ಮೇಷ: ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ಇರಲಿ. ಸೂಕ್ತವಾದ ನಿರ್ಧಾರದಿಂದ ಉದ್ಯಮದಲ್ಲಿ ಯಶಸ್ಸು ಕಾಣಲಿದ್ದೀರಿ. ಧೈರ್ಯ ಇರಲಿ.

ವೃಷಭ: ಸ್ನೇಹಿತರ ಜೊತೆಗೂಡಿ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಿರಿ. ಮಾಡುವ ಕೆಲಸವನ್ನು ಮನಸಾರೆ ಮಾಡಿ ಮುಗಿಸಿದರೆ ಒಳ್ಳೆಯ ಫಲ

ಮಿಥುನ: ತಂದೆಯ ಮಾತಿನಿಂದ ಪ್ರೇರಣೆ ದೊರೆಯಲಿದೆ. ಆಪ್ತರು ಮಾಡಿದ ಕೆಲಸದಲ್ಲಿ ಹುಳುಕನ್ನೇ ಹುಡುಕುತ್ತಾ ಕೂರುವುದು ಬೇಡ.

ಕಟಕ: ಒಳ್ಳೆಯದ್ದು, ಕೆಟ್ಟದ್ದು ಎಲ್ಲಾ ಕಡೆಯಲ್ಲಿಯೂ ಇರುತ್ತದೆ. ನೀವು ಒಳ್ಳೆಯ ಅಂಶಗಳತ್ತಲೇ ಗಮನ ನೀಡಲಿದ್ದೀರಿ. ಲಾಭ ಹೆಚ್ಚಾಗಲಿದೆ.

ಸಿಂಹ: ಮತ್ತೊಬ್ಬರಿಗೆ ತೊಂದರೆ ಕೊಟ್ಟರೆ ನಿಮಗೂ ನಾಳೆ ತೊಂದರೆ ಕಾದಿರುತ್ತದೆ. ಯಾರೊಂದಿಗೂ ಕಠಿಣವಾಗಿ ವರ್ತಿಸದಿರಿ.

ಕನ್ಯಾ: ಆಪ್ತ ಸ್ನೇಹಿತನ ಕಷ್ಟಕ್ಕೆ ನೆರವಾಗಿ ನಿಲ್ಲಲಿದ್ದೀರಿ. ನಿಮ್ಮ ಕೆಲಸವನ್ನು ಹಿರಿಯ ಅಧಿಕಾರಿಗಳು ಗುರುತಿಸಿ ಮೆಚ್ಚುಗೆ ಸೂಚಿಸಲಿದ್ದಾರೆ.

ತುಲಾ: ಮಾಡುವ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಲಿದ್ದೀರಿ. ಆರೋಗ್ಯದಲ್ಲಿ ಸ್ಥಿರ. ಸ್ವಲ್ಪ ಹಣಕಾಸಿನ ಸಮಸ್ಯೆ ಉಂಟಾಗಲಿದೆ.

ವೃಶ್ಚಿಕ: ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎನ್ನುವುದು ಗೊತ್ತಿರಲಿ. ಆತ್ಮೀಯರಿಂದ ಶುಭ ಸುದ್ದಿ ಕೇಳಲಿದ್ದೀರಿ. ಬಂಧುಗಳ ಆಗಮನ.

ಧನುಸ್ಸು: ಹಬ್ಬಕ್ಕೆ ಮನೆಯಲ್ಲಿ ಪೂರ್ವ ತಯಾರಿಗಳು ಶುರುವಾಗಲಿವೆ. ಶುಭ ಕಾರ್ಯಗಳಿಗೆ ಇದು ಸಕಾಲ. ವ್ಯವಹಾರ ಪ್ರಗತಿ ಕಾಣಲಿದೆ

ಮಕರ: ಸಣ್ಣ ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ. ಒಳ್ಳೆಯ ಮಾತುಗಳಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರಕುತ್ತದೆ.

ಕುಂಭ: ಅತಿಯಾದ ಆಸೆ ಬೇಡ. ಹಾಗೆಂದು ವಿರಾಗಿಯ ರೀತಿ ಕೂರುವುದೂ ಬೇಡ. ನಿಮ್ಮ ಪಾಲನ್ನು ನೀವು ಪಡೆದುಕೊಳ್ಳುವುದು ಲೇಸು.

ಮೀನ: ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಸಾಹಿತ್ಯದ ಕಡೆಗೆ ಆಸಕ್ತಿ ಹೆಚ್ಚಲಿದೆ. ಪರರ ಸಂತೋಷದಲ್ಲಿಯೇ ನಿಮ್ಮ ಸಂತೋಷ ಅಡಗಿದೆ.