ಈ ರಾಶಿಗೆ ದೊಡ್ಡ ವ್ಯವಹಾರವೊಂದು ಕೈಗೂಡಲಿದ್ದು, ಶುಭವಾಗಲಿದೆ

ಮೇಷ
ಸಮಸ್ಯೆಗಳಿಗೆ ಬೆನ್ನು ತೋರಿಸಿ ಓಡಿ
ಹೋಗುವುದು ಬೇಡ. ನಿಮ್ಮಂತೆಯೇ ಇಡೀ
ದಿನ ನೀವಿದ್ದು ಬಿಡಿ. ಆಲಸ್ಯ ಕಡಿಮೆಯಾಗಲಿ.

ವೃಷಭ
ಕೋರ್ಟ್ ವ್ಯಾಜ್ಯಗಳಲ್ಲಿ ಇಂದು ಗೆಲುವು
ಸಾಧಿಸಿಲಿದ್ದೀರಿ. ಹೊಸ ಸಾಲಕ್ಕೆ ಕೈ ಹಾಕುವ
ಸಂಭವವೂ ಇದೆ. ಬಿಡುವಿಲ್ಲದ ಕೆಲಸ.

ಮಿಥುನ
ನಿಮ್ಮ ಸಂತೋಷಕ್ಕಾಗಿ ಮತ್ತೊಬ್ಬರಿಗೆ ತೊಂದರೆ
ಕೊಡುವುದು ಸರಿಯಲ್ಲ. ನಿಮ್ಮ ಪಾಲಿನ
ಜವಾಬ್ದಾರಿಗಳನ್ನು ಮತ್ತೊಬ್ಬರಿಗೆ ಹೇರದಿರಿ.

ಕಟಕ
ಮಾತು ಕಡಿಮೆ ಮಾಡಿಕೊಂಡರೆ ಆತ್ಮಶಾಂತಿ
ಹೆಚ್ಚಾಗಲಿದೆ. ಸ್ನೇಹಿತರ ವಿಚಾರದಲ್ಲಿ
ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ.

ಸಿಂಹ
ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿತು
ಮುಂದೆ ಸಾಗಿ. ಹಿರಿಯರು ಹೇಳಿದ ಮಾತಿಗೆ
ಬೆಲೆ ನೀಡಲಿದ್ದೀರಿ. ಸಂತೋಷ ಹೆಚ್ಚಾಗಲಿದೆ.

ಕನ್ಯಾ
ನಿಮ್ಮ ಬಗ್ಗೆ ನಿಂದನೆಗಳು ಹೆಚ್ಚಾಗಲಿವೆ.
ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ನಿಮ್ಮ
ಪಾಡಿಗೆ ನೀವು ಇರಿ. ಕಾಲವೇ ಉತ್ತರಿಸಲಿದೆ.

ತುಲಾ 
ನೀವು ತುಂಬಾ ಗೌರವಿಸುವ ವ್ಯಕ್ತಿಯಿಂದ
ನಿಮಗೆ ಪ್ರೋತ್ಸಾಹ ದೊರೆಯಲಿದೆ. ಪಾಲಿಗೆ
ಬಂದದ್ದು ಪಂಚಾಮೃತ ಎಂದು ತಿಳಿಯಿರಿ.

ವೃಶ್ಚಿಕ
ವಿದೇಶಿ ಪ್ರವಾಸಕ್ಕೆ ಬೇಕಾದ ಎಲ್ಲಾ ತಯಾರಿ
ಗಳೂ ಇಂದು ಮುಗಿಯಲಿವೆ. ದೊಡ್ಡ
ವ್ಯವಹಾಕ್ಕೆ ಕೈ ಹಾಕಲಿದ್ದೀರಿ. ಶುಭ ಫಲ. 

ಧನುಸ್ಸು
ನಿಮ್ಮ ಒಳ್ಳೆಯ ಗುಣವೇ ಇಂದು ನಿಮ್ಮನ್ನು
ಉನ್ನತ ಸ್ಥಾನಕ್ಕೆ ಕರೆದೊಯ್ಯಲಿದೆ. ಹೆಂಡತಿಯ
ಕೋಪಕ್ಕೆ ಗುರಿಯಾಗುವಿರಿ. ಸಂಜೆಗೆ ಶುಭ.

ಮಕರ
ನಿಮ್ಮ ಕಷ್ಟಕ್ಕೆ ಬಂಧುಗಳು ನೆರವಾಗಲಿದ್ದಾರೆ.
ಅನಗತ್ಯ ಖರ್ಚುಗಳಿಗೆ ಮುಂದಾಗದಿರಿ.
ಒಳ್ಳೆಯ ವಾರ್ತೆ ಕೇಳಲಿದ್ದೀರಿ. ಶುಭ ಫಲ.

ಕುಂಭ
ನಿಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚು ಮನ್ನಣೆ
ದೊರೆಯಲಿದೆ. ಕುಟುಂಬದೊಂದಿಗೆ ಇಡೀ
ದಿನ ಕಳೆಯಲಿದ್ದೀರಿ. ಅಸಮರ್ಥರಿಂದ ಕಿರಿಕಿರಿ.

ಮೀನ 
ನಿಮ್ಮ ಮನಸ್ಸಿಗೆ ಸರಿ ಎನ್ನಿಸಿದ ವಿಚಾರವನ್ನು
ಮಾಡಿ ಮುಗಿಸಿ. ಒಳ್ಳೆಯ ಕಾರ್ಯಗಳಿಗೆ
ಕಾಯುವುದು ಬೇಡ. ಕೋಪ ಕೂಡದು.