Asianet Suvarna News Asianet Suvarna News

ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ : ವಾರ ಭವಿಷ್ಯ

ದೀಪಗಳ ಹಬ್ಬ ನಿಮ್ಮಬಾಳಲ್ಲಿಯೂ ಬೆಳಕಾಗಲಿ. ದೀಪಗಳ ಹಬ್ಬ ದೀಪಾವಳಿಯ ಈ ವಾರ ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ 

Weekly Horoscope 27 october 2019
Author
Bengaluru, First Published Oct 27, 2019, 7:21 AM IST

ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ : ವಾರ ಭವಿಷ್ಯ


ಮೇಷ
ಬೇರೆಯವರನ್ನು ಮೆಚ್ಚಿಸಲೆಂದು ಯಾವ ಕೆಲಸ ವನ್ನೂ ಮಾಡದಿರಿ. ನಿಮ್ಮ ಮನಸ್ಸಿಗೆ ಸರಿ ಎಂದು ತೋರಿದರಷ್ಟೇ ಮುಂದುವರಿಯಿರಿ. 

ವೃಷಭ
ನಿಮ್ಮೆದುರು ಬರುವ ಸವಾಲುಗಳನ್ನು ಧೈರ್ಯದಿಂದಲೇ ಎದುರಿಸಿ. ಆಗ ಕಷ್ಟಗಳು ಬಂದರೆ ಹೇಗೆ ಬಗೆಹರಿಸಿಕೊಳ್ಳಬಹುದು ಎಂದು ನಿಮಗೇ ಅನ್ನಿಸಲಿದೆ

ಮಿಥುನ
ಕೆಲವೊಮ್ಮೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅನಿವಾರ್ಯ. ಈಗ ಬೇಸರ ಮೂಡಿಸಿದರೂ, ಮುಂದಿನ ದಿನಗಳಲ್ಲಿ ಒಳಿತಾಗಲಿದೆ

ಕಟಕ
ಬದುಕಲ್ಲಿ ಇನ್ನಬ್ಬರ ಅನುಭವ ಕೇಳಿ ನಾವು ಕಲಿಯುವುದಕ್ಕಿಂತೆ ನಮ್ಮ ಅನುಭವಗಳೇ ಕಲಿಸುವ ಪಾಠ ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ

ಸಿಂಹ
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಂತೆ. ಯಾರೋ ಕಿತ್ತಾಡುವಾಗ ನೀವು ಮೂಗು ತೂರಿಸುವುದು. ಹಾಗೊಮ್ಮೆ ಮುಂದಾದಲ್ಲಿ ನಿಮಗೇ ಒಳಿತಲ್ಲ

ಕನ್ಯಾ
ಆರ್ಥಿಕ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ ಹಾಗೂ ವಾರಾಂತ್ಯದಲ್ಲಿ ಲಾಭ ತಂದುಕೊಡ ಲಿದೆ. ಆಮೀಷಗಳಿಂದ ದೂರ ಇರಿ. 

ತುಲಾ
ಒಬ್ಬರನ್ನು ಇನ್ನೊಬ್ಬರನ್ನು ಹೋಲಿಸಿ ಮಾತನಾ ಡದಿರಿ. ಅದರಿಂದ ಅವರ ಮನಸ್ಸಿಗೆ ಬೇಸರ ಮೂಡಿಸಬಹುದು. 

ವೃಶ್ಚಿಕ
ಒಳ್ಳೆಯ ಕೆಲಸಗಳಿಗೆ ಅಡೆತಡೆಗಳು ಬರುವುದು ಸಹಜ. ಅದನ್ನು ಸೂಕ್ತವಾಗಿ ಬುದ್ಧಿ ಉಪಯೋಗಿಸಿ ಸರಿಪಡಿಸಿಕೊಳ್ಳಿ. ಕಲ್ಲಿನ ಹಾದಿ...

ಧನಸ್ಸು
ಕೆಲ ವಿಚಾರಗಳಿಗೆ ಈಗಾಗಲೇ ಮುಂದಡಿಯಿ ಟ್ಟಾಗಿದೆ. ಮತ್ತೆ ಹಿಂದೆ ನೋಡುವ ಪ್ರಶ್ನೆ ನಿಮ್ಮ ಮುಂದಿಲ್ಲ. ...

ಮಕರ
ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ

ಕುಂಭ
ನಿಮ್ಮ ಸನ್ನಡತೆ ಹಾಗೂ ಒಳ್ಳೆಯ ಮಾತುಗಳು ಇನ್ನೊಬ್ಬರಿಗೆ ಪ್ರೇರಣೆಯಾಗಲಿದೆ. ಅನಿರೀಕ್ಷಿತ ಘಟನೆಗಳು ನಡೆಯಲಿದೆ

ಮೀನ
ಸಣ್ಣ ವಿಚಾರಗಳಲ್ಲಿ ಹೇರಳವಾದ ಖುಷಿ ಇರುವಾಗ ಯಾವುದೋ ಮನಸ್ಥಾಪ ಇಟ್ಟು ಕೊಂಡು ದೊಡ್ಡ ವಿಷಯ ಮಾಡಿ ಹಟ ಸಾಧಿಸುವುದು ಸರಿಯಲ್ಲ

Follow Us:
Download App:
  • android
  • ios