ಮೇಷ: ಸತ್ಯ ಹೇಳುವುದರಿಂದ ಕ್ಷಣಿಕವಾಗಿ ನೋವು ಆದರೂ ಮುಂದೆ ಅದರಿಂದ ಒಳ್ಳೆಯ ಪ್ರತಿಫಲ ಸಿಕ್ಕಲಿದೆ. ಧೈರ್ಯ ಹೆಚ್ಚಾಗಲಿದೆ.

ವೃಷಭ: ನೀವು ಮಾಡಿದ ತಪ್ಪಿನಿಂದಾಗಿ ಮನೆ ಮಂದಿಗೆ ತೊಂದರೆಯಾಗಲಿದೆ. ಪದೋನ್ನತಿ ಸಿಗಲಿದೆ. ಹೊಸ ವಸ್ತುಗಳನ್ನು ಕೊಂಡುಕೊಳ್ಳಲಿದ್ದೀರಿ.

ಮಿಥುನ: ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಶಕ್ತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಲೆಕ್ಕಾಚಾರಗಳನ್ನು ಹಾಕಿಕೊಳ್ಳಿ. ಶುಭಫಲ.

ಕಟಕ: ತಪ್ಪನ್ನೇ ಹುಡುಕುತ್ತಾ ಹೋದರೆ ಮನಸ್ಸು ಕೆಡಲಿದೆ. ಇರುವುದರಲ್ಲಿ ಸಂತೋಷವನ್ನು ಹುಡುಕಿಕೊಳ್ಳಿ. ಅತಿಯಾದ ಆಸೆ ಬೇಡ.

ಸಿಂಹ: ಗೆಳೆಯರ ನಡುವಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿರಿ. ನಂಬಿಕೆ ಇರಲಿ.

ಕನ್ಯಾ: ಕೊಡುಕೊಳ್ಳುವಿಕೆಯಲ್ಲಿ ಸ್ವಲ್ಪ ಗೊಂದಲ ಉಂಟಾಗಲಿದೆ. ದೊಡ್ಡ ವ್ಯವಹಾರಕ್ಕೆ ಕೈ ಹಾಕಲಿದ್ದೀರಿ. ಬಂಧುಗಳ ಆಗಮನವಾಗಲಿದೆ.

ವಾರ ಭವಿಷ್ಯ: ಈ ರಾಶಿಯವರು ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ.

ತುಲಾ: ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಹಿರಿಯರ ಮಾತಿಗೆ ವಿರುದ್ಧವಾಗಿ ಹೋದರೆ ಕಷ್ಟವಾಗಬಹುದು.

ವೃಶ್ಚಿಕ: ಇಂದು ನಿಮಗೆ ಗುರು ಬಲ ಚೆನ್ನಾಗಿದೆ. ಗಣೇಶನ ಆರಾಧನೆ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ.

ಮಕರ: ನಾಳೆಯನ್ನು ನೆನೆಯುತ್ತಾ ಈ ದಿನವನ್ನು ಹಾಳು ಮಾಡಿಕೊಳ್ಳಬೇಡಿ. ಬಹುದಿನಗಳ ಗೊಂದಲಕ್ಕೆ ಇಂದು ತೆರೆ ಬೀಳಲಿದೆ.

ಧನಸ್ಸು: ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡುವಿರಿ. ಹೊಸ ವಸ್ತು ಕೊಳ್ಳುವಾಗ ಎಚ್ಚರ ಇರಲಿ. ಒಳ್ಳೆಯ ಕಾರ್ಯ ಮಾಡಲಿದ್ದೀರಿ.

ಕುಂಭ: ಮನಸ್ಸಿದ್ದಂತೆ ಮಾದೇವ. ನೀವು ಅಂದುಕೊಂಡಿದ್ದು ಇಂದು ನೆರವೇರಲಿದೆ. ಶುಭ ಕಾರ್ಯಗಳು ಸನಿಹವಾಗಲಿವೆ.

ಮೀನ: ನಿಮ್ಮ ಪಾಲಿನ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಮತ್ತೊಬ್ಬರ  ನಂಬಿಕೆಗೆ ನಿಮ್ಮಿಂದ ಧಕ್ಕೆಯಾಗದಿರಲಿ.