ಮೇಷ: ಆಪ್ತ ಸ್ನೇಹಿತರಿಗೆ ಇಂದು ಆರ್ಥಿಕ ಸಹಾಯ ಮಾಡಲಿದ್ದೀರಿ. ಹೊಸ ವಸ್ತುಗಳನ್ನು ಕೊಳ್ಳು ವಾಗ ಎಚ್ಚರ ಇರಲಿ. ಹಿರಿಯರ ಮಾತು ಕೇಳಿ.

ವೃಷಭ: ಸಹೋದ್ಯೋಗಿಗಳೊಂದಿಗಿನ ಮನಸ್ತಾಪ ಅಂತ್ಯವಾಗಲಿದೆ. ಗೌರವ ಬಯಸುವ ನೀವು ಮತ್ತೊಬ್ಬರಿಗೂ ಗೌರವ ನೀಡಲಿದ್ದೀರಿ.

ಮಿಥುನ: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ನಿಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಮನೆಯಲ್ಲಿ ನೆಮ್ಮದಿ ನೆಲೆಯಾಗಲಿದೆ.

ಕಟಕ: ಅನ್ಯ ಕಾರ್ಯ ನಿಮಿತ್ತ ದೂರದ ಪ್ರಯಾಣ ಸಾಧ್ಯತೆ. ನಿಮ್ಮ ಮೂಗಿನ ನೇರಕ್ಕೆ ಇರುವುದು ಮಾತ್ರ ಸತ್ಯ ಎಂದು ತಿಳಿಯುವುದು ಬೇಡ.

ಸಿಂಹ: ಗೆಳೆಯರ ಮೇಲೆ ಅಸಮಾಧಾನ ಮಾಡಿಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಸಂಜೆ ವೇಳೆಗೆ ಕಾರ್ಯ ಸಿದಿ

ಕನ್ಯಾ: ನಿಮ್ಮ ಸಹಜ ವರ್ತನೆಯಲ್ಲಿ ಇಂದು ಸ್ವಲ್ಪ ಬದಲಾವಣೆ ಉಂಟಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ. ನಿಮ್ಮ ಮಾತಿಗೆ ಮಾನ್ಯತೆ ಇದೆ.

ತುಲಾ: ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಲಿದ್ದೀರಿ. ನಿಮ್ಮನ್ನು ವಿರೋಧಿಸುವವರಿಗೆ ಇಂದು ಉತ್ತರ ನೀಡುವಿರಿ

ವೃಶ್ಚಿಕ: ಹೊಸ ವಾಹನ ಕೊಳ್ಳುವುದಕ್ಕೆ ಅಗತ್ಯ ತಯಾರಿ ಮುಂದುವರಿಸಲಿದ್ದೀರಿ. ಎಲ್ಲಾ ಕೆಲಸಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಬೇಡ.

ಧನುಸ್ಸು: ನಿಮ್ಮ ಶಕ್ತಿಗೆ ಅನುಗುಣವಾಗಿ ಆದಾಯ ದೊರೆಯಲಿದೆ. ವ್ಯಾಪಾರಿಗಳಿಗೆ ಒಳ್ಳೆಯ ವ್ಯಾಪಾರ. ಮತ್ತೊಬ್ಬರನ್ನು ಗೇಲಿ ಮಾಡದಿರಿ.

ಮಕರ: ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಲಿದೆ. ಖಾಲಿ ಮಾತುಗಳಲ್ಲೇ ಕಾಲ ಕಳೆಯುವುದರ ಬದಲಿಗೆ ಕೆಲಸದಲ್ಲಿ ತೊಡಗಿ.

ಕುಂಭ: ನಿಮ್ಮಲ್ಲಿರುವ ಉತ್ಸಾಹ ಕುಂದದ ರೀತಿ ನೋಡಿಕೊಳ್ಳಿ. ನಿಮ್ಮ ಮಾತಿನಿಂದ ಮತ್ತೊಬ್ಬರಿಗೆ ತೊಂದರೆಯಾಗದಿರಲಿ. ದಿನಪೂರ್ತಿ ಕೆಲಸ.

ಮೀನ: ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಕೊಂಡು ಮುನ್ನಡೆಯುತ್ತಿರಿ. ಬೇರೆಯವರ ವಿಚಾರಗಳಿಗೆ ನೀವು ತಲೆ ಕೆಡಿಸಿಕೊಳ್ಳದಿರಿ.