ಈ ರಾಶಿಗೆ ಈ ದಿನವು ಅತ್ಯಂತ ಶುಭದಾಯಕ 

ಮೇಷ
ದೂರ ಪ್ರಯಾಣ ಸಾಧ್ಯತೆ. ಸದಾಭಿರುಚಿ,
ಉತ್ತಮ ಆಲೋಚನೆಯಿಂದ ಇತರರಿಗೆ
ಸ್ಫೂರ್ತಿಯಾಗಲಿದ್ದೀರಿ. ಶುಭ ದಿನ.

ವೃಷಭ
ಆರೋಗ್ಯದಲ್ಲಿ ಏರುಪೇರು. ಆಯಾಸದಿಂದ
ಕೂಡಿದ ದಿನವಾಗಲಿದೆ. ವ್ಯಾಯಾಮ ಮಾಡಿ
ಶಾಂತವಾಗಿರಿ. ಮಕ್ಕಳಿಗೆ ಶುಭ ದಿನ.

ಮಿಥುನ
ಅಂದುಕೊಂಡದ್ದು ಈಡೇರಲಿಲ್ಲ ಎಂದು
ಕೊರಗಿದರೆ ಪ್ರಯೋಜನವಿಲ್ಲ. ಆದ ತಪ್ಪನ್ನು
ಸರಿಪಡಿಸಿಕೊಂದು ಮುಂದೆನಡೆಯಿರಿ.

ಕಟಕ
ದಿನದ ಆರಂಭದಲ್ಲೇ ಕೆಲ ವಿಚಾರಗಳಲ್ಲಿ
ಪೆಟ್ಟು ತಿನ್ನಲಿದ್ದೀರಿ. ಹಣಕಾಸಿನ ವಿಚಾರದಲ್ಲಿ
ಎಚ್ಚರ ಇರಲಿ. ಎಲ್ಲರನ್ನೂ ನಂಬಬೇಡಿ.

ಸಿಂಹ
ಕೆಲವೊಂದು ವಿಷಯ, ವಿಚಾರಗಳಲ್ಲಿ
ಮೀನಮೇಷ ಮಾಡದಿರಿ. ಬಂದದ್ದು ಬರಲಿ
ಎಂದು ಧೈರ್ಯದಿಂದ ಎದುರಿಸಿ.

ಕನ್ಯಾ
ಕೂಲಿ ಕಾರ್ಮಿಕರಲ್ಲಿ ಹೆಚ್ಚಿನ ಆದಾಯ.
ಉದ್ಯಮಿಗಳಿಗೆ ಕೊಂಚ ಏರುಪೇರಾಗಲಿದೆ.
ಯಾವುದೇ ನಿರ್ಧಾರಕ್ಕೂ ಮುನ್ನ ಯೋಚಿಸಿ.

ತುಲಾ
ಬೇಡದ ಮಾತುಗಳಿಗೆ ತಲೆಕೆಡಿಸಿಕೊಂಡು
ಕುಳಿತರೆ ನಿಮ್ಮ ನೆಮ್ಮದಿ ಹಾಳು. ಹಾಗಾಗಿ ಒಳ್ಳೆ
ತುಲಾ ವಿಚಾರಗಳನ್ನು ಚರ್ಚಿಸಿ ನೆಮ್ಮದಿಯಾಗಿರಿ.

ವೃಶ್ಚಿಕ
ನಿಮ್ಮ ಶ್ರಮ ಹಾಗೂ ಪ್ರಯತ್ನಕ್ಕೆ
ಮುಂದೊಂದು ದಿನ ಜಯ ಸಿಗಲಿದೆ. ಎಲ್ಲವೂ
ಸುಸೂತ್ರವಾಗಿ ನೆರವೇರಲಿದೆ ಚಿಂತೆ ಬೇಡ. 

ಧನಸ್ಸು
ನಿಮ್ಮ ಮಾತಿನ ಪ್ರಭಾವದಿಂದ ಕೆಲವರಲ್ಲಿ
ಬದಲಾವಣೆ ಸಾಧ್ಯತೆ. ಮಕ್ಕಳ ಓದಿನಲ್ಲಿ
ಉತ್ತಮ ಬೆಳವಣಿಗೆ. ಶುಭ ದಿನ.

ಮಕರ
ಉದ್ಯೋಗಾವಕಾಶ ಲಭಿಸಲಿದೆ. ಹೊಸ ಸ್ನೇಹಿ
ತರ ಪರಿಚಯ. ಕೆಲವರು ನಿಮ್ಮನ್ನು ಹೀಯಾ
ಳಿಸಿದರೂ ಕಿವಿಗೊಡದಿರುವುದು ಲೇಸು.

ಕುಂಭ
ನೀವು ಮಾಡಿದ ಕೆಲಸಗಳನ್ನು ಮೆಚ್ಚಿ
ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.
ಉತ್ತಮ ನಡತೆಯೇ ನಿಮ್ಮ ಅಸ್ತ್ರವಾಗಲಿದೆ.

ಮೀನ
ನಿಮ್ಮ ಉತ್ತಮ ನಡತೆ, ನುಡಿ, ಕಾರ್ಯದಿಂದ
ಮುಂದಿನ ದಿನಗಳಲ್ಲಿ ಒಳ್ಳೆ ರೀತಿಯಲ್ಲಿ ಜಯ
ಸಿಗಲಿದೆ. ಎಲ್ಲರ ಗೌರವಕ್ಕೆ ಪಾತ್ರರಾಗಲಿದ್ದೀರಿ.