ಈ ರಾಶಿಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ : ಶುಭ ಫಲ

ಮೇಷ
ಹಿಡಿದ ಕಾರ್ಯ ಪ್ರಾರಂಭದಲ್ಲಿ ಶುಭಾರಂಭ
ಪಡೆದರೂ ಕಡೆಯಲ್ಲಿ ಹೆಚ್ಚು ಶ್ರಮ
ಬೇಡಲಿವೆ. ಆತ್ಮೀಯರು ದೂರವಾಗುವರು.

ವೃಷಭ
ಮಾತಿಗಿಂತ ಹೆಚ್ಚು ಕೆಲಸದಲ್ಲಿ ತೊಡಗಿಕೊಳ್ಳಲಿ
ದ್ದೀರಿ. ಮನೆಯಲ್ಲಿ ಸಣ್ಣ ಪುಟ್ಟ ಜಗಳಗಳು
ಸಹಜ. ಸಮಾಧಾನದಿಂದ ಮುಂದೆ ಸಾಗಿ.

ಮಿಥುನ
ಜಾಣತನದಿಂದ ಹಿಡಿದ ಕಾರ್ಯವನ್ನು
ಪೂರ್ಣ ಮಾಡಿಕೊಳ್ಳಲಿದ್ದೀರಿ. ತಂದೆಯ
ಮಾತಿನಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಲಿದೆ.

ಕಟಕ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಅಲ್ಪರ ಸಂಘದಿಂದ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕೆ
ಬರಲಿದೆ. ಮೌನದಿಂದ ಮುಂದೆ ಸಾಗಿ.

ಸಿಂಹ
ದೊಡ್ಡ ಪ್ರಮಾಣದ ಲಾಭವನ್ನು ಪಡೆಯು
ವುದಕ್ಕೆ ಹೋಗಿ ಕೈ ಸುಟ್ಟುಕೊಳ್ಳಲಿದ್ದೀರಿ.
ನಿಮ್ಮದೇ ಮಾತು ನಡೆಯಬೇಕು ಎನ್ನದಿರಿ.

ಕನ್ಯಾ
ನಿಮ್ಮ ವೈರಿಯೂ ಇಂದು ನಿಮಗೆ ಹತ್ತಿರ
ವಾಗಲಿದ್ದಾನೆ. ತುಂಬಾ ನಂಬಿಕೆ ಒಳ್ಳೆಯದಲ್ಲ.
ಬಂಧುಗಳ ಮಾತಿಗೆ ಬೆಲೆ ನೀಡಿ. ಶುಭ ಫಲ.

ತುಲಾ 
ನೀವು ಬಯಸುತ್ತಿದ್ದ ಅಧಿಕಾರ ಇಂದು ನಿಮ್ಮ
ಪಾಲಿಗೆ ದೊರೆಯಲಿದೆ. ಸೂಕ್ತ ತಯಾರಿ
ಮಾಡಿಕೊಂಡು ಕೆಲಸ ಮುಂದುವರೆಸಿ.

ವೃಶ್ಚಿಕ
ಇಡೀ ದಿನ ಮನೆಯಲ್ಲೇ ಉಳಿಯುವ
ಅನಿವಾರ್ಯತೆ ಉಂಟಾಗಲಿದೆ. ಸಾಹಿತ್ಯದಲ್ಲಿ
ಆಸಕ್ತಿ ಉಂಟಾಗಲಿದೆ. ಖರ್ಚು ಹೆಚ್ಚಾಗಲಿದೆ. 

ಧನುಸ್ಸು
ದೊಡ್ಡ ವ್ಯಕ್ತಿಗಳ ಸಹಕಾರದಿಂದ ನಿಮ್ಮ ಕೆಲಸ
ಸುಲಲಿತವಾಗಿ ನೆರವೇರಲಿದೆ. ಮತ್ತೊಬ್ಬರ
ಮನಓಲೈಸಲು ಪರಿತಪಿಸಲಿದ್ದೀರಿ.

ಮಕರ
ಸಹೋದ್ಯೋಗಿಗಳ ಸಹಕಾರದಿಂದ ಹಳೆಯ
ಸಾಲಗಳು ತೀರಲಿವೆ. ತಂದೆಯ ಆರೋಗ್ಯ
ದಲ್ಲಿ ಚೇತರಿಕೆ ಕಂಡುಬರಲಿದೆ. ತಾಳ್ಮೆ ಇರಲಿ.

ಕುಂಭ
ಬೆಳಿಗ್ಗೆಯಿಂದಲೇ ನಿಮ್ಮಲ್ಲಿನ ಉತ್ಸಾಹ
ಇಮ್ಮಡಿಗೊಳ್ಳಲಿದೆ. ನಗರ ಪ್ರದೇಶಗಳಿಗೆ
ತೆರಳಲು ಸಿದ್ಧತೆ ಮಾಡಿಕೊಳ್ಳಲಿದ್ದೀರಿ.

ಮೀನ 
ನಿಮಗೆ ತೊಂದರೆ ನೀಡುವ ಜನ ಇಂದು
ನಿಮ್ಮಿಂದ ದೂರಕ್ಕೆ ಹೋಗಲಿದ್ದಾರೆ. ಚಿಂತೆ
ಯಲ್ಲಿಯೇ ಇಡೀ ದಿನ ಕಳೆಯಬೇಕಾದೀತು