ಈ ರಾಶಿಯವರಿಗಿಂದು ನೆಮ್ಮದಿಯ ದಿನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 7:10 AM IST
Daily Bhavishya July 19
Highlights

ಈ ರಾಶಿಯವರಿಗಿಂದು ನೆಮ್ಮದಿಯ ದಿನ

ಮೇಷ
ನಿಮ್ಮ ಗೆಳೆಯರ ವಿಚಾರಗಳಲ್ಲಿ ನೀವು ಮೃದು
ಧೋರಣೆ ತೋರುವುದೇ ಉತ್ತಮ. ಅದರಿಂದ
ನೆಮ್ಮದಿ ಸಿಗಲಿದೆ. ಆತುರದ ನಿರ್ಧಾರ ಬೇಡ.

ವೃಷಭ
ಮನೆಯಲ್ಲಿ ನೆಮ್ಮದಿಯು ಸಿಗಲಿದೆ. ಆಫೀಸಿನ
ಕೆಲಸಗಳಲ್ಲೂ ಅಷ್ಟೆ ತೃಪ್ತಿಯಿದೆ. ಇಂದು ಸ್ವಲ್ಪ
ಗೊಂದಲಗಳು ಸೃಷ್ಟಿಯಾಗಲಿವೆ. ಜೋಕೆ.

ಮಿಥುನ
ಗೆಳೆಯರೊಂದಿಗೆ ಜಾಲಿ ಟ್ರಿಪ್ ಹೋಗಲು
ತಯಾರಿ ನಡೆಸುತ್ತಿದ್ದೀರಿ. ಈ ದಿನವು ನಿಮಗೆ
ಹೆಚ್ಚು ಖುಷಿ ತರಲಿವೆ. ಜಾಲೀ ಡೇ ಆಗಲಿದೆ.

ಕಟಕ
ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸಿದ್ದೀರ.
ಆದರೂ ಇದರಿಂದಲೇ ಸಾಲಗಳೆಲ್ಲವೂ ತೀರು
ವುದಿಲ್ಲ. ಇನ್ನೂ ಸ್ವಲ್ಪ ದಿನಗಳು ಹೀಗೆ ಇರುತ್ತೆ.

ಸಿಂಹ
ಇಂದು ಮನರಂಜನಾ ಕಾರ್ಯಕ್ರಮಗಳನ್ನು
ವೀಕ್ಷಿಸುವಿರಿ. ಇಂದು ಹೆಚ್ಚು ಖುಷಿಯಲ್ಲೇ
ಕಳೆಯುವಿರಿ. ಚಿಂತೆ ಹತ್ತಿರವೂ ಸುಳಿಯದು.

ಕನ್ಯಾ
ಹಿರಿಯರು ನಿಮ್ಮ ಮಾತಿಗೆ ಪುಷ್ಟಿ ಕೊಡುವರು.
ಅವರ ಅನುಭವವನ್ನು ನಿರ್ಲಕ್ಷಿಸದಿರಿ. ಅವರ
ಮುಂದೆ ತಾಳ್ಮೆಯಿಂದ ವರ್ತಿಸುವುದು ಸೂಕ್ತ.

ತುಲಾ 
ನಿಮ್ಮ ರಾಶಿಯ ಫಲದ ಪ್ರಕಾರ ನೀವು ತುಂಬಾ
ನಿಷ್ಠೂರವಾದಿಗಳು. ಅದನ್ನು ದಿನ ಕ್ರಮೇಣ
ಕಡಿಮೆ ಮಾಡಿಕೊಳ್ಳುತ್ತಾ ಬನ್ನಿ. ಒಳಿತಾಗಲಿದೆ.

ವೃಶ್ಚಿಕ
ಆಹಾರ ಪದ್ಧತಿಯಲ್ಲಿ ಹೆಚ್ಚು ಜಾಗೃತರಾಗಿರಿ.
ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವಂತಹ
ಸಂಭವವೂ ಏರ್ಪಡಲಿದೆ. ಜೋಪಾನವಾಗಿರಿ. 

ಧನುಸ್ಸು
ಖರ್ಚಿನ ಮೇಲೆ ಹಿಡಿತವಿರಲಿ. ಅಪರಿಚಿತ
ವ್ಯಕ್ತಿಗಳ ಪರಿಚಯವಾಗಲಿದೆ. ಆರೋಗ್ಯ
ಸಮಸ್ಯೆಗೆ ಪರಿಹಾರವೂ ದೊರೆಯಲಿದೆ.

ಮಕರ
ಶುಭ ಸುದ್ದಿಗಳಿಂದ ಸಂತೋಷ. ನೆರೆಹೊರೆ
ಯವರೊಂದಿಗೆ ಉತ್ತಮ ಬಾಂಧವ್ಯ. ದೀರ್ಘ
ಕಾಲದ ಸಮಸ್ಯೆಗಳು ಪರಿಹಾರವಾಗಲಿವೆ.

ಕುಂಭ
ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ. ಭಿನ್ನಾಭಿಪ್ರಾ
ಯಗಳಿಂದ ವೈಮನಸ್ಯ ಉಂಟಾಗಬಹುದು.
ಹಳೆಯ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಲಿದ್ದೀರಿ.

ಮೀನ 
ಕೆಲಸದ ಒತ್ತಡವು ನಿಮ್ಮಲ್ಲಿ ಹೆದರಿಕೆಯನ್ನು
ಉಂಟು ಮಾಡಬಹುದು. ಆದರೆ ಧೈರ್ಯ
ಗೆಡದಿರಿ. ಸಮಚಿತ್ತವನ್ನು ಕಾಯ್ದುಕೊಳ್ಳಿರಿ.

loader