ಈ ರಾಶಿಯವರಿಂದು ಎಚ್ಚರಿಕೆಯಿಂದ ಮುನ್ನಡೆಯಿರಿ

ಮೇಷ
ಸ್ನೇಹಿತರಿಂದ ಆರ್ಥಿಕ ಸಹಕಾರ
ದೊರೆಯಲಿದೆ. ನೆಮ್ಮದಿಗಾಗಿ ಎಲ್ಲಿಯೂ
ಹುಡುಕದಿರಿ. ಅದು ನಿಮ್ಮಲ್ಲಿಯೇ ನೆಲೆಸಿದೆ.

ವೃಷಭ
ಕಾಯಕವೇ ಕೈಲಾಸ ಎನ್ನುವ ರೀತಿ ಇಂದು ಸಿಕ್ಕ
ಕೆಲಸವನ್ನು ಪ್ರಮಾಣಿಕವಾಗಿ ಮಾಡಲಿದ್ದೀರಿ.
ಮಹಿಳೆಯರ ಪಾಲಿಗೆ ಅವಕಾಶಗಳು ಹೆಚ್ಚು.

ಮಿಥುನ
ದುಡಿಯುವ ವರ್ಗಕ್ಕೆ ಹೆಚ್ಚು ಅನುಕೂಲ
ವಾಗುವ ದಿನವಿದು. ಮತ್ತೊಬ್ಬರಿಂದ ಪ್ರೇರಣೆ
ಹೊಂದಿ ಒಳ್ಳೆಯ ಕೆಲಸವನ್ನು ಮಾಡುವಿರಿ.

ಕಟಕ
ನಿಮ್ಮ ಶಕ್ತಿಯನ್ನು ನೀವು ಆಸಕ್ತಿ ಹೊಂದಿರುವ
ಕ್ಷೇತ್ರದಲ್ಲಿ ವಿನಿಯೋಗ ಮಾಡಿ. ಹೆಚ್ಚು
ಮಾತು ಖಾಲಿ ಹರಟೆಗಳಿಗೆ ಬ್ರೇಕ್ ಹಾಕಿ.

ಸಿಂಹ
ಚಿಂತೆಯಿಂದ ಮುಕ್ತವಾಗುವಿರಿ. ಆರ್ಥಿಕವಾಗಿ
ಶಕ್ತರಾಗುವ ಎಲ್ಲಾ ಅವಕಾಶಗಳು ಇಂದು
ಬಂದೊದಗಲಿವೆ. ಜಾಗೃತೆಯಿಂದ ಇರಿ.

ಕನ್ಯಾ
ಕಣ್ಣಿನ ಆರೋಗ್ಯಕ್ಕೆ ಸಂಬಂಧಸಿದಂತೆ
ಸಮಸ್ಯೆಗಳ ಪರಿಹಾರವಾಗಲಿದೆ. ಸಮಯಕ್ಕೆ
ತಕ್ಕಂತೆ ಸ್ನೇಹಿತರೊಂದಿಗೆ ವ್ಯವಹರಿಸಿ.

ತುಲಾ 
ಭವಿಷ್ಯಕ್ಕಾಗಿ ಒಂದಷ್ಟು ತಯಾರಿಗಳನ್ನು
ಮಾಡಿಕೊಳ್ಳಲಿದ್ದೀರಿ. ಮಕ್ಕಳಿಗಾಗಿ ಹೆಚ್ಚು
ಖರ್ಚು ಮಾಡುವ ಅನಿವಾರ್ಯವಿದೆ.

ವೃಶ್ಚಿಕ
ಅವಕಾಶವಾದಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ನಿಮ್ಮಲ್ಲಿನ ಒಳ್ಳೆಯತನಕ್ಕೆ ಮಾನ್ಯತೆ ದೊರೆಯ
ಲಿದೆ. ಆಯ್ಕೆಯಲ್ಲಿ ಖಚಿತತೆ ಇರಲಿ. 

ಧನುಸ್ಸು
ಸಂಗೀತ ಕ್ಷೇತ್ರದಲ್ಲಿ ಇರುವವರಿಗೆ ಇಂದು
ಒಳ್ಳೆಯ ದಿನ. ಸೋಮಾರಿತನ ಬಿಟ್ಟು ಕೆಲಸದ
ಕಡೆ ಮುಖ ಮಾಡುವಿರಿ. ಶುಭ ಫಲ.

ಮಕರ
ನೆರೆ ಹೊರೆಯವರೊಂದಿಗೆ ಹೆಚ್ಚು ಆತ್ಮೀಯತೆ
ಬೆಳೆಯಲಿದೆ. ತಂದೆ ತಾಯಿಯ ಆರೋಗ್ಯಕ್ಕೆ
ಸಂಬಂಧಿಸಿದಂತೆ ಓಡಾಟ ಹೆಚ್ಚಾಗಲಿದೆ.

ಕುಂಭ
ನಿಮ್ಮಿಂದ ಇತರರಿಗೆ ನೋವಾಗದಂತೆ ವರ್ತಿಸಿ.
ಮಾಡುವ ಕೆಲಸದಲ್ಲಿ ಪೂರ್ಣತೆ ಸಾಧ್ಯ
ವಾಗಲಿದೆ. ಹೊಸ ಪ್ರಯೋಗ ಮಾಡದಿರಿ.

ಮೀನ 
ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಅವ
ಕಾಶಗಳು ಇಂದು ಹೇರಳವಾಗಿ ಸಿಗಲಿದೆ.
ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ.