ಈ ರಾಶಿಯವರ ದೊಡ್ಡ ಕನಸೊಂದು ನನಸಾಗಲಿದೆ


ಮೇಷ
ನಿಮಗೆ ಸಂಬಂಧಪಡದ ವಿಚಾರಗಳಲ್ಲಿ ನೀವು
ಮೂಗು ತೂರಿಸಬೇಡಿ. ವಿರೋಧಿಗಳೂ
ಇಂದು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ.

ವೃಷಭ
ಹೊಸ ಕಾರು ಕೊಳ್ಳುವ ನಿಮ್ಮ ಆಲೋಚನೆಗೆ
ಇಂದು ಜೀವ ಬರಲಿದೆ. ನಿಮ್ಮ ಆತ್ಮ ತೃಪ್ತಿಗಾಗಿ
ಇತರರಿಗೆ ತೊಂದರೆ ನೀಡುವುದಕ್ಕೆ ಹೋಗದಿರಿ.

ಮಿಥುನ
ಅಸಾಧ್ಯವಾದ ಕೆಲಸಕ್ಕೆ ಕೈ ಹಾಕಿ ಸಮಯ
ಹಾಳು ಮಾಡಿಕೊಳ್ಳಲು ಹೋಗಬೇಡಿ.
ಸಹೋದರಿಯ ಸಹಾಯ ದೊರೆಯಲಿದೆ.

ಕಟಕ
ಹಿರಿಯರ ಮಾರ್ಗದರ್ಶನದಲ್ಲಿ ಮುಂದೆ
ಸಾಗಿ. ಇಂದು ಮಹತ್ವದ ನಿರ್ಧಾರವನ್ನು
ತೆಗೆದುಕೊಳ್ಳಲಿದ್ದೀರಿ. ನೆಮ್ಮದಿ ಹೆಚ್ಚಾಗಲಿದೆ.

ಸಿಂಹ
ಅಲ್ಪ ಜ್ಞಾನಿಗಳ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ
ಕೂರಬೇಡಿ. ಮಾನವೀಯ ಮೌಲ್ಯಗಳಿಗೆ ಬೆಲೆ
ನೀಡಲಿದ್ದೀರಿ. ವ್ಯವಹಾರದಲ್ಲಿ ಲಾಭವಾಗಲಿ

ಕನ್ಯಾ
ನಿಮ್ಮ ಮೋಜಿಗಾಗಿ ಗೆಳೆಯರಿಂದ ಹೆಚ್ಚು ಹಣ
ಖರ್ಚಾಗುವ ಸಾಧ್ಯತೆ. ಸಮಯಕ್ಕೆ ಸರಿಯಾಗಿ
ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸಿಕೊಳ್ಳಿ.

ತುಲಾ 
ಮತ್ತೊಬ್ಬರಿಗಾಗಿ ಕಾಯುವುದರಲ್ಲಿಯೇ
ಇಡೀ ದಿನ ವ್ಯರ್ಥವಾಗಲಿದೆ. ಸಂಜೆಯ
ವೇಳೆಗೆ ಅಂದುಕೊಂಡ ಕಾರ್ಯದಲ್ಲಿ ಯಶ.

ವೃಶ್ಚಿಕ
ಇಡೀ ದಿನ ಮಕ್ಕಳೊಂದಿಗೆ ಕಾಲ ಕಳೆಯಲಿ
ದ್ದೀರಿ. ಬಾಲ್ಯ ಸ್ನೇಹಿತರ ಭೇಟಿಯಾಗಲಿದೆ.
ಸುತ್ತಾಟ ಹೆಚ್ಚು. ಸಂಜೆ ವೇಳೆಗೆ ವಿಶ್ರಾಂತಿ. 

ಧನುಸ್ಸು
ಮತ್ತೊಬ್ಬರು ಹೇಳಿದ ಚಾಡಿ ಮಾತುಗಳಿಗೆ ಕಿವಿ
ಕೊಟ್ಟು ಮುಜುಗರ ಅನುಭವಿಸಲಿದ್ದೀರಿ.
ಮನೆಯ ಖರ್ಚಿನಲ್ಲಿ ಏರಿಕೆಯಾಗಲಿದೆ.

ಮಕರ
ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸತತ
ಪರಿಶ್ರಮದಿಂದಲೇ ಯಶಸ್ಸು ದಕ್ಕುವುದು.
ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡಲಿದ್ದೀರಿ.

ಕುಂಭ
ಹತ್ತಿರದ ಬಂಧುಗಳು ಇಂದು ನಿಮ್ಮೊಂದಿಗೆ
ಮುನಿಸಿಕೊಳ್ಳಲಿದ್ದಾರೆ. ಅತಿಯಾದ ಕೋಪ
ಮತ್ತು ಮಾತು ಒಳ್ಳೆಯದ್ದಲ್ಲ. ಮೌನವಾಗಿರಿ.

ಮೀನ 
ತುಂಬಾ ಆಸೆ ಪಟ್ಟಿದ್ದ ವಸ್ತು ಇಂದು ಸುಲಭಕ್ಕೆ
ನಿಮ್ಮ ಕೈ ಸೇರಲಿದೆ. ಜಾಗೃತೆಯಿಂದ ಹೊಸ
ಕೆಲಸಕ್ಕೆ ಕೈ ಹಾಕಿ. ಅಮ್ಮನೊಂದಿಗೆ ಸಣ್ಣ ಜಗಳ.