ಈ ರಾಶಿಗೆ ಹೆಚ್ಚಿನ ಲಾಭಾಂಶ ಕೈ ಸೇರುವುದರೊಂದಿಗೆ ಶುಭಫಲ

ಮೇಷ
ಸೂಕ್ತವಾದ ರೀತಿಯಲ್ಲಿ ಹಾಕಿದ ಶ್ರಮ
ಖಂಡಿತ ಫಲ ನೀಡಿಯೇ ನೀಡುತ್ತದೆ. ಸಹೋ
ದರನ ಗೆಲುವಿಗೆ ಸಹಾಯ ಮಾಡುವಿರಿ.

ವೃಷಭ
ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಕಾರಾತ್ಮಕ
ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ
ಸಾಗುತ್ತಿರಿ. ಧೈರ್ಯವೇ ನಿಮ್ಮ ಶಕ್ತಿಯಾಗಲಿದೆ.

ಮಿಥುನ
ಜೀವನ ಶೈಲಿಯಲ್ಲಿ ಬದಲಾವಣೆ
ಏರ್ಪಡಲಿದೆ. ಹೊಸ ವ್ಯಕ್ತಿಗಳ ಪರಿಚಯ
ವಾಗಲಿದೆ. ಆತ್ಮವಿಶ್ವಾಸ ಅಧಿಕವಾಗಲಿದೆ.

ಕಟಕ
ಅನವಶ್ಯಕ ಮಾತುಗಳಿಗೆ ತಲೆ
ಕೆಡಿಸಿಕೊಳ್ಳುವುದು ಬೇಡ. ಮದುವೆ ಪ್ರಸ್ತಾಪ
ಹೆಚ್ಚಾಗಲಿದೆ. ದೂರದ ಊರಿಗೆ ಭೇಟಿ.

ಸಿಂಹ
ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಲಿದೆ.
ದೇವಸ್ಥಾನಕ್ಕೆ ಭೇಟಿ ನೀಡುವವರಿದ್ದೀರಿ.
ಸಮಯಕ್ಕೆ ಹೆಚ್ಚಿನ ಮಾನ್ಯತೆ ನೀಡಿ.

ಕನ್ಯಾ
ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ
ಇಡುವುದು ಬೇಡ. ಹೊಗಳುಭಟರ ಮಾತಿಗೆ
ಹೆಚ್ಚು ಬೆಲೆ ನೀಡಬೇಡಿ. ಖರ್ಚು ಅಧಿಕ.

ತುಲಾ 
ಕಷ್ಟದಲ್ಲಿ ಇರುವ ಸ್ನೇಹಿತರಿಗೆ ಸಹಾಯ
ಮಾಡಲಿದ್ದೀರಿ. ಕೈ ಹಾಕಿದ ವ್ಯವಹಾರದಲ್ಲಿ
ಹೆಚ್ಚು ಲಾಭ ಪಡೆದುಕೊಳ್ಳಲಿದ್ದೀರಿ. ಶುಭ ಫಲ.

ವೃಶ್ಚಿಕ
ನಿಮ್ಮ ಬಗ್ಗೆ ಬರುವ ಟೀಕೆಗಳಿಗೆ ಉತ್ತರ
ನೀಡುತ್ತಾ ಕೂರುವುದು ಬೇಡ. ನಿಮ್ಮ
ದಾರಿಯಲ್ಲಿ ನೀವು ಮುಂದೆ ಸಾಗುತ್ತಿರಿ. 

ಧನುಸ್ಸು
ಮಾಡುವ ಕೆಲಸವನ್ನೇ ಮನಸಾರೆ ಮಾಡಿ.
ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು
ಬೇಡ. ಇಡೀ ದಿನ ಹೆಚ್ಚು ಒತ್ತಡ ಇರಲಿದೆ.

ಮಕರ
ನೆಮ್ಮದಿಯ ನಾಳೆಗಳಿಗಾಗಿ ಇಂದಿನಿಂದಲೇ
ಪೂರ್ವ ತಯಾರಿ ಮಾಡಿಕೊಳ್ಳಿ. ಆರೋಗ್ಯ
ದಲ್ಲಿ ಚೇತರಿಕೆ. ಹೊಸ ವಸ್ತು ಕೊಳ್ಳಲಿದ್ದೀರಿ.

ಕುಂಭ
ಬಾಲ್ಯದ ಗೆಳೆಯನ ಅನಿರೀಕ್ಷಿತ ಭೇಟಿ
ಯಾಗಲಿದೆ. ನಿಮ್ಮ ಆಪ್ತರಿಂದಲೇ ನಿಮಗೆ
ಮೋಸವಾಗಲಿದೆ. ನಿರಂತರ ಪರಿಶ್ರಮ ಇರಲಿ.

ಮೀನ 
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ
ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ.
ತಂದೆಯ ಸಲಹೆಯಂತೆ ಮುನ್ನಡೆಯಿರಿ.