಯರಿಗೆ ಅನುಕೂಲ ವಾಗಲಿದೆ. ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ಸಿಕ್ಕೇ ಸಿಗುತ್ತದೆ. ತುಂಬಾ ಉದಾರಿಯಾಗುವಿರಿ.

ಧನುಸ್ಸು: ಯಾರೋ ಮಾಡಿದ ಕಾರ್ಯವನ್ನು ನಾನೇ ಮಾಡಿದೆ ಎನ್ನುವುದಾಗಿ ಬಿಂಬಿಸಿಕೊಳ್ಳದಿರಿ. ನಿಮ್ಮ ಸಾಮರ್ಥ್ಯ ಏನೆಂದು ತಿಳಿಯಲಿದೆ.

ಮಕರ: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ನಿಮ್ಮ ಕೆಲ ನಿರೀಕ್ಷೆಗಳು ಈಡೇರಲಿವೆ. ಅತಿಯಾದ ಆಸೆ ಬೇಡ.

ಕುಂಭ: ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಿಕ್ಕ ಅವಕಾಶ ಬಳಸಿಕೊಂಡು ಮುಂದೆ ಸಾಗಿ.

ಮೀನ: ನೀವು ತಿಳಿದುಕೊಂಡದ್ದಷ್ಟೇ ಸತ್ಯ ಎಂದುಕೊಳ್ಳದಿರಿ. ನಿಮ್ಮ ಪಾಲಿನ ಕೆಲಸಗಳನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸಲಿದ್ದೀರಿ.