ಈ ರಾಶಿಯವರ ಕೆಲಸಕ್ಕೆ ಪ್ರತಿಫಲ ದೊರೆಯುವ ದಿನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Feb 2019, 7:01 AM IST
Daily Bhavishya  6 February  2019
Highlights

ಈ ರಾಶಿಯವರ ಕೆಲಸಕ್ಕೆ ಪ್ರತಿಫಲ ದೊರೆಯುವ ದಿನ


ಈ ರಾಶಿಯವರ ಕೆಲಸಕ್ಕೆ ಪ್ರತಿಫಲ ದೊರೆಯುವ ದಿನ

ಮೇಷ
ಆತುರದ ಕೈಗೆ ಬುದ್ಧಿ ಕೊಡದಿರಿ. ಎಲ್ಲರನ್ನೂ
ಪ್ರೀತಿಯಿಂದ ಕಾಣುವುದರಿಂದ ನಿಮಗೂ
ಎಲ್ಲರಿಂದ ಪ್ರೀತಿ ದೊರೆಯುವುದು.

ವೃಷಭ
ಮತ್ತೊಬ್ಬರ ಬಗ್ಗೆ ಹೆಚ್ಚು ಚಿಂತೆ ಮಾಡುವುದು
ಬೇಡ. ನಿಮ್ಮ ನಿಮ್ಮ ಕಾಯಕದಲ್ಲಿ ನಿರತರಾಗಿ.
ಶ್ರಮಕ್ಕೆ ತಕ್ಕಂತಹ ಪ್ರತಿಫಲ ದೊರಯಲಿದೆ.

ಮಿಥುನ
ನಿಮ್ಮಲ್ಲಿರುವ ಒಳ್ಳೆಯ ಚಿಂತನೆಯಿಂದ
ದಿನಾಂತ್ಯಕ್ಕೆ ಒಳ್ಳೆಯ ಕಾರ್ಯವೂ ಆಗಲಿದೆ.
ಕೆಡುಕು ಮಾಡುವವರು ಕಡಿಮೆಯಾಗಲಿದ್ದಾರೆ

ಕಟಕ
ನೀವು ನಿಂತಿರುವ ಸ್ಥಳದ ಬಗ್ಗೆ ನಿಮಗೆ ಅರಿವು
ಇರಲಿ. ಹೆಚ್ಚು ಮಾತನಾಡುವುದು ಬೇಡ.
ಸಲ್ಲದ ವಿಚಾರಗಳನ್ನು ಮನಸ್ಸಿನಿಂದ ತೆಗೆಯಿರಿ

ಸಿಂಹ
ಸ್ನೇಹಿತರ ಹೊಸ ಕೆಲಸಗಳಿಗೆ ನೀವು ನೆರವು
ನೀಡಲಿದ್ದೀರಿ. ಆರೋಗ್ಯದ ದೃಷ್ಟಿಯಿಂದ
ನಿತ್ಯವೂ ವ್ಯಾಯಾಮ ಮಾಡುತ್ತಾ ಬನ್ನಿ.

ಕನ್ಯಾ
ದಿನವಿಡೀ ನಗುಮುಖದಿಂದ ಇರುವಿರಿ.
ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಿ.
ಅಧಿಕಾರಿ ವರ್ಗಕ್ಕೆ ಹೆಚ್ಚು ಕೆಲಸದ ಒತ್ತಡ.

ತುಲಾ
ಅತಿಯಾದ ಹೊಗಳಿಕೆಯ ಮಾತುಗಳಿಗೆ
ಕಿವಿಯಾಗದಿರಿ. ಧೈರ್ಯದಿಂದ ಹೊಸ
ನಿರ್ಧಾರಗಳನ್ನು ಕೈಗೊಳ್ಳುವಿರಿ. ಶುಭ ಫಲ.

ವೃಶ್ಚಿಕ
ಎಲ್ಲಾ ಕಡೆಗಳಲ್ಲೂ ದೇವರನ್ನು ಹುಡುಕಿ
ಹೊರಡದಿರಿ. ಮಾಡುವ ಕೆಲಸದಲ್ಲೇ ಅವನು
ನಿಮಗೆ ಸಿಕ್ಕುತ್ತಾನೆ. ಕಾಯಕ ಮಾಡಿ. 

ಧನಸ್ಸು
ಪ್ರಸ್ತುತ ರಾಜಕಾರಣದ ಬಗ್ಗೆ ಆಸಕ್ತಿ
ಹೆಚ್ಚಾಗಲಿದೆ. ನಿಮ್ಮ ಶಕ್ತಿಗೆ ತಕ್ಕಂತಹ
ಜವಾಬ್ದಾರಿಗಳನ್ನು ಹೊತ್ತು ಕೊಳ್ಳುವಿರಿ.

ಮಕರ
ಸ್ವಾರ್ಥಿಗಳ ಸಂಗಡದಿಂದ ದೂರವಾಗಿರಿ.
ನಿಮ್ಮ ಎಲ್ಲಾ ಕೆಲಸಗಳನ್ನೂ ಸಮರ್ಥಿಸಿ
ಕೊಳ್ಳುವುದು ಬೇಡ. ಜಾಣತನ ಹೆಚ್ಚಲಿದೆ.

ಕುಂಭ
ದೂರುಗಳ ಬಗ್ಗೆ ಹೆಚ್ಚು ಚಿಂತೆ ಮಾಡುವುದು
ಬೇಡ. ಆಡಿಕೊಳ್ಳುವವರ ಮುಂದೆ ಬೆಳೆದು
ನಿಲ್ಲುತ್ತೇನೆ ಎನ್ನುವ ಸಂಕಲ್ಪ ಮಾಡಿ.

ಮೀನ
ಶಾಂತ ಮನಸ್ಸಿನಿಂದ ಮಾಡಿದ ಕೆಲಸಗಳು
ಹೆಚ್ಚು ಯಶ ಕಾಣುತ್ತವೆ. ಹಾಗಾಗಿ ಬೆಳಿಗ್ಗೆಯ
 ವೇಳೆ ಶಾಂತ ಚಿತ್ತದಿಂದ ಕೆಲಸ ಆರಂಭಿಸಿ.

loader