ಈ ರಾಶಿಗೆ ಒಳಿತಿನ ದಿನಗಳ ಪ್ರಾರಂಭ

ಈ ರಾಶಿಗೆ ಒಳಿತಿನ ದಿನಗಳ ಪ್ರಾರಂಭ

Add Asianetnews Kannada as a Preferred SourcegooglePreferred


ಮೇಷ
ಸಾಹಿತ್ಯ ಓದುವುದರಿಂದ ಸಂತೋಷ
ದಕ್ಕುತ್ತದೆ. ಓದುವ ಹವ್ಯಾಸವೇ ನಿಮ್ಮನ್ನು
ಇಡೀ ದಿನ ಉಲ್ಲಾಸಿಗಳಾಗಿ ಇಡುತ್ತದೆ.

ವೃಷಭ
ಮಾಡಿದ ತಪ್ಪಿಗೆ ಶಿಕ್ಷೆ ಇದ್ದದ್ದೇ. ಆದರೆ ಹಿಂದೆ
ಮಾಡಿದ ತಪ್ಪಿಗಾಗಿ ಕೊರಗುವುದು ಬೇಡ.
ವಾಸ್ತವದಲ್ಲಿ ಯಾವುದೇ ತಪ್ಪು ಮಾಡದಿರಿ.

ಮಿಥುನ
ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎಂದು
ಸತ್ಯ ಹೇಳದೇ ಇರಬೇಡಿ. ಇಂದು
ನೋವಾದರೂ ಮುಂದೆ ಒಳಿತಾಗಲಿದೆ.

ಕಟಕ
ಬೆಟ್ಟ ಏರಿ ನಿಂತರೆ ಒಳ್ಳೆಯ ಗಾಳಿ ಸಿಕ್ಕುತ್ತದೆ.
ಸಂತೋಷವಾಗುತ್ತದೆ. ಆದರೆ ಬೆಟ್ಟ ಹತ್ತುವ
ಶಕ್ತಿ ನಿಮ್ಮಲ್ಲಿ ಬರಬೇಕು. ಕಷ್ಟ ಎದುರಿಸಿ.

ಸಿಂಹ
ಇಂದು ಮಾಡಬೇಕಾದ ಕೆಲಸವನ್ನು ಪೂರ್ಣ
ಪ್ರಮಾಣದಲ್ಲಿ ಇಂದೇ ಮಾಡಿ ಮುಗಿಸಿ,
ನಾಳೆಗೆ ಎಂದು ತಳ್ಳಿ ಹಾಕುವುದು ಬೇಡ

ಕನ್ಯಾ
ಕನಸುಗಳನ್ನು ನನಸು ಮಾಡಿಕೊಳ್ಳುವತ್ತ
ಪ್ರಯತ್ನ ಇರಲಿ. ಈ ಪ್ರಯತ್ನವೇ ನಿಮ್ಮನ್ನು
ಮುಂದೆ ಸಾಧಕರನ್ನಾಗಿ ಮಾಡುತ್ತದೆ.

ತುಲಾ 
ಕೈ ಹಾಕಿದ ವ್ಯವಹಾರದಲ್ಲಿ ಲಾಭವಾಗಲಿದೆ.
ಹಾಗೆಂದು ಹೇಳಿ ಸುಮ್ಮನೆ ಕೂರುವುದು
ಬೇಡ. ಹೆಚ್ಚು ಶ್ರಮ ವಿನಿಯೋಗ ಮಾಡಿ.

ವೃಶ್ಚಿಕ
ಬೆಳಿಗ್ಗೆ ಒಂದು ಗಂಟೆ ವಾಕ್ ಹೋಗಿ ಬನ್ನಿ.
ಇದರಿಂದ ಮನಸ್ಸು ಉಲ್ಲಾಸಿತವಾಗುತ್ತೆ. ದಿನ
ಪೂರ್ತಿ ಸಂತೋಷದಿಂದ ಇರುವಿರಿ. 

ಧನುಸ್ಸು
ನಿಮ್ಮ ಶಕ್ತಿ ಹೆಚ್ಚಲಿದೆ. ಆದರೂ ಮತ್ತೊಬ್ಬರ
ಶಕ್ತಿಯ ಬಗ್ಗೆ ಸಂಶಯ ಪಡುವುದು ಬೇಡ.
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶ.

ಮಕರ
ಅಭಿಮಾನ ಇರಲಿ. ಆದರೆ ಅದು ಅತಿಯಾಗಿ
ದುರಭಿಮಾನ ಆಗುವುದು ಬೇಡ. ನಿಮ್ಮ
ಪಾಡಿಗೆ ನೀವು ಕೆಲಸದಲ್ಲಿ ತೊಡಗಿಕೊಳ್ಳಿ.

ಕುಂಭ
ನಿಮ್ಮ ಮನಸ್ಸು ಹೇಳಿದ ಹಾಗೆ ಕೇಳಿ.
ಮತ್ತೊಬ್ಬರ ಮಾತಿಗೆ ತಲೆ ಕೆಡಿಸಿಕೊಳ್ಳುವುದು
ಬೇಡ. ಸಲಹೆಗಳು ಹೇರಳವಾಗಿ ಬರಲಿವೆ.

ಮೀನ 
ನಿಮ್ಮ ಆಸೆಗಳಿಗೆ ಜೀವ ಬರಲಿದೆ. ಆದರೆ ಅದು
ಸದ್ಯಕ್ಕೆ ಈಡೇರದಿದ್ದರೂ ಮುಂದೆ ನಿಮ್ಮ
ಆಸೆಯ ಬೀಜ ಫಲ ನೀಡಲಿದೆ.