Asianet Suvarna News Asianet Suvarna News

ಮೀನ ರಾಶಿಯವರ ಬುದ್ಧಿ ಕೈಯಲ್ಲಿದ್ದರೆ ಒಳಿತು...ಉಳಿದ ರಾಶಿ ಫಲ ಹೇಗಿದೆ?

ಯಮ ಬಿದಿಗೆಯ ಈ ಶುಭ ದಿನದಂದು ಯಾರಿಗೆ ಏನು ಲಾಭ? ಯಾರ ರಾಶಿ ಭವಿಷ್ಯ ಹೇಗಿದೆ? ನೋಡಿ ಇಂದಿನ ರಾಶಿ ಫಲ..

Daily Bhavishya 30 October 2019
Author
Bengaluru, First Published Oct 30, 2019, 7:12 AM IST
  • Facebook
  • Twitter
  • Whatsapp

ಮೇಷ: ಮಾತಿನಲ್ಲಿಯೇ ಮರಳು ಮಾಡುವ ಜನರಿಂದ ಅಂತರ ಕಾಯ್ದುಕೊಳ್ಳುವುದು ಒಳಿತು. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.

ವೃಷಭ: ನಿಮ್ಮ ಇಷ್ಟಾರ್ಥಗಳು ಇಂದು ಈಡೇರಲಿವೆ. ಬಾಯಿ ಚಪಲಕ್ಕೆ ಬಿದ್ದು ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳದಿರಿ. ಧನಾಗಮನವಾಗಲಿದೆ.

ಮಿಥುನ: ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಕೆಲಸದ ಹೊರೆ ಹೆಚ್ಚಾಗಲಿದೆ. ಉತ್ಸಾಹ ಹಿಮ್ಮಡಿಗೊಳ್ಳಲಿದೆ.

ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ : ವಾರ ಭವಿಷ್ಯ

ಕಟಕ: ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲಿದ್ದೀರಿ. ತಂದೆಯ ಮಾತಿನಿಂದ ನೋವಾದರೂ ಅದು ನಿಮಗೆ ಒಳಿತು ಉಂಟು ಮಾಡಲಿದೆ.

ಸಿಂಹ: ಒಳ್ಳೆಯವರ ಸ್ನೇಹ ಯಾವಾಗಲೂ ಒಳ್ಳೆಯ ಪ್ರತಿಫಲವನ್ನೇ ನೀಡುತ್ತದೆ. ನಿಮಗೆ ಒಪ್ಪಿಸಿದ ಜವಾಬ್ದಾರಿಗಳನ್ನು ಶೀಘ್ರವಾಗಿ ಮುಗಿಸಿ.

ಕನ್ಯಾ: ಕಣ್ಣಿಗೆ ಕಂಡದ್ದೆಲ್ಲವೂ ಬೇಕು ಎನ್ನುವ ಹಂಬಲ ಬೇಡ. ನಿಮ್ಮದಲ್ಲದ ವಸ್ತುವಿನ ಬಗ್ಗೆ ಮೋಹ ಸಲ್ಲದು. ವೃತ್ತಿಯಲ್ಲಿ ಪ್ರಗತಿ ಸಾಧ್ಯವಾಗಲಿದೆ.

ತುಲಾ: ಪ್ರಾಮಾಣಿಕತೆಯೇ ನಿಮಗೆ ಹೊಸ ಅವಕಾಶಗಳನ್ನು ತಂದುಕೊಡಲಿದೆ. ಗಳಿಸಿದ ಹಣದಲ್ಲಿ ಒಂದಂಶವನ್ನು ಉಳಿತಾಯಕ್ಕೆ ಮೀಸಲಿಡಿ.

ವೃಶ್ಚಿಕ: ಸಗಟು ವ್ಯಾಪಾರಿಗಳಿಗೆ ಇಂದು ಒಳ್ಳೆಯ ಲಾಭ ದೊರೆಯಲಿದೆ. ಮಾನಸಿಕವಾಗಿ ಹೆಚ್ಚು ಶಕ್ತಿವಂತರಾಗುವಿರಿ. ಧೈರ್ಯ ಹೆಚ್ಚಾಗಲಿದೆ.

ಧನಸ್ಸು: ಹೊಸ ಕ್ಷೇತ್ರಗಳ ಪರಿಚಯವಾಗಲಿದೆ. ನಿಮ್ಮ ಪಾಡಿಗೆ ನೀವು ಇರುವುದೂ ನೆಮ್ಮದಿ ತಂದುಕೊಡುತ್ತದೆ. ಲಾಭದಲ್ಲಿ ಇಳಿಕೆ.

ಮಕರ: ಕೆಲಸದಲ್ಲಿ ಬದಲಾವಣೆ ಸಾಧ್ಯತೆ. ಯಾವುದೇ ವಿಚಾರದ ಬಗ್ಗೆ ಮಾತನಾಡುವ ಮೊದಲು ಸರಿಯಾಗಿ ಆಲೋಚನೆ ಮಾಡುವುದು ಒಳಿತು.

ಕುಂಭ: ಸಾಧನೆ ಎನ್ನುವುದು ಹಂತ ಹಂತವಾಗಿಮಾಡುವುದು. ಅವಸರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳುವುದು ಬೇಡ. ತಾಳ್ಮೆ ಇರಲಿ.

ಮೀನ: ಬಲ್ಲವರಿಂದ ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಿ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ. ಶುಭ ಫಲ.

 

Follow Us:
Download App:
  • android
  • ios