ದಿನ ಭವಿಷ್ಯ: ಈ ರಾಶಿಯವರಿಗೆ ಮಾನಸಿಕ ಅತಂತ್ರತೆ ಉಂಟಾಗಲಿದೆ, ಕುಲದೇವತಾ ಪ್ರಾರ್ಥನೆ ಮಾಡಿ

12 ಫೆಬ್ರವರಿ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 12 February 2020 in Kannada grg

ಮೇಷ:  ಮಾನಸಿಕ ಅತಂತ್ರತೆ ಉಂಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರ ಸಹಕಾರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ:  ದೇಹಬಲವಿರಲಿದೆ, ಮನಸ್ಸು ಚಂಚಲವಾಗಲಿದೆ, ಭಯದ ವಾತಾವರಣ, ಅದೃಷ್ಟ ಹೀನತೆ, ಗುರು ಪ್ರಾರ್ಥನೆ ಮಾಡಿ

ಮಿಥುನ: ಸ್ವಲ್ಪ ಸಮಾಧಾನದಿಂದಿರಬೇಕು, ದಿನಚರಿ ಏರುಪೇರಾಗಲಿದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ:  ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ಬೇಸರ, ದುರ್ಗಾ ಪ್ರಾರ್ಥನೆ ಮಾಡಿ

ಸಿಂಹ: ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳಿ. ಅತಿಯಾದ ಸಿಟ್ಟು ನಿಮ್ಮನ್ನೇ ಮೊದಲು ಸುಡುವುದು. ಪ್ರವಾಸ ಹೊರಡಲಿದ್ದೀರಿ

ಕನ್ಯಾ: ಆತ್ಮೀಯರು ಇಂದು ಇಡೀ ದಿನ ನಿಮ್ಮೊಂದಿಗೆ ಇರಲಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಂಡು ಕೂರುವುದು ಬೇಡ.

ವಾರ ಭವಿಷ್ಯ: ನಿಮ್ಮ ಮೊಂಡು ವಾದಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ

ತುಲಾ: ನಿಂದನೆಗಳು ಬರುವುದು ಸಹಜ. ಹಾಗೆಂದು ಅವುಗಳಿಗೆ ಹೆದರಿಕೊಂಡು ಕೂರುವುದು ಬೇಡ. ಬದುಕು ಬಂದ ಹಾಗೆ ಸ್ವೀಕಾರ ಮಾಡಿ

ವೃಶ್ಚಿಕ: ಕಾರ್ಯ ಸಿದ್ಧಿ, ಕೃಷಿಕರಿಗೆ ಲಾಭ, ದ್ರವವ್ಯಾಪಾರಿಗಳಿಗೆ ಸಮಾಧಾನ, ಸ್ತ್ರೀಯರಿಗೆ ಸಹಕಾರ,  ಕುಜ ಪ್ರಾರ್ಥನೆ ಮಾಡಿ

ಧನಸ್ಸು: ಶುಭಫಲ, ಸ್ತ್ರೀಯರಿಗೆ ಸಮಾಧಾನ, ದಾಂಪತ್ಯದಲ್ಲಿ ಹೊಂದಾಣಿಕೆ ವ್ಯತ್ಯಾಸ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಬಾಯಿ ಹುಣ್ಣಾಗಲಿದೆ, ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ

ಕುಂಭ:  ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ವ್ಯಾಪಾರಕ್ಕೆ ಅನುಕೂಲ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ: ಸಾಲ ಬಾಧೆ ನಿವಾರಣೆ, ಶತ್ರುಗಳು ದೂರಾಗುತ್ತಾರೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ

Latest Videos
Follow Us:
Download App:
  • android
  • ios