ಮೇಷ: ಅಪ್ರಬುದ್ಧರ ನಡುವೆ ವಾದ ಮಾಡುವುದಕ್ಕಿಂತ ಸುಮ್ಮನೆ ಇದ್ದು ಬಿಡುವುದು ಲೇಸು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿ

ವೃಷಭ: ಕಷ್ಟಗಳು ನನಗೆ ಮಾತ್ರ ಯಾಕೆ ಬರುತ್ತವೆ ಎಂದು ಚಿಂತಿಸುತ್ತಾ ಕೂರುವುದು ಬೇಡ. ಹೊಸ ದಾರಿಯನ್ನು ಕಂಡುಕೊಂಡು ಸಾಗಿ.

ಮಿಥುನ: ಮರೆತುಹೋಗಿದ್ದ ಘಟನೆಗಳು ಮತ್ತೆ ನೆನಪಿಗೆ ಬಂದು ಮನಸ್ಸಿಗೆ ಒಂದಷ್ಟು ನೋವು ತಂದ ರೂ ಸಂಜೆ ವೇಳೆಗೆ ಎಲ್ಲವೂ ಸರಿಯಾಗಲಿದೆ.

ಕಟಕ: ಆರ್ಥಿಕ ಸಮಸ್ಯೆಯಿಂದ ಹೊರಗೆ ಬರಲಿದ್ದೀರಿ. ಜೀವನೋತ್ಸಾಹವನ್ನು ಬೆಳೆಸಿಕೊಂಡು ಮುಂದೆ ಸಾಗಿ. ಶುಭ ಫಲ.

ಸಿಂಹ: ಮತ್ತೊಬ್ಬರನ್ನು ಅತಿಯಾಗಿ ಅವಲಂಬಿಸು ವುದು ಬೇಡ. ನಿಮ್ಮ ಕೆಲಸ ಕಾರ್ಯಗಳನ್ನು ನೀವೇ ಮಾಡಿ ಮುಗಿಸಿಕೊಳ್ಳಿ. ಧೈರ್ಯ ಇರಲಿ.

ಕನ್ಯಾ: ಸೂಕ್ತ ತಯಾರಿ ಮಾಡಿಕೊಂಡು, ಸರಿಯಾದ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಖಂಡಿತ ದೊರೆಯುತ್ತದೆ. ಆತುರ ಬೇಡ.

ತುಲಾ: ನಿಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಕ್ಕುವ ಕಡೆಯಲ್ಲಿ ಹೆಚ್ಚು ಸಮಯ ಕಳೆಯಲಿದ್ದೀರಿ. ಪ್ರವಾಸ ತುಲಾ ಹೊರಡುವ ಸಾಧ್ಯತೆಗಳು ಅಧಿಕವಾಗಿವೆ

ವೃಶ್ಚಿಕ: ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕುವ ಸ್ನೇಹಿತರ ಬಗ್ಗೆ ಎಚ್ಚರಿಕೆಯಿಂದ ಇರಿ. ದೊಡ್ಡ ಪ್ರತಿಫಲಕ್ಕಾಗಿ ದೊಡ್ಡ ಶ್ರಮವನ್ನೇ ಹಾಕಬೇಕು

ಧನುಸ್ಸು: ಆರೋಗ್ಯದಲ್ಲಿ ವೃದ್ಧಿ ಕಾಣಲಿದೆ. ಮನಸ್ಸಿನ ನೆಮ್ಮದಿಗಾಗಿ ಏಕಾಂಗಿಯಾಗಿ ಒಂದಷ್ಟು ಸಮಯ ಕಳೆಯಿರಿ. ಅಹಂಕಾರ ಬೇಡ.

ಮಕರ: ಇಂದು ಹೆಚ್ಚು ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ಮೌನವಾಗಿದ್ದಷ್ಟೂ ನಿಮಗೇ ಅನುಕೂಲ. ನೆಮ್ಮದಿ ಹೆಚ್ಚಲಿದೆ

ಕುಂಭ: ಮತ್ತೊಬ್ಬರ ಸಂತೋಷಕ್ಕಾಗಿ ನಿಮ್ಮ ನೆಮ್ಮದಿ ಯನ್ನು ಬಲಿ ಕೊಟ್ಟುಕೊಳ್ಳುವಿರಿ. ಮನೆಯಲ್ಲಿ ಶಾಂತಿ ನೆಲೆಯಾಗಲಿದೆ. ಶುಭ ಫಲವಿದೆ.

ಮೀನ: ದಿನದ ಆರಂಭದಲ್ಲಿಯೇ ಶುಭ ಸುದ್ದಿ ತಿಳಿಯಲಿದೆ. ನೀವು ಹರಿಸಿದ್ದ ಬೆವರಿಗೆ ಇಂದು ಮೀನ ಸೂಕ್ತ ಪ್ರತಿಫಲ ದೊರೆಯುವ ಸಾಧ್ಯತೆ ಇದೆ.