ಮೇಷ: ನಿಮಗೆ ಸರಿ ಎನ್ನಿಸಿದ ಕೆಲಸವನ್ನು ತಡ ಮಾಡದೇ ಮಾಡಿ ಮುಗಿಸಿ. ತಂದೆಯಿಂದ ನಿಮ್ಮ ವ್ಯಾಪಾರಕ್ಕೆ ಸಹಾಯವಾಗಲಿದೆ.

ವೃಷಭ: ನಿಮ್ಮ ಬಗ್ಗೆ ಮತ್ತೊಬ್ಬರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಹೊಸ ಕೆಲಸಗಳಿಗೆ ಸಮಯ ಹೊಂದಿಸಿಕೊಳ್ಳಿ.

ಮಿಥುನ: ಮೂರನೇಯವರ ವಿಚಾರಕ್ಕೆ ನಿಮ್ಮ ಮನೆಯಲ್ಲಿ ಗೊಂದಲ ಉಂಟಾಗಲಿದೆ. ಸಂಬಂಧಗಳ ನಿರ್ವಹಣೆಯಲ್ಲಿ ಎಚ್ಚರ ಇರಲಿ.

ಕಟಕ: ನಡೆಯುವಾಗ ಜಾರಿ ಕೆಳಗೆ ಬೀಳುವುದು ಸಹಜ. ಕುಗ್ಗದೇ ಮುಂದೆ ಸಾಗಿದರೆ ಸಾಧನೆ ನಿಮ್ಮದಾಗುವುದು. ನೆಮ್ಮದಿ ಹೆಚ್ಚಲಿದೆ.

ಸಿಂಹ: ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಸ್ನೇಹಿತರ ಕಷ್ಟಗಳಿಗೆ ಇಂದು ನೀವು ನೆರವು ನೀಡಲಿದ್ದೀರಿ. ದೂರದ ಪ್ರಯಾಣ ಸಾಧ್ಯತೆ.

ಕನ್ಯಾ: ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳ್ಳೆಯದ್ದು. ಹತ್ತಿರದವರೊಂದಿಗೆ ಮನಸ್ತಾಪ ಉಂಟಾಗಲಿದೆ. ಆರ್ಥಿಕವಾಗಿ ಸಂಕಷ್ಟ.

ತುಲಾ: ಮನೆಯಲ್ಲಿ ಇದ್ದ ಗೊಂದಲದ ವಾತಾವರಣಕ್ಕೆ ಇಂದು ತೆರೆ ಬೀಳಲಿದೆ. ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯ ಪ್ರತಿಫಲ ದೊರೆಯಲಿದೆ. ಶುಭ ಫಲ.

ವೃಶ್ಚಿಕ: ಗೆಳೆಯರನ್ನು ಸಂಖ್ಯೆ ದೃಷ್ಟಿಯಲ್ಲಿ ಅಳೆಯ ಬೇಡಿ. ಗುಣದ ದೃಷ್ಟಿಯಲ್ಲಿ ನೋಡಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ಧನುಸ್ಸು: ನಯವಾಗಿ ಮಾತನಾಡಿ ಮೋಸ ಮಾಡುವವರು ನಿಮ್ಮ ಸುತ್ತಲೂ ಇದ್ದಾರೆ. ಗುರಿ ಸೇರಲು ಅಡ್ಡ ದಾರಿ ಹಿಡಿಯುವುದು ಬೇಡ.

ಮಕರ: ಹೊಸ ತಂತ್ರಜ್ಞಾನದ ಬಗ್ಗೆ ಇಂದು ತಿಳಿದುಕೊಳ್ಳಲಿದ್ದೀರಿ. ಕೆಲಸ ಒತ್ತಡ ಹೆಚ್ಚಾಗಲಿದೆ. ಮನೆಗೆ ಬಂಧುಗಳ ಆಗಮನವಾಗಲಿದೆ.

ಕುಂಭ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಲಿದ್ದೀರಿ. ಕೋಪ ತ್ಯಜಿಸಿ ಮುಂದೆ ಸಾಗಿ.

ಮೀನ: ಸಣ್ಣ ಪುಟ್ಟ ವಿಚಾರಗಳಿಗೂ ಸಿಡುಕುವುದು ಬೇಡ. ಇನ್ನೊಬ್ಬರ ವಿಚಾರಕ್ಕೆ ಹೋಗದೇ, ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗಿ.