ಈ ರಾಶಿಗೆ ಬಯಸಿದ ಭಾಗ್ಯ ಇಂದು ನಿಮ್ಮ ಪಾಲಿಗೆ ಇದೆ

ಮೇಷ
ಕೈಗೆತ್ತಿಕೊಂಡ ಕೆಲಸಗಳು ಆರಂಭದಲ್ಲಿ
ವಿಫಲವಾದರೂ ಸಂಜೆ ವೇಳೆಗೆ ಮುಕ್ತಾಯ
ವಾಗಲಿವೆ. ಅಪ್ಪ, ಅಮ್ಮನ ಮಾತು ಕೇಳಿ.

ವೃಷಭ
ಸ್ನೇಹಿತರೊಂದಿಗೆ ದೂರದ ಪ್ರವಾಸ
ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಹೆಚ್ಚು ಮಾತು ಒಳ್ಳೆಯದ್ದಲ್ಲ. ಮೌನವಾಗಿರಿ.

ಮಿಥುನ
ನಿಮ್ಮ ಬಹು ಕಾಲದ ಕುತೂಹಲ ಇಂದು
ತಣಿಯಲಿದೆ. ಮನಸ್ಸಿಗೆ ಬಂದ ಹಾಗೆ ಖರ್ಚು
ಮಾಡುವುದು ಬೇಡ. ನಿರೀಕ್ಷೆ ಹುಸಿಯಾಗಲಿದೆ.

ಕಟಕ
ಆಪ್ತ ಸ್ನೇಹಿತೆಯ ಭೇಟಿಯಾಗಲಿದ್ದೀರಿ.
ಕುಟುಂಬ ಸದಸ್ಯರೊಂದಿಗೆ ಇಡೀ ದಿನ
ಕಳೆಯಲಿದ್ದೀರಿ. ಮಕ್ಕಳ ಆರೋಗ್ಯ ವೃದ್ಧಿ.

ಸಿಂಹ
ಕೆಲಸದ ಒತ್ತಡದಿಂದ ಹೊರಗೆ ಬರುವುದಕ್ಕೆ
ಇಂದು ಹೆಣಗಾಡಲಿದ್ದೀರಿ. ಮಾತಿಗಿಂತ
ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. 

ಕನ್ಯಾ
ನಿಮ್ಮನ್ನು ಗೌರವದಿಂದ ಕಾಣುವವರ ಸಂಖ್ಯೆ
ಹೆಚ್ಚಾಗಲಿದೆ. ಬಯಸಿದ ಭಾಗ್ಯ ಇಂದು ನಿಮ್ಮ
ಪಾಲಿಗೆ ಇದೆ. ಆದಾಯ ಹೆಚ್ಚಾಗಲಿದೆ.

ತುಲಾ 
ನಿಮ್ಮ ಆಪ್ತ ವಲಯದಲ್ಲಿ ಇರುವ ವ್ಯಕ್ತಿಗಳ
ಬಗ್ಗೆ ಎಚ್ಚರಿಕೆಯಿಂದ ಇರಿ. ಧರ್ಮ
ಕಾರ್ಯಗಳಲ್ಲಿ ಮನಸಾರೆ ತೊಡಗಿಕೊಳ್ಳುವಿರಿ.

ವೃಶ್ಚಿಕ
ಕೊಟ್ಟ ಸಾಲಗಳನ್ನು ವಾಪಸ್ ಪಡೆಯಲು
ಸಾಕಷ್ಟು ಸರ್ಕಸ್ ಮಾಡಬೇಕಾದೀತು. ನಿಮ್ಮ
ಮಾತಿಗೆ ಇಂದು ಹೆಚ್ಚು ಬೆಲೆ ಬರಲಿದೆ. 

ಧನುಸ್ಸು
ಕುಟುಂಬಸ್ಥರ ಆರೋಗ್ಯದಲ್ಲಿ ಸುಧಾರಣೆ
ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ
ಹೆಚ್ಚಿನ ನಿಗಾ ವಹಿಸಲಿದ್ದೀರಿ. ಋಣ ತೀರಲಿದೆ.

ಮಕರ
ನಿಮ್ಮ ಕಷ್ಟಗಳು ಮತ್ತೊಬ್ಬರ ಮುಂದೆ
ಮಂಡಿಯೂರುವಂತೆ ಮಾಡುತ್ತವೆ. ನಿಮ್ಮ
ಸಹಾಯಕ್ಕೆ ಸಾಕಷ್ಟು ಸ್ನೇಹಿತರು ನಿಲ್ಲಲಿದ್ದಾರೆ.

ಕುಂಭ
ಮಕ್ಕಳ ಭವಿಷ್ಯಕ್ಕಾಗಿ ದೀರ್ಘಾವಧಿ
ಉಳಿತಾಯಕ್ಕೆ ಮುಂದಾಗಲಿದ್ದೀರಿ. ನಿಮ್ಮ
ಗೆಳೆಯರ ಸಮಸ್ಯೆಗೆ ಇಂದು ನೆರವಾಗಲಿದ್ದೀರಿ.

ಮೀನ 
ಯಾರದೋ ಲಾಭಕ್ಕೆ ನೀವು ಬೆವರು
ಹರಿಸಬೇಕಾದೀತು. ಸಮಯಕ್ಕೆ ಸರಿಯಾಗಿ
ಕೆಲಸ ಕಾರ್ಯ ಮುಗಿಸಿಕೊಳ್ಳಿ. ಶುಭಫಲ.