ಗ್ರಹಣ ಮೋಕ್ಷ ಕಾಲದ ಇಂದಿನ ದಿನ ಭವಿಷ್ಯ ಹೇಗಿದೆ?

ಮೇಷ
ಕಠಿಣ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸ
ಲಿದ್ದೀರಿ. ಆತ್ಮವಿಶ್ವಾಸ ಕಳೆದುಕೊಳ್ಳದೇ
ಮುಂದೆ ಸಾಗಿ. ಶ್ರಮಕ್ಕೆ ತಕ್ಕ ಪ್ರತಿಫಲ ಇದೆ.

ವೃಷಭ
ನಿಮ್ಮ ಕಣ್ಣಿಗೆ ಕಂಡದ್ದಷ್ಟೇ ಸತ್ಯ ಎಂದು
ಕೊಳ್ಳದಿರಿ. ತಂದೆಯ ಆರೋಗ್ಯದಲ್ಲಿ ಚೇತರಿಕೆ
ಕಂಡುಬರಲಿದೆ. ಸ್ನೇಹಿತರಿಂದ ಸಹಕಾರ.

ಮಿಥುನ
ಮತ್ತೊಬ್ಬರ ಕಷ್ಟವನ್ನು ಕಣ್ಣಾರೆ ಕಂಡು ಸುಮ್ಮ
ನೆ ಕೂರದಿರಿ. ಕಾರ್ಯವಾಸಿ ಕತ್ತೆ ಕಾಲು.
ಧರ್ಮದ ಮಾರ್ಗದಲ್ಲಿ ಮುಂದೆ ಸಾಗುತ್ತಿರಿ.

ಕಟಕ
ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ
ಮಾಡುವುದರಲ್ಲಿ ಅರ್ಥವಿಲ್ಲ. ಸ್ವಾರ್ಥ
ಸಾಧನೆಗೆ ಮುಂದಾಗದಿರಿ. ಗೆಲುವು ಕಷ್ಟ.

ಸಿಂಹ
ಜಗತ್ತಿಗೆ ನೀವು ಏನೆಂದು ತೋರಿಸಿಕೊಳ್ಳುವ
ಮುನ್ನ ನಿಮಗೆ ನೀವು ಏನು ಎಂದು ತಿಳಿಸಿ
ಕೊಡಿ. ಆತುರಕ್ಕೆ ಬಿದ್ದು ಅನಾಹುತವಾಗಲಿ

ಕನ್ಯಾ
ಒಳ್ಳೆಯ ಚಿಂತನೆಯೇ ನಿಮಗೆ ಒಳಿತು
ತಂದೊಡ್ಡಲಿದೆ. ಪರಸ್ಪರ ನಂಬಿಕೆ ವಿಶ್ವಾಸದಿಂದ
ಮುಂದೆ ಸಾಗಿ. ಸಂತೋಷ ಹೆಚ್ಚಾಗಲಿದೆ.

ತುಲಾ 
ಸಂಸಾರದ ವಿರಹಕ್ಕೆ ತೆರೆ ಬೀಳಲಿದೆ. ಇಡೀ
ದಿನದ ಖುಷಿಯಿಂದ ಹೊಸ ಕೆಲಸಗಳಲ್ಲಿ ಆಸಕ್ತಿ
ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ.

ವೃಶ್ಚಿಕ
ದೇವರ ಮೇಲೆ ನಂಬಿಕೆ ಇಟ್ಟು ಹೊಸ ಕಾರ್ಯ
ಗಳನ್ನು ಕೈಗೆತ್ತಿಕೊಳ್ಳಿ. ತಂದೆ ತಾಯಿಯ
ಮಾತಿನಿಂದ ನಿಮ್ಮ ಉತ್ಸಾಹ ಹೆಚ್ಚಲಿದೆ. 

ಧನುಸ್ಸು
ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ
ನೋಡುವ ಅಭ್ಯಾಸ ಬೆಳೆಸಿಕೊಳ್ಳಿ. ದೂರದ
ಬೆಟ್ಟ ಯಾವಾಗಲೂ ನುಣ್ಣಗೆ ಕಾಣುವುದು.

ಮಕರ
ಸಾಧ್ಯವಾದರೆ ಒಳ್ಳೆಯದ್ದು ಮಾಡಿ. ಇಲ್ಲವೇ
ಸುಮ್ಮನೆ ಇದ್ದು ಬಿಡಿ. ಕೆಲಸದ ಒತ್ತಡದ
ನಡುವೆಯೂ ಸಂತೋಷದ ಕ್ಷಣಗಳಿವೆ.

ಕುಂಭ
ದಿನವಿಡೀ ದಣಿವರಿಯದೇ ಕೆಲಸ ಮಾಡಲಿ
ದ್ದೀರಿ. ಸುಖ ನಿದ್ರೆ ನಿಮ್ಮ ಪಾಲಿಗಿದೆ. ನಿಮ್ಮ
ದಲ್ಲದ ವಿಚಾರಗಳಿಂದ ದೂರವಿದ್ದುಬಿಡಿ.

ಮೀನ 
ದೊಡ್ಡವರು ಹೇಳಿದ ಮಾತಿನಿಂದ ನಿಮ್ಮಲ್ಲಿ
ಬದಲಾವಣೆ ಉಂಟಾಗಲಿದೆ. ಮೈಗಳ್ಳತನ,
ಕೆಲಸಗಳ್ಳತನ ಬೇಡ. ಲಾಭ ಹೆಚ್ಚಾಗಲಿದೆ.