ಮೇಷ: ಸಮಸ್ಯೆಗಳನ್ನು ಸವಾಲುಗಳಂತೆ ಸ್ವೀಕಾರ ಮಾಡಲಿದ್ದೀರಿ. ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ. ಸಂಜೆ ವೇಳೆಗೆ ಶುಭ ಸುದ್ದಿ.

ವೃಷಭ: ನಿಮ್ಮ ದಾರಿಯಲ್ಲಿ ನೀವು ಸಾಗುವಾಗ ನೂರೆಂಟು ಅಡೆತಡೆ ಬರುವುದು ಸಹಜ. ಎಲ್ಲವನ್ನೂ ದಾಟಿ ಮುಂದೆ ಸಾಗುತ್ತಿರಬೇಕು.

ಮಿಥುನ: ಶುಭಕಾರ್ಯಗಳನ್ನು ಮುಂದೂಡುತ್ತಾ ಕೂರುವುದು ಬೇಡ. ಸರಿ ಎನ್ನಿಸಿದ್ದನ್ನು ಇಂದೇ ಮಾಡಿ ಮುಗಿಸಿ. ಉಲ್ಲಾಸದ ದಿನವಿದು.

ಕಟಕ: ಮತ್ತೊಬ್ಬರಿಗಾಗಿ ಕಾಯುವುದು ಮತ್ತು ಮತ್ತೊಬ್ಬರನ್ನು ಕಾಯಿಸುವುದುಕ್ಕೆ ಹೋಗದಿರಿ. ಕಾರ್ಯವಾಸಿ ಕತ್ತೆ ಕಾಲು.

ಸಿಂಹ: ಅತಿಯಾದ ಉತ್ಸಾಹವೇ ನಿಮಗೆ ಇಂದು ಮುಳುವಾಗುವ ಸಾಧ್ಯತೆ ಇದೆ. ಸ್ನೇಹಿತ ರೊಂದಿಗೆ ಹಣಕಾಸಿನ ವ್ಯವಹಾರ ಬೇಡ.

ಕನ್ಯಾ: ಮಕ್ಕಳೊಂದಿಗೆ ಇಂದು ಹೆಚ್ಚಿನ ಸಮಯ ಕಳೆ ಯಲಿದ್ದೀರಿ. ಮತ್ತೊಬ್ಬರ ಪ್ರತಿಭೆ ನಿಮ್ಮಿಂದ ಅನಾವರಣಗೊಳ್ಳಲಿದೆ. ಶುಭದಿನವಿದು.

ತುಲಾ: ನಾಳೆಗಾಗಿ ಯಾವ ಕೆಲಸವನ್ನೂ ಬಾಕಿ ಉಳಿಸಿ ಕೊಳ್ಳದಿರಿ. ತಂದೆಯ ಸಹಕಾರದಿಂದ ಹೊಸ ಹಾದಿಯಲ್ಲಿ ಪ್ರಯಾಣ ಆರಂಭವಾಗಲಿದೆ.

ವೃಶ್ಚಿಕ: ಗೊಣಗುತ್ತಾ ಕೂರುವುದರಿಂದ ಏನೂ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ಕೆಲಸ ಮಾಡುವುದಕ್ಕೆ ಮುಂದಾದರೆ ಮಾತ್ರ ಫಲ.

ಧನುಸ್ಸು: ನೀವು ಹಿಂದೆ ಮಾಡಿದ ಸಹಾಯಗಳೇ ಇಂದು ನಿಮ್ಮ ನೆರವಿಗೆ ಬರಲಿವೆ. ಹೆಚ್ಚು ಆಲೋಚನೆ ಮಾಡುವುದು ಬಿಟ್ಟು, ಕೆಲಸ ಶುರು ಮಾಡಿ.

ಮಕರ: ಸೋಮಾರಿಗಳ ನಡುವೆ ಸೇರಿ ನೀವು ಹೆಚ್ಚು ಶ್ರಮಪಡಬೇಕಾಗುತ್ತದೆ. ಬೇರೆಯವರ ಅಭಿಪ್ರಾಯಗಳಿಗೆ ನೀವು ಶರಣಾಗಬೇಡಿ.

ಕುಂಭ ನಿಮ್ಮ ಮಾತೇ ನಡೆಯಬೇಕು ಎನ್ನುವ ಹಠ ಬೇಡ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದೂ ಕೂಡ ನೆಮ್ಮದಿ ತಂದುಕೊಡುತ್ತದೆ.

ಮೀನ: ತಾಂತ್ರಿಕವಾಗಿ ಹಲವಾರು ವಿಚಾರಗಳನ್ನು ಇಂದು ತಿಳಿದುಕೊಳ್ಳಲಿದ್ದೀರಿ. ಹೊಸ ಹೊಸ ಮೀನ ಜಾಗಗಳ ಪರಿಚಯವಾಗಲಿದೆ. ನೆಮ್ಮದಿ ಇದೆ.