ಮೇಷ: ನಿಮ್ಮ ಸ್ನೇಹಿತರಿಗೆ ಆತ್ಮವಿಶ್ವಾಸ ತುಂಬುವಲ್ಲಿ ನಿಮ್ಮ ಪಾತ್ರ ದೊಡ್ಡದು. ರಗಳೆಗಳಿಂದ ಹೊರ ಬರಲಿದ್ದೀರಿ. ಸಂತೋಷ ಹೆಚ್ಚಾಗಲಿದೆ

ವೃಷಭ: ಪದೇ ಪದೇ ಕಾಡುತ್ತಿದ್ದ ಸಮಸ್ಯೆಗೆ ಇಂದು ಶಾಶ್ವತವಾದ ಪರಿಹಾರ ದೊರೆಯಲಿದೆ. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಇದ್ದೇ ಇದೆ.

ಮಿಥುನ: ವಸ್ತುಗಳನ್ನು ಕೊಳ್ಳುವಾಗ ಗುಣ ಮಟ್ಟಕ್ಕೆ ಒತ್ತು ನೀಡಿ, ಸಂಬಂಧಗಳನ್ನು ಮಾಡುವಾಗ ವ್ಯಕ್ತಿತ್ವಕ್ಕೆ ಒತ್ತು ನೀಡಿ. ಕಾಲ ಬದಲಾಗಲಿ

ಕಟಕ: ನನಗೇ ಯಾಕೆ ಇಷ್ಟೊಂದು ಕಷ್ಟ ಎಂದು ಕೊರಗುತ್ತಾ ಕೂರುವುದಕ್ಕೆ ಬದಲಾಗಿ, ಧೈರ್ಯದಿಂದ ಮುಂದೆ ಸಾಗುತ್ತಿರಿ. ಶುಭಫಲ.

ಸಿಂಹ: ಕೊಂಡ ವಸ್ತುವಿನ ಲೋಪ ಕಂಡು ಮರುಗುವುದಕ್ಕೆ ಬದಲಾಗಿ ಹೊಸ ವಸ್ತು ಕೊಳ್ಳುವ ಮೊದಲೇ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾ: ಬಂಗಾರದಿಂದ ಬಾಳು ಬಂಗಾರವಾಗದು. ಸಂತೋಷದಿಂದ ಇದ್ದರೆ ಅದೇ ಬಂಗಾರ. ಹೆಚ್ಚು ಆಸೆ ಬೇಡ. ಸಿಕ್ಕಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳಿ.

ವಾರ ಭವಿಷ್ಯ: ಈ ರಾಶಿಯವರ ಖರ್ಚಿನಲ್ಲಿ ಏರುಪೇರಾಗುವ ಸಾಧ್ಯತೆ

ತುಲಾ: ನಿಧಾನವೇ ಪ್ರಧಾನವಾಗಿರಲಿ. ಮಕ್ಕಳ ವಿಚಾರದಲ್ಲಿ ಆತುರ ಪಡುವುದು ಬೇಡ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ವೃಶ್ಚಿಕ:  ಹಣಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ನೀಡಿ. ನಿಮ್ಮ ಸಹಾಯಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಗೌರವ ಇರಲಿ. ಎಲ್ಲವೂ ಒಳ್ಳೆಯದ್ದೇ ಆಗಲಿ

ಧನುಸ್ಸು: ಆತಂಕ ಬೇಡ, ಆರೋಗ್ಯ ಸುಧಾರಿಸಲಿದೆ, ನಷ್ಟ ವಸ್ತು ಲಭ್ಯ, ಕಾರ್ಯ ಸ್ಥಳದಲ್ಲಿ ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಕರ: ಸಂಗಾತಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲದ ದಿನ, ಶುಭಫಲಗಳಿದ್ದಾವೆ, ಗುರು ಪ್ರಾರ್ಥನೆ ಮಾಡಿ

ಕುಂಭ: ಅನ್ಯೋನ್ಯತೆ, ಪರಸ್ಪರ ಸಹಕಾರದ ದಿನ, ಮಾತಿನಲ್ಲಿ ಹಿಡಿತವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ: ಪ್ರಯಾಣದ ದಿನ, ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಕಾರ, ನಾಗ ದೇವರ ಪ್ರಾರ್ಥನೆ ಮಾಡಿ