ಈ ರಾಶಿ ಹೆಚ್ಚಿನ ಮಟ್ಟದ ಧನಲಾಭದ ದಿನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Jan 2019, 6:51 AM IST
Daily Bhavishya 5 January 2019
Highlights

ಈ ರಾಶಿ ಹೆಚ್ಚಿನ ಮಟ್ಟದ ಧನಲಾಭದ ದಿನ

ಈ ರಾಶಿ ಹೆಚ್ಚಿನ ಮಟ್ಟದ ಧನಲಾಭದ ದಿನ

ಮೇಷ
ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಸರಿ
ಯಾಗಿ ವಿವೇಚನೆ ಮಾಡಿ ನಿರ್ಧಾರ ಕೈಗೊಳ್ಳಿ.
ನಿಮ್ಮಿಂದ ಇತರರು ಖುಷಿಯಾಗಲಿದ್ದಾರೆ.

ವೃಷಭ
ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ
ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ
ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ.

ಮಿಥುನ
ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು
ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆ
ಯಿಂದ ಇರಿ. ಮಾತಿಗಿಂತ ಮೌನ ಲೇಸು.

ಕಟಕ
ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ
ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ.
ನೇರ, ನಿಷ್ಠೂರವಾಗಿ ನಡೆದುಕೊಳ್ಳಿ.

ಸಿಂಹ
ರಾಜಕೀಯ ಪ್ರಗತಿಗೆ ಪೂರಕವಾಗಿ ಇಂದು
ಕೆಲವು ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ
ಬರಲಿವೆ. ಮನೆಯಲ್ಲಿ ಸಂತಸ ಹೆಚ್ಚಲಿದೆ. 

ಕನ್ಯಾ
ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ
ಇರಲಿದ್ದೀರಿ. ತಾಯಿಯ ಸಹಕಾರದಿಂದ
ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ತುಲಾ 
ತಾಳ್ಮೆಯೇ ನಿಮಗೆ ಶುಭದಾಯಕವಾಗಲಿದೆ.
ಸಂಜೆ ವೇಳೆಗೆ ಅಪರಿಚಿತರ ಭೇಟಿಯಾಗಲಿದೆ.
ಅಂದುಕೊಂಡ ಕಾರ್ಯ ನೆರವೇರಲಿದೆ.

ವೃಶ್ಚಿಕ
ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಹೆಚ್ಚು
ವಹಿವಾಟು ನಡೆಯಲಿದೆ. ಕೃಷಿಕರಿಗೆ ಲಾಭ.
ದೊಡ್ಡವರ ಮಾತಿಗೆ ಹೆಚ್ಚು ಮಾನ್ಯತೆ ನೀಡಿ. 

ಧನುಸ್ಸು
ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ
ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗ
ಲಿದ್ದೀರಿ. ಅತಿಯಾದ ಕೋಪ ಬೇಡ.

ಮಕರ
ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ.
ಚಳಿಯ ಹೊಡೆತಕ್ಕೆ ಸಿಲುಕಿಕೊಳ್ಳುವಿರಿ.
ದುಡಿಯುವ ವರ್ಗಕ್ಕೆ ಇಂದು ಶುಭ ಫಲ

ಕುಂಭ
ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ.
ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ
ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ 
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ
ತೊಡಗಿಸಿಕೊಳ್ಳಲಿದ್ದೀರಿ. ಆಸ್ತಿ ವಿಚಾರವಾಗಿ
ಗೊಂದಲ ಉಂಟಾಗಲಿದೆ. ಎಚ್ಚರಿಕೆ ಇರಲಿ

loader