ಮೇಷ: ಮೊಸರಿನಲ್ಲಿಯೂ ಕಲ್ಲನ್ನು ಹುಡುಕುವ ಮಂದಿಯ ವಿಚಾರದಲ್ಲಿ ಮೌನ ವಹಿಸುವುದು ಒಳಿತು. ಅಂದುಕೊಂಡಿದ್ದು ನೆರವೇರಲಿದೆ.

ವೃಷಭ: ಹಿಂದೆ ಮಾಡಿದ್ದ ಸಾಲಗಳನ್ನು ಇಂದು ತೀರಿಸಲಿದ್ದೀರಿ. ಕೋಪ ಮಾಡಿಕೊಂಡರೆ ಯಾವ ಕಾರ್ಯವೂ ಸಿದ್ಧಿಯಾಗದು

ಮಿಥುನ: ಅಪರಿಚಿತರು ನಿಮಗೆ ಇಂದು ನೆರವು ನೀಡಲಿದ್ದಾರೆ. ಕಷ್ಟ ಎಂದುಕೊಂಡು ಕೈ ಕಟ್ಟಿ ಕೂರುವುದು ತರವಲ್ಲ. ಧೈರ್ಯವಿರಲಿ.

ಕಟಕ: ಹಳೆಯ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲೊಂದು ಹೊಸ ಉತ್ಸಾಹ ಉಂಟಾಗಲಿದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಸಿಂಹ: ಅಗತ್ಯ ಹಣ ಹೊಂದಿಸಿಕೊಳ್ಳಲು ಇಡೀ ದಿನ ಕಳೆಯಲಿದ್ದೀರಿ. ಎಲ್ಲರನ್ನೂ ಗೌರವದಿಂದ ಕಾಣುವುದು ಒಳ್ಳೆಯದ್ದು. ಶುಭ ಫಲ

ಕನ್ಯಾ: ಆತ್ಮವಂಚನೆ ಮಾಡಿಕೊಂಡು ಬದುಕುವವರ ನಡುವಿನಿಂದ ಹೊರ ಬರುವಿರಿ. ಸೂಕ್ತ ಸಮಯಕ್ಕಾಗಿ ಕಾಯದೇ ಕೆಲಸ ಆರಂಭಿಸಿ

ತುಲಾ: ಸಮಸ್ಯೆ ಸಣ್ಣದಿದ್ದಾಗಲೇ ಬಗೆಹರಿಸಿಕೊಳ್ಳಲು ಮುಂದಾಗಿ, ಇಲ್ಲವಾದರೆ ಮುಂದೆ ಕಷ್ಟ ಎದುರಿಸಬೇಕಾದೀತು. ನೆಮ್ಮದಿ ಹೆಚ್ಚಲಿದೆ

ವೃಶ್ಚಿಕ: ಕಾರ್ಯ ಸಾಧುವಲ್ಲದ ಕೆಲಸಕ್ಕೆ ಕೈ ಹಾಕದಿರಿ. ಕಂಡ ಕನಸು ನನಸಾಗಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಎಚ್ಚರ ಇರಲಿ. ನಂಬಿ ಕೆಟ್ಟವರಿಲ್ಲ.

ಧನುಸ್ಸು: ಶುಭ ಕಾರ್ಯಗಳು ಮುಂದೂಡಲ್ಪಡುತ್ತವೆ. ಮನೆ ಬದಲಾಯಿಸುವ ಯೋಚನೆಯೂ ಜಾರಿಗೆ ಬರುವುದಿಲ್ಲ. ತಂದೆಯ ಮಾತು ಕೇಳಿ.

ಮಕರ: ಎಲ್ಲಾ ಕೆಲಸವನ್ನೂ ಶುರು ಮಾಡಿ ಅರ್ಧಕ್ಕೆ ನಿಲ್ಲಿಸುವುದು ಸರಿಯಲ್ಲ. ಹಿಡಿದ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಕಾರ್ಯ ಕೈಗೊಳ್ಳಿ.

ಕುಂಭ:ಕಷ್ಟಪಟ್ಟು ಮಾಡಿದ ಕಾರ್ಯ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು. ಆರೋಪಗಳಿಂದ ಮುಕ್ತರಾಗುವಿರಿ.

ಮೀನ: ದೇವಸ್ಥಾನಗಳ ಭೇಟಿ ಸಾಧ್ಯತೆ. ಬಂಧ ಗಳೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮನೆಯಲ್ಲಿ ಸಂತಸ ಹೆಚ್ಚಾಗಲಿದೆ. ಶುಭ ಫಲ